LPG ಸಿಲಿಂಡರ್ ಬೆಲೆಯಲ್ಲಿ ಭಾರಿ ಕುಸಿತ: ಇಂದಿನಿಂದ ₹200 ಕ್ಕಿಂತ ಹೆಚ್ಚು ದರ ಇಳಿಕೆ

ದೇಶಾದ್ಯಂತ ತೈಲ ಮಾರುಕಟ್ಟೆ ಕಂಪನಿಗಳು (OMCs) ಇಂದಿನಿಂದ (ಆಗಸ್ಟ್ 01) ಜಾರಿಗೆ ಬರುವಂತೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಮಹತ್ವದ ಪರಿಷ್ಕರಣೆ ಮಾಡಿವೆ. ಸಾಲು ಸಾಲು ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಸಾರ್ವಜನಿಕರಿಗೆ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಇದು ಕೊಂಚ ಸಮಾಧಾನ ತಂದಿದೆ.

LPG Price Down

ವಾಣಿಜ್ಯ ಸಿಲಿಂಡರ್ ಬೆಲೆ ಕಡಿತ, ಇ-ಕೆವೈಸಿ (e-KYC) ನಿಯಮಾವಳಿ, ಹೊಸ ಅನಿಲ ಸಂಪರ್ಕ ಹಾಗೂ ಸ್ವಿಗ್ಗಿ ಮೂಲಕ ಡೋರ್-ಸ್ಟೆಪ್ ಡೆಲಿವರಿ ಸೇರಿ ಎಲ್‌ಪಿಜಿ ಮಾರುಕಟ್ಟೆಯಲ್ಲಿ ಆಗಿರುವ ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ:

೧. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ₹200ಕ್ಕೂ ಹೆಚ್ಚು ಕುಸಿತ!

19 ಕೆಜಿ ತೂಕದ ವಾಣಿಜ್ಯ (Commercial) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹200ಕ್ಕೂ ಹೆಚ್ಚು ಕಡಿತಗೊಳಿಸಲಾಗಿದೆ.

  • ದೆಹಲಿ: ₹202 ಇಳಿಕೆಯಾಗಿದ್ದು, ಪ್ರಸ್ತುತ ₹2,728 ಕ್ಕೆ ಲಭ್ಯವಿದೆ.
  • ಕೋಲ್ಕತ್ತಾ: ₹209 ಕಡಿತದೊಂದಿಗೆ ಹೊಸ ಬೆಲೆ ₹2,872.50 ಆಗಿದೆ.
  • ಬೆಂಗಳೂರು: ದರದಲ್ಲಿ ಇಳಿಕೆಯಾಗಿದ್ದು, ಪ್ರಸ್ತುತ ಸರಿಸುಮಾರು ₹2,821 ದರದಲ್ಲಿದೆ.

ಯಾರಿಗೆ ಲಾಭ? ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಧಾಬಾ, ಬೇಕರಿ ಮತ್ತು ಚಹಾ ಅಂಗಡಿ ಮಾಲೀಕರ ದಿನನಿತ್ಯದ ನಿರ್ವಹಣಾ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ.

೨. ಗೃಹಬಳಕೆಯ (14.2 kg) ಎಲ್‌ಪಿಜಿ ಸಿಲಿಂಡರ್ ದರ ಯಥಾವತ್ತು

ಮನೆಗಳಲ್ಲಿ ಅಡುಗೆಗೆ ಬಳಸುವ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪ್ರಮುಖ ನಗರಗಳಲ್ಲಿ ಇಂದಿನ ಗೃಹಬಳಕೆ ಸಿಲಿಂಡರ್ ದರ ಹೀಗಿದೆ:

ನಗರ14.2 ಕೆಜಿ ಗೃಹಬಳಕೆಯ LPG ದರ
ಬೆಂಗಳೂರು (Bengaluru)₹ 944.50
ದೆಹಲಿ (Delhi)₹ 942.00
ಮುಂಬೈ (Mumbai)₹ 941.50
ಚೆನ್ನೈ (Chennai)₹ 957.50
ಕೋಲ್ಕತ್ತಾ (Kolkata)₹ 968.00

೩. ಎಲ್‌ಪಿಜಿ ಸೇವೆಗಳ ಕುರಿತು ಹೊರಡಿಸಲಾದ ಪ್ರಮುಖ ಮಾರ್ಗಸೂಚಿಗಳು

1.೧. e-KYC ಪೂರ್ಣಗೊಳಿಸದಿದ್ದರೆ ಬುಕಿಂಗ್ ಸ್ಥಗಿತ: ಇ-ಕೆವೈಸಿ ಕಡ್ಡಾಯ.

ಸರ್ಕಾರ ಮತ್ತು ಗ್ಯಾಸ್ ಏಜೆನ್ಸಿಗಳ ನಿಯಮದಂತೆ LPG ಗ್ರಾಹಕರು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯ. ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರ ಗ್ಯಾಸ್ ಬುಕಿಂಗ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

2.೨. ಹೊಸ ಗ್ಯಾಸ್ ಸಂಪರ್ಕ ಸುಲಭ: BPCL ಭಾರತ್ ಲೈಟ್ ಜಿಪ್.

ಬಿಪಿಸಿಎಲ್ (BPCL) ಸಂಸ್ಥೆಯು ‘Bharat Light Zip’ ಎಂಬ ನೂತನ ಸೇವೆಯನ್ನು ಆರಂಭಿಸಿದ್ದು, ಹೊಸ ಗ್ಯಾಸ್ ಸಂಪರ್ಕ ಮತ್ತು ಬುಕಿಂಗ್ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಿದೆ. (ಆಗಸ್ಟ್ 15 ರೊಳಗೆ ದೇಶದ 100 ನಗರಗಳಿಗೆ ವಿಸ್ತರಣೆಯಾಗಲಿದೆ).

3.೩. ಸ್ವಿಗ್ಗಿ ಮೂಲಕ ಗ್ಯಾಸ್ ಸಿಲಿಂಡರ್ ಡೆಲಿವರಿ: Swiggy Instamart & HPCL.

ಎಚ್‌ಪಿಸಿಎಲ್ (HPCL) ಸಂಸ್ಥೆಯು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, 10 ಕೆಜಿಯ ‘HP Navya’ ಲೈಟ್‌ವೇಟ್ ಕಾಂಪೋಸಿಟ್ ಸಿಲಿಂಡರ್ ಹಾಗೂ 5 ಕೆಜಿ ಮಿನಿ ಸಿಲಿಂಡರ್‌ಗಳನ್ನು ಅಪ್ಲಿಕೇಶನ್ ಮೂಲಕವೇ ಆರ್ಡರ್ ಮಾಡಿ ಮನೆಬಾಗಿಲಿಗೆ ತರಿಸಿಕೊಳ್ಳಬಹುದು. ಇದು ಬಾಡಿಗೆದಾರರಿಗೆ ಮತ್ತು ಸಣ್ಣ ಕುಟುಂಬಗಳಿಗೆ ಹೇಳಿಮಾಡಿಸಿದಂತಿದೆ.

Leave a Comment