ನಮಸ್ಕಾರ ಸ್ನೇಹಿತರೆ ರಾಜ್ಯದ ಜನರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಈಗಾಗಲೇ ಕರ್ನಾಟಕ ಸರ್ಕಾರವು ಹಲವಾರು ಯೋಜನೆಗಳನ್ನು ಹಾಗೂ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಂತೆ ಪ್ರತಿಯೊಬ್ಬರಿಗೂ ತಿಳಿದಿರುವ ಹಾಗೆ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬರೂ ಕೂಡ ಮೇ 31ರ ಒಳಗಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕೆಂಬ ನಿಯಮವನ್ನು ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದೆ.
ಅದರಂತೆ ಒಂದು ವೇಳೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳದೆ ಹೋದರೆ ದಂಡವನ್ನು ಕಟ್ಟುವ ಸಾಧ್ಯತೆಯೂ ಇರುತ್ತದೆ ಹಾಗಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳುವ ಉದ್ದೇಶವೇನು ಹಾಗೂ ಹಾಕಿಸಿಕೊಳ್ಳದೆ ಇದ್ದರೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
Contents
ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಸಲು ಕೊನೆಯ ದಿನಾಂಕ ಮೇ 31 :
ರಾಜ್ಯ ಸರ್ಕಾರದಿಂದ ತಮ್ಮ ವಾಹನಗಳಿಗೆ ಮೇ 31ರ ಒಳಗಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕೆಂಬ ನಿಯಮವನ್ನು ಹೊರಡಿಸಲಾಗಿದೆ. ಸಾಕಷ್ಟು ಜನರಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಎನ್ನುವುದು ತಿಳಿಯದೆ ಇರಬಹುದು ಇದು ಸಾಮಾನ್ಯ ನಂಬರ್ ಪ್ಲೇಟ್ ಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಸುರಕ್ಷಿತವಾಗಿರುತ್ತದೆ ಹಾಗೂ ಈ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಲ್ಯೂಮಿನಿಯಂ ಪ್ಲೇಟ್ ನಲ್ಲಿ ಕಂಡುಬರುತ್ತದೆ.
ನಂಬರ್ ಪ್ಲೇಟ್ ನಲ್ಲಿ ಇತ್ತೀಚಿನ ದಿನಗಳಲ್ಲಿ ನಕಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸುವ ಮೂಲಕ ಸಾರಿಗೆ ನಿಯಮಗಳ ಉಲ್ಲಂಘನೆ ಆಗುತ್ತಿರುವ ಬೆನ್ನಲ್ಲೇ ಸರ್ಕಾರ ಇದೀಗ ಈ ನಿಯಮವನ್ನು ಜಾರಿಗೆ ತಂದಿದ್ದು ಸಾಕಷ್ಟು ನಿಯಮಗಳಿಂದ ವಾಹನ ಸವಾರರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಲು ತಿಳಿಸಲಾಗಿದೆ.
ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸಲು ಈಗಾಗಲೇ ಮೂರು ಬಾರಿ ಕೊನೆಯ ದಿನಾಂಕದ ಗಡುವ ಮುಂದೂಡಲಾಗಿದೆ ಸದ್ಯ ಇದೀಗ ರಾಜ್ಯ ಸರ್ಕಾರ ಮೇ 31ರ ಒಳಗಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಸಲು ನಿರ್ಧರಿಸಿದೆ. ಆದರೆ ಆದರೆ ಈಗ ಬೇಸರದ ವಿಚಾರವೇನೆಂದರೆ, ಇನ್ನೇನು ಕೆಲವೇ ದಿನಗಳು ಮಾತ್ರ ಮೇ 31 ಮುಗಿಯಲು ಬಾಕಿ ಉಳಿದಿವೆ.
ಒಟ್ಟಾರೆ ಅದರ ನಡುವೆ ಇರುವಂತಹ ಎರಡು ಕೋಟಿ ವಾಹನಗಳಲ್ಲಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವುದು ಕೇವಲ 35 ಲಕ್ಷ ವಾಹನಗಳು ಮಾತ್ರ ಆಗಿದೆ ಅಂದರೆ 18 ಪ್ರತಿಶತ ಕೆಲಸ ಮಾತ್ರ ಕೇವಲ ಮುಗಿದಿದೆ ಎಷ್ಟರಮಟ್ಟಿಗೆ ಜನ ಈ ನಿಯಮದ ಬಗ್ಗೆ ಸೀರಿಯಸ್ ಆಗಿದ್ದಾರೆ ಎನ್ನುವುದನ್ನು ಇದು ತಿಳಿಸುತ್ತದೆ ಎಂದು ಹೇಳಬಹುದು.
ಇದನ್ನು ಓದಿ : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ : 11ನೇ ಕಂತಿನ ಹಣ ಜಮಾ
ನಂಬರ್ ಪ್ಲೇಟ್ ಹಾಕಿಸದೇ ಇದ್ದರೆ ದಂಡ ಬೀಳಲಿದೆ :
ಒಂದು ವೇಳೆ ನೀವೇನಾದರೂ ಹೆಚ್ಚೆಸಾರ್ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಲು ಸ್ವಲ್ಪಮಟ್ಟಿಗೆ ನಿರ್ಲಕ್ಷವನ್ನು ತೋರುತ್ತಿದ್ದರೆ ಮೇ 31 ಗಡುವಿನ ದಿನಾಂಕ ಮುಗಿದ ನಂತರ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಹೋದರೆ ದಂಡವನ್ನು ದೊಡ್ಡ ಮಟ್ಟದಲ್ಲಿ ಕಟ್ಟಬೇಕಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾಗಿ ಕನಿಷ್ಠಪಕ್ಷ ಪ್ರಾರಂಭದಿಂದಲೇ ಹೆಚ್ಚುಸಾರ್ಪಿ ನಂಬರ್ ಪ್ಲೇಟ್ ಗಳನ್ನು ಒಂದು ವೇಳೆ ನೀವು ಅಳವಡಿಸಿಕೊಳ್ಳದೆ ಇದ್ದರೆ ಸಾವಿರಾರು ರೂಪಾಯಿಗಳ ಫೈನ್ ಅನ್ನು ಕಟ್ಟಬೇಕಾಗುತ್ತದೆ. ಎನ್ನುವುದನ್ನು ಈಗಾಗಲೇ ಸಾರಿಗೆ ಇಲಾಖೆಯು ಸ್ಪಷ್ಟಪಡಿಸಿದೆ.
ಪ್ರತಿ ಬಾರಿಯೂ ನೀವು ಸಾವಿರ ರೂಪಾಯಿ ಹಣವನ್ನು ಫೈನ್ ರೂಪದಲ್ಲಿ ಹಾಳು ಮಾಡುವ ಮೊದಲು ಈ ಕೂಡಲೇ ಆನ್ಲೈನ್ ಮೂಲಕ ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ತಮ್ಮ ವಾಹನಗಳಿಗೆ ಹೆಚ್ಚು ಆರ್ ಪಿ ನಂಬರ್ ಪ್ಲೇಟ್ ಅಡಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಉತ್ತಮವಾಗಿದೆ ಈ ರೀತಿಯಾಗಿ ದೊಡ್ಡ ಮಟ್ಟದಲ್ಲಿ ದಂಡದಿಂದ ಹಣವನ್ನು ಉಳಿತಾಯ ಮಾಡಿಕೊಳ್ಳಬಹುದು.
ಒಟ್ಟಾರೆ ಾಹನ ಸವಾರರಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದೆ ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಈ ಕೂಡಲೇ ತಮ್ಮ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳುವುದರ ಮೂಲಕ ದೊಡ್ಡ ಮಟ್ಟದ ದಂಡವನ್ನು ತಪ್ಪಿಸಿ ಕೊಳ್ಳಿ ಎಂದು ತಿಳಿಸಿ.
ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಉತ್ತಮವಾಗಿರುತ್ತದೆ ತಕ್ಷಣವೇ ಎಚ್ಎಸ್ಆರ್‌ಬಿ ನಂಬರ್ ಪ್ಲೇಟ್ ಅನ್ನು ಮೇ 31ರ ಒಳಗಾಗಿ ಹಾಕಿಸಿಕೊಳ್ಳುವುದು ಉತ್ತಮ ಧನ್ಯವಾದಗಳು.