Essay: ಪ್ರಬಂಧ ಸ್ವರ್ಧೆಯಲ್ಲಿ ಭಾಗವಹಿಸಿ ₹31,000 ಗೆಲ್ಲಿ…!

ಕರ್ನಾಟಕ ಸರ್ಕಾರವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿಯನ್ನು ಸ್ಮರಿಸುತ್ತಾ ರಾಜ್ಯದ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ/ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗಾಗಿ “ಬಾಪೂಜಿ ಪ್ರಬಂಧ ಸ್ಪರ್ಧೆ 2025” ಅನ್ನು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಆಯೋಜಿಸಿದೆ.

Bapuji prabandha sparde 2025

ಈ ಸ್ಪರ್ಧೆಯ ಮುಖ್ಯ ಉದ್ದೇಶವೆಂದರೆ – ಗಾಂಧೀಜಿಯವರ ಜೀವನಪರಂಪರೆ, ಅವರ ಅಹಿಂಸಾ ತತ್ವ, ಸತ್ಯಾಗ್ರಹ, ಸರಳತೆ ಮತ್ತು ನೈತಿಕ ಮೌಲ್ಯಗಳು, ಅಸ್ಪೃಶ್ಯತೆ ನಿರ್ಮೂಲನೆಗೆ ಅವರು ನೀಡಿದ ಒತ್ತು, ಗ್ರಾಮಸ್ವರಾಜ್ಯದ ಕಲ್ಪನೆ ಹಾಗೂ ಸಮಾಜದಲ್ಲಿ ಸಮಾನತೆ ಮತ್ತು ಬಾಂಧವ್ಯವನ್ನು ಬೆಳೆಸುವಲ್ಲಿ ಅವರ ದೃಷ್ಟಿಕೋನವನ್ನು ಇಂದಿನ ಯುವಕರಿಗೆ ಪರಿಚಯಿಸುವುದು. ಈ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ಮೌಲ್ಯಾಧಾರಿತ ಚಿಂತನೆ, ಸಾಮಾಜಿಕ ಹೊಣೆಗಾರಿಕೆ ಹಾಗೂ ಸೃಜನಾತ್ಮಕ ಅಭಿವ್ಯಕ್ತಿ ಶಕ್ತಿಯನ್ನು ಉತ್ತೇಜಿಸುವುದೇ ಉದ್ದೇಶ.

ಸ್ಪರ್ಧೆಯ ವಿಭಾಗಗಳು ಮತ್ತು ಪ್ರಬಂಧ ವಿಷಯಗಳು

1. ಪ್ರೌಢಶಾಲಾ ವಿಭಾಗ (High School) – 700 ರಿಂದ 800 ಪದಗಳು

  • ಸ್ವಚ್ಚತೆಯ ಪಾಠ – ಗಾಂಧೀಜಿಯವರ ಸಂದೇಶ
  • ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿಯವರ ಪಾತ್ರ
  • ಗಾಂಧೀಜಿಯವರ ಸ್ವಾತಂತ್ರ್ಯದ ಕನಸು – ನನ್ನ ಕಲ್ಪನೆ

2. ಪದವಿ ಪೂರ್ವ ವಿಭಾಗ (PUC) – 900 ರಿಂದ 1000 ಪದಗಳು

  • ಅಸ್ಪೃಶ್ಯತೆ ನಿವಾರಣೆಯಲ್ಲಿ ಗಾಂಧೀಜಿಯವರ ಹೋರಾಟ
  • ಇಂದಿನ ಸಮಾಜದಲ್ಲಿ ಸರ್ವೋದಯ ಮತ್ತು ಅಂತ್ಯೋದಯದ ಪ್ರಾಸಂಗಿಕತೆ
  • ಬದಲಾವಣೆ ನನ್ನಿಂದಲೇ ಆರಂಭ – ಗಾಂಧೀಜಿಯವರ ಪಾಠ

3. ಪದವಿ ಮತ್ತು ಸ್ನಾತಕೋತ್ತರ ವಿಭಾಗ (UG & PG) – 1400 ರಿಂದ 1500 ಪದಗಳು

  • ಗಾಂಧೀಜಿ ಕಂಡ ನ್ಯಾಯಸಮ್ಮತ ರಾಜಕೀಯ ವ್ಯವಸ್ಥೆ
  • ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ – ತತ್ವಗಳ ಹೋಲಿಕೆ
  • ಮೌಲ್ಯಾಧಾರಿತ ನಾಯಕತ್ವ ಹಾಗೂ ನೈತಿಕ ರಾಜಕಾರಣ – ಯುವಕರಿಗೆ ಗಾಂಧೀಜಿಯವರ ಪಾಠ

ಬಹುಮಾನಗಳು

ಜಿಲ್ಲಾ ಮಟ್ಟದ ಬಹುಮಾನಗಳು

  • ಪ್ರಥಮ ಬಹುಮಾನ: ₹3,000/-
  • ದ್ವಿತೀಯ ಬಹುಮಾನ: ₹2,000/-
  • ತೃತೀಯ ಬಹುಮಾನ: ₹1,000/-

ರಾಜ್ಯಮಟ್ಟದ ಬಹುಮಾನಗಳು

  • ಪ್ರಥಮ ಬಹುಮಾನ: ₹31,000/-
  • ದ್ವಿತೀಯ ಬಹುಮಾನ: ₹21,000/-
  • ತೃತೀಯ ಬಹುಮಾನ: ₹11,000/-

ಪ್ರಮುಖ ದಿನಾಂಕಗಳು

  • ಮುಕ್ತಾಯ: 06-09-2025
  • ವಿಜೇತರ ವಿವರಗಳನ್ನು ಕಳುಹಿಸುವ ಕೊನೆಯ ದಿನಾಂಕ: 12-09-2025
  • ರಾಜ್ಯಮಟ್ಟದ ಫಲಿತಾಂಶ: ನಂತರ ಪ್ರಕಟಿಸಲಾಗುವುದು
  • ಗೌರವ ಸಮಾರಂಭ: 02-10-2025 (ಗಾಂಧೀ ಜಯಂತಿ ದಿನ)

ನಿಯಮಗಳು ಮತ್ತು ಮಾರ್ಗಸೂಚಿಗಳು

  • ಪ್ರಬಂಧವು ಸಂಪೂರ್ಣವಾಗಿ ಸ್ಪರ್ಧಿಕನ ಸ್ವರಚಿತವಾಗಿರಬೇಕು.
  • ಸ್ಪರ್ಧಾ ಸ್ಥಳದಲ್ಲಿಯೇ ಶುದ್ಧ ಕೈಬರಹದಲ್ಲಿ ಬರೆಯಬೇಕು.
  • ಗ್ರಂಥಗಳು, ಲೇಖನಗಳು ಅಥವಾ ಇತರ ಮೂಲಾಧಾರಗಳನ್ನು ಬಳಸಿದ್ದರೆ ಅವುಗಳ ವಿವರವನ್ನು ಪ್ರಬಂಧದ ಕೊನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು.
  • ಸ್ಪರ್ಧೆ ನಡೆಯುವ ಸ್ಥಳದಲ್ಲಿ ಮೊಬೈಲ್, ಪುಸ್ತಕಗಳು ಅಥವಾ ಇತರ ಸಹಾಯಕ ಸಾಧನಗಳ ಬಳಕೆ ನಿಷಿದ್ಧ.
  • ಪ್ರಬಂಧದಲ್ಲಿ ಸ್ಪರ್ಧಿಕನ ಹೆಸರು, ತರಗತಿ, ವಿದ್ಯಾಸಂಸ್ಥೆಯ ಹೆಸರು ಹಾಗೂ ವಿಳಾಸ ಸ್ಪಷ್ಟವಾಗಿ ನೀಡಬೇಕು.
  • ಈ ಹಿಂದೆ ಪ್ರಕಟವಾದ ಅಥವಾ ಪ್ರಚಾರದಲ್ಲಿರುವ ಪ್ರಬಂಧಗಳನ್ನು ಅಂಗೀಕರಿಸಲಾಗುವುದಿಲ್ಲ.
  • ಆಯ್ಕೆಗೊಂಡ ಪ್ರಬಂಧಗಳನ್ನು ಪ್ರಕಟಿಸುವ ಹಕ್ಕು ಸರ್ಕಾರದ ಇಲಾಖೆಯದಾಗಿರುತ್ತದೆ.
  • ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ಚಿಂತನೆಯ ಆಳತೆ ಹಾಗೂ ಪ್ರಸ್ತುತಿಯ ಸ್ಪಷ್ಟತೆ ಮೂಲಕ ಅಂಕಗಳನ್ನು ಪಡೆಯುತ್ತಾರೆ.

👉 ಈ ಪ್ರಬಂಧ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ಗಾಂಧೀಜಿಯವರ ತತ್ವ, ಮೌಲ್ಯಗಳು ಮತ್ತು ಆದರ್ಶಗಳನ್ನು ಅರಿತು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲಿ ಎಂಬುದೇ ಕರ್ನಾಟಕ ಸರ್ಕಾರದ ಆಶಯ.

Leave a Comment