rtgh

RTE ಉಚಿತ ಶಿಕ್ಷಣಕ್ಕೆ ಅರ್ಜಿ ಆರಂಭ.! LKG ಮತ್ತು 1ನೇ ತರಗತಿಗೆ ಇಲ್ಲಿಂದಲೇ ಸೇರಿಸಿ

rte free education

ಹಲೋ ಸ್ನೇಹಿತರೇ, ಸಾಮಾನ್ಯವಾಗಿ ಒಂದು ದೇಶ ಇರಲಿ, ಅಥವಾ ರಾಜ್ಯವೇ ಆಗಿರಲಿ ಉಚಿತ ಶಿಕ್ಷಣ ಮತ್ತು ಆರೋಗ್ಯ ಸಿಕ್ಕರೆ ಸ್ಥಳದಲ್ಲಿ ವಾಸಿಸುವ ಜನರ ಅರ್ಧದಷ್ಟು ಅಭಿವೃದ್ಧಿ ಆದಂತೆ. ಯಾಕೆ ಅಂದ್ರೆ ಭಾರತದಂತಹ ದೇಶದಲ್ಲಿ ಬಡತನ ಅನ್ನೋದು ಇನ್ನೂ ನಿವಾರಣೆ ಆಗದೆ ಇರುವ ಸಮಸ್ಯೆ. ಇಂತಹ ಸಮಸ್ಯೆಯ ಮಧ್ಯೆ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಅಂತ ಅನೇಕ ತಂದೆ ತಾಯಿಗಳು ಕನಸನ್ನು ಕಂಡಿರುತ್ತಾರೆ ಅಂತವರ ಕನಸಿಗೆ ಮೊದಲ ಅಡಿಗಲ್ಲು ಹೇಗೆ ಎನ್ನುವುದರ ಬಗ್ಗೆ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆವರೆಗೂ ಓದಿ.

rte free education

ಹಾಗಾಗಿ ಇದೇ ಕಾರಣಕ್ಕೆ ಸಾಕಷ್ಟು ಮಕ್ಕಳಿಗೆ ಆರಂಭಿಕ ಹಂತದ ವಿದ್ಯಾಭ್ಯಾಸವೇ ಸಿಗುವುದಿಲ್ಲ. ಹೀಗಾಗಿಯೇ ಅವರು ತಮ್ಮ ಭವಿಷ್ಯವನ್ನು ಉತ್ತಮವಾಗಿ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲ.. ಇದೆಲ್ಲ ಒಂದಕ್ಕೊಂದು ಸರಪಳಿಯ ಕೊಂಡಿಯಿದ್ದಂತೆ. ಮೊದಲ ಹಂತದ ಶಿಕ್ಷಣ ಎಂದು ಪ್ರತಿಯೊಂದು ಮಗುವಿಗೂ ತುಂಬನೇ ಮುಖ್ಯವಾಗುತ್ತದೆ.

ಆದರೆ ಕರ್ನಾಟಕದಲ್ಲಿ ಆರ್ ಟಿ ಇ ಶಿಕ್ಷಣ ಹಕ್ಕು ಯೋಜನೆಯು ಜಾರಿಯಲ್ಲಿದ್ದು 2024-25ನೇ ಶೈಕ್ಷಣಿಕ ವರ್ಷಕ್ಕೆ ಉಚಿತವಾಗಿ ಶಿಕ್ಷಣ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಈ ಮೂಲಕ ನಿಮ್ಮ ಮಕ್ಕಳ ಮೊದಲ ಹಂತದ ಶಿಕ್ಷಣವು ಉನ್ನತ ಮಟ್ಟದಲ್ಲಿ ಮತ್ತು ಸುಭದ್ರವಾಗಿರುವಂತೆ ಮಾಡುತ್ತದೆ.

ರೈಟ್ ಟು ಎಜುಕೇಶನ್ ಅಂದ್ರೆ ಶಿಕ್ಷಣದ ಹಕ್ಕು ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಇದ್ದೇ ಇರುತ್ತದೆ. ಅದುವೇ ಸರಿಯಾದ ರೀತಿಯಲ್ಲಿ ಸಿಕ್ಕಾಗ ಮಾತ್ರ ಆ ವ್ಯಕ್ತಿ ಜೀವನದಲ್ಲಿ ಸಕ್ಸಸ್ ಅನ್ನು ಹೊಂದಲು ಸಾಧ್ಯ. ಹಾಗಾಗಿ ಬೇಸಿಕ್ ಶಿಕ್ಷಣವನ್ನ ಸರ್ಕಾರ ಉಚಿತವಾಗಿ ನೀಡಲು ನಿರ್ಧರಿಸಿದೆ.

ಆರ್ ಟಿ ಇ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಈ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣವನ್ನು ಪಡೆದುಕೊಳ್ಳ ಬಹುದು. RTE ಹಕ್ಕುಗಳು ದೇಶದಾದ್ಯಂತ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಮತ್ತು ಕರ್ನಾಟಕ ರಾಜ್ಯದಲ್ಲಿಯೂ ಕೂಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಪಡೆದುಕೊಳ್ಳುವ ಹಕ್ಕಿದೆ ಎಂದು ತಿಳಿಸಲಾಗಿದೆ.

ಎಷ್ಟು ವರ್ಷದವರಿಗೆ ಸಿಗುತ್ತೆ ಉಚಿತ ಶಿಕ್ಷಣ?

ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಲ್ಲಿ ಸಾಕಷ್ಟು ಮಕ್ಕಳು ತಮ್ಮ ಆರಂಭಿಕ ಶಿಕ್ಷಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ, ಹಾಗಾಗಿ ಆರ್ ಟಿ ಇ ಕಾಯ್ದೆಯ ಅಡಿಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಉಚಿತ ಶಿಕ್ಷಣ ಪಡೆದುಕೊಳ್ಳಲು ಅವಕಾಶ ಇದೆ. ಇದಕ್ಕೆ ಬೇಕಾಗಿರುವ ವಯಸ್ಸಿನ ಮಿತಿ ನೋಡುವುದಾದರೆ…

LKG ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆಯಲು ಒಂದು ಮಗುವಿಗೆ ಕನಿಷ್ಠ ನಾಲ್ಕು ವರ್ಷಗಳಷ್ಟು ವಯಸ್ಸಾಗಿರಬೇಕು. ಮತ್ತು ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಕನಿಷ್ಠ ಐದು ವರ್ಷ ಐದು ತಿಂಗಳುಗಳಷ್ಟು ವಯಸ್ಸಾಗಿರಬೇಕು.

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ನಿಯಮ: ತಿಳಿದುಕೊಂಡು ಪ್ರಯಾಣಿಸಲು ಸೂಚನೆ !

ಅರ್ಜಿ ಸಲ್ಲಿಸುವುದು ಹೇಗೆ?

ನೀವು ಆನ್ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅದೇ ರೀತಿಯಲ್ಲಿ ಹತ್ತಿರದ ಸೇವಾ ಕೇಂದ್ರಗಳಲ್ಲಿ ಅಥವಾ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ನಲ್ಲಿಯೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ https://sdcedn.karnataka.gov.in/rteadmission/RTE/page1.aspx ಈ ವೆಬ್ ಸೈಟ್ ಗೆ ಹೋಗಿ ಅಗತ್ಯ ಇರುವ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಇದಕ್ಕೆ ಪಾಲಕರು ತಮ್ಮದೇ ಆದ ಆಧಾರ್ ಕಾರ್ಡ್ ಅಥೆಂಟಿಕೇಷನ್ ನೀಡಬೇಕಾಗುತ್ತದೆ. ಅನಂತರ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಮಗುವಿನ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ದಿನಾಂಕ

  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 22 2024.
  • ಅರ್ಹ ಪಟ್ಟಿಯನ್ನು ಬಿಡುಗಡೆ ಮಾಡುವ ದಿನಾಂಕ ಏಪ್ರಿಲ್ 26, 2024
  • ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟ್ ಹಂಚಿಕೆ ವೇಳಾಪಟ್ಟಿ ಬಿಡುಗಡೆ ದಿನಾಂಕ 30 ಏಪ್ರಿಲ್ 2024.
  • ಆಯ್ಕೆಯಾದ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಲು ಕೊನೆಯ ದಿನಾಂಕ 13 ಮೇ 2024.
  • ಆನ್ಲೈನಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ಮಾಡುವ ದಿನಾಂಕ ಮೇ 22, 2024.

ಇದೊಂದು ಸರ್ಕಾರದ ಉಚಿತ ಉಪಕ್ರಮವಾಗಿದ್ದು, ಸುಲಭವಾಗಿ ನಿಮ್ಮ ಮಕ್ಕಳಿಗೆ ಉಚಿತವಾಗಿ ಬೇಸಿಕ್ ಶಿಕ್ಷಣವನ್ನ ಒದಗಿಸಲು ತಕ್ಷಣ ಅರ್ಜಿ ಸಲ್ಲಿಸಿ.

ಸರ್ಕಾರದಿಂದ ಕೃಷಿ ಭೂಮಿ ಹೊಂದಿರುವ ರೈತರಿಗೆ 25,000 ಹಣ : ಈ ಕೂಡಲೇ ಅರ್ಜಿ ಸಲ್ಲಿಸಿ

ಬೆಳ್ಳಂಬೆಳಗ್ಗೆ ಸತತ ಏರಿಕೆಯಾಗಿದ್ದ ಚಿನ್ನದ ಬೆಲೆ ಕುಸಿತ : ಖರೀದಿಸಲು ಮುಗಿಬಿದಿದ್ದರೆ ಗ್ರಾಹಕರು ..!

Spread the love

Leave a Reply

Your email address will not be published. Required fields are marked *