rtgh

ಗ್ರಾಮ ಪಂಚಾಯಿತಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ : 3 ಕೋಟಿ ಮನೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ

3-crore-houses-have-been-approved-in-gram-panchayat

ನಮಸ್ಕಾರ ಸ್ನೇಹಿತರೆ ಗ್ರಾಮ ಪಂಚಾತಿಯಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ನೆರವನ್ನು ನೀಡುತ್ತದೆ. ಆದರೆ ಈ ಯೋಜನೆಗೆ ಈಗ ಕೇಂದ್ರ ಬಜೆಟ್ ನಲ್ಲಿ ಸಂಬಂಧಿಸಿದಂತೆ ದೊಡ್ಡ ಘೋಷಣೆಯನ್ನು ಮಾಡಲಾಗಿದ್ದು.

3-crore-houses-have-been-approved-in-gram-panchayat
3-crore-houses-have-been-have-in-gram-panchayat

ಈ ಯೋಜನೆ ಅಡಿಯಲ್ಲಿ ಇನ್ನು ಕೋಟಿಗಟ್ಟಲೆ ಮನೆಗಳನ್ನು ಐದು ವರ್ಷಗಳಲ್ಲಿ ನಿರ್ಮಿಸುವ ಯೋಜನೆ ಇದೆ ಹಾಗಾದರೆ ಈ ಯೋಜನೆಯ ಪ್ರಯೋಜನವನ್ನು ಹೇಗೆ ಪಡೆಯಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆ :

ಸ್ವಂತ ಮನೆ ಕಟ್ಟುವಂತಹ ಕನಸನ್ನು ಪ್ರತಿಯೊಬ್ಬರೂ ಕೂಡ ಕಾಣುತ್ತಾರೆ ಅದನ್ನು ಕೆಲವರು ಸಾಧಿಸುತ್ತಾರೆ ಆದರೆ ಕೆಲವರ ಆರ್ಥಿಕ ಸ್ಥಿತಿ ಸ್ವಂತ ಮನೆ ಕಟ್ಟಿಕೊಳ್ಳುವಷ್ಟು ಚೆನ್ನಾಗಿರುವುದಿಲ್ಲ ಅಂತವರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳು ಸಹಕಾರಿಯಾಗಿರುತ್ತದೆ ಅದರಲ್ಲಿ ಇದೀಗ ವಸತಿಗಾಗಿ ಆರ್ಥಿಕ ನೆರವನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದೆ.

ಮುಂದಿನ ಐದು ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಎರಡು ಕೋಟಿ ಹೆಚ್ಚಿನ ವಸತಿ ಘಟಕಗಳನ್ನು ನಿರ್ಮಿಸಲಾಗುತ್ತದೆ.

ಹೊಸ ವಸತಿ ಯೋಜನೆಯನ್ನು ಮಧ್ಯಮ ವರ್ಗದವರಿಗೆ ಬಾಡಿಗೆಗೆ ಅಥವಾ ಚಾಲು ಅಥವಾ ಅನದಿಕೃತ ಪ್ರದೇಶಗಳಲ್ಲಿ ಬಾಡಿಗೆ ವಾಸಿಸುವಂತಹ ಜನರಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ನಿರೀಕ್ಷಿಸಲಾಗಿದ್ದು ದೇಶವು ಈ ಉಪಕ್ರಮಗಳು ಎದುರಿಸುತ್ತಿರುವ ಒಟ್ಟಾರೆ ವಸತಿ ಕೊರತೆಯನ್ನು ನೀಗಿಸಲು ಈ ಯೋಜನೆ ಮೂಲಕ ಗಣನೀಯವಾಗಿ ಸಹಾಯ ಮಾಡುತ್ತದೆ.

ಇದನ್ನು ಓದಿ : ಅಬ್ಬಬ್ಬ ಒಂದೇ ದಿನದಲ್ಲಿ ಚಿನ್ನದ ಬೆಲೆ ಏರಿಕೆ : ಗ್ರಾಹಕರು 10 ಗ್ರಾಂ ಬೆಲೆ ಕೇಳಿ ಶಾಕ್.!

ಎಲ್ಲರಿಗೂ ವಸತಿ ಗುರಿ :

ಎಲ್ಲರಿಗೂ ವಸತಿ ಗುರಿಯನ್ನು ಸಾಧಿಸಲು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ಅರ್ಹ ಗ್ರಾಮೀಣ ಕುಟುಂಬಗಳಿಗೆ ಸಹಾಯ ಮಾಡಲು ಪಿಎಂ ಎಜಿವೈಜಿ ಅನ್ನು 2016 ಏಪ್ರಿಲ್ ಒಂದನೇ ತಾರೀಖಿನಂದು ಜಾರಿಗೆ ತಂದಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ಮೂಲಭೂತ ಸೌಕರ್ಯಗಳು ಒಂದಿಗೆ ಮಾರ್ಚ್ 2019 24ರ ಒಳಗಾಗಿ 2.95 ಕೋಟಿ ಪಕ್ಕ ಮನೆಗಳನ್ನು ನಿರ್ಮಿಸುವುದು ಮುಖ್ಯ ಗುರಿಯಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ :

ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವ ನಿರ್ಮಲ ಸೀತಾರಾಮನ್ ರವರು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಅದರಲ್ಲಿಯೂ ಮುಖ್ಯವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹೆಸರನ್ನು ಕೂಡ ಸೇವಿಸಲಾಗಿದ್ದು ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ ಕೋವಿಡ್ ನಿಂದಾಗಿ ಉದ್ಭವಿಸುವ ಸವಾಲುಗಳ ಹೊರತಾಗಿಯೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಅನುಷ್ಠಾನವು ಮುಂದುವರೆದಿದೆ ಮತ್ತು 3 ಕೋಟಿ ಮನೆಗಳ ಗುರಿಯನ್ನು ಈ ಯೋಜನೆ ಮೂಲಕ ಸಾಧಿಸುವ ಸಮೀಪದಲ್ಲಿದ್ದೇವೆ.

ಕುಟುಂಬಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಉದ್ಭವಿಸುವ ಅವಶ್ಯಕತೆ ಇಂದಾಗಿ ಇದನ್ನು ಪೂರ್ಣಗೊಳಿಸಲು ಎರಡು ಕೋಟಿ ಹೆಚ್ಚುವರಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಮುಂದಿನ ಐದು ವರ್ಷಗಳಲ್ಲಿ ಆರಂಭಿಸಲಾಗುತ್ತದೆ. ಎಂದು ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಘೋಷಣೆ ಮಾಡಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಬೇಕಾಗುವ ದಾಖಲೆಗಳು :

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಆ ದಾಖಲೆಗಳೆಂದರೆ,

  1. ಆಧಾರ್ ಕಾರ್ಡ್
  2. ವಿಳಾಸದ ಪುರಾವೆ
  3. ಆದಾಯ ಪ್ರಮಾಣ ಪತ್ರ
  4. ಆಸ್ತಿಯ ಖರೀದಿಯ ಪುರಾವೆ
    ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ಹೊಂದಿರಬೇಕು.

ಅರ್ಹತೆಗಳು :

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಈ ವರ್ಗದ ಜನರು ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

  1. ಪರಿಶಿಷ್ಟ ಜಾತಿ
  2. ಪರಿಶಿಷ್ಟ ಪಂಗಡ
  3. ಆರ್ಥಿಕವಾಗಿ ದುರ್ಬಲವಾಗಿರುವ ವಿಭಾಗ
  4. ಕಡಿಮೆ ಆದಾಯದ ಗುಂಪು ಜನಸಂಖ್ಯೆ
  5. ಮಧ್ಯಮ ಆದಾಯ ಗುಂಪು ಒಂದು
  6. ಮಧ್ಯಮ ಆದಾಯ ಗುಂಪು ಎರಡು.

ಯೋಜನೆಯ ಮೊತ್ತ :

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರವು ಆರ್ಥಿಕ ನೆರವನ್ನು ನೀಡುತ್ತದೆ. ಇದೀಗ ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಇನ್ನು ಎರಡು ಕೋಟಿ ಮನೆಗಳನ್ನು ನಿರ್ಮಿಸಲು ಮುಂದಾಗಿದೆ. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಶಾಶ್ವತ ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ನೆರವನ್ನು ನೀಡುತ್ತದೆ.

ರೂ. 1,20,000 ಬಯಲು ಸೀಮೆಯಲ್ಲಿ ಮನೆ ಕಟ್ಟಿಕೊಳ್ಳಲು ಹಾಗೂ ಒಂದು ಲಕ್ಷ ಮೂವತ್ತು ಸಾವಿರ ಗುಡ್ಡಗಾಡು ಪ್ರದೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸರ್ಕಾರದಿಂದ ಬಂದಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಸುಮಾರು ಮೂರು ಕೋಟಿ ಪಕ್ಕ ಮನೆಗಳನ್ನು ನಿರ್ಮಿಸಲಾಗಿದೆ ಅಥವಾ ನಿರ್ಮಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಆನ್ಲೈನ ಅಥವಾ ಆಫ್ಲೈನ್ ಮೂಲಕ ಆನ್ಲೈನ್ ನಲ್ಲಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಪಂಚಾಯಿತಿ ಕಟ್ಟಡಕ್ಕೆ ಭೇಟಿ ನೀಡಿ ಪಂಚಾಯಿತಿ ಅಧಿಕಾರಿಯ ಸಹಾಯದಿಂದ ಅರ್ಜಿ ಸಲ್ಲಿಸಬಹುದು.

ಅನುದಾನ ಬಿಡುಗಡೆ :

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಕಳೆದ 5 ವರ್ಷಗಳಲ್ಲಿ 2018-19 ರಿಂದ 2022 23ರ ಹಣಕಾಸು ವರ್ಷದಲ್ಲಿ ಮನೆಗಳ ನಿರ್ಮಾಣಕ್ಕೆ ಕೇಂದ್ರಾಡಳಿತ ಪ್ರದೇಶಗಳಿಗೆ ಹಾಗೂ ರಾಜ್ಯಗಳಿಗೆ ಬಿಡುಗಡೆ ಮಾಡಲಾದ ನಿಧಿಯ ಮೊತ್ತವು 160853.38 ಕೋಟಿಗಳಷ್ಟು ಇತ್ತು ಡಿಸೆಂಬರ್ ನಲ್ಲಿ ಇದರ ಬಗ್ಗೆ ಅಧಿಕೃತವಾಗಿ ಹೇಳಲಾಗಿದೆ.

ಹೀಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೂ ಹಾಗೂ ನಗರ ಪ್ರದೇಶದ ಜನರಿಗೂ ಕೂಡ ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಆರ್ಥಿಕ ನೆರವನ್ನು ನೀಡುತ್ತಿದ್ದು ಈ ಯೋಜನೆಯ ಪ್ರಯೋಜನವನ್ನು ಸ್ವಂತ ಮನೆ ಇಲ್ಲದವರು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *