rtgh

ಸರ್ಕಾರಿ ನೌಕರರಿಗೆ ಸಂಬಳದ ಹೆಚ್ಚಳ ಸಿದ್ಧತೆ ತಕ್ಷಣ ಈ ಸುದ್ದಿ ನೋಡಿ ಇಲ್ಲಿದೆ ಮಾಹಿತಿ

Preparation of salary increase for government employees

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರಿ ನೌಕರರಿಗೆ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಾಕಷ್ಟು ದಿನದ ಬೇಡಿಕೆಯಾಗಿರುವ ಏಳನೇ ವೇತನ ಆಯೋಗ ವರದಿ ಜಾರಿಗೆ ಕೊಡಗು ರಾಜ್ಯ ಸರ್ಕಾರ ಇದೀಗ ಸನ್ನದ್ದವಾಗಿದೆ ಎಂದು ಹೇಳಬಹುದು.

Preparation of salary increase for government employees
Preparation of salary increase for government employees

ಏಳನೇ ವೇತನ ಆಯೋಗ ಜಾರಿಯ ಬಗ್ಗೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ಸರ್ಕಾರಿ ನೌಕರರ ಈಗಿರುವ ಸಂಬಳ ಹೆಚ್ಚಳದ ಜೊತೆಗೆ ಹಲವಾರು ಸವಲತ್ತುಗಳನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಬಹುದು. ಹಾಗಾದರೆ ಯಾವ ದಿನಾಂಕದಂದು ರಾಜ್ಯ ಸರ್ಕಾರ ನೌಕರರಿಗೆ ಏಳನೇ ವೇತನ ಆಯೋಗ ಜಾರಿಯಾಗಲಿದೆ ಹಾಗೂ ಏಳನೇ ವೇತನ ಆಯೋಗದ ಶಿಫಾರಸ್ಸುಗಳೇನು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಲೋಕಸಭಾ ಚುನಾವಣೆ ನಂತರ ಏಳನೇ ವೇತನ ಆಯೋಗ ಜಾರಿ :

7ನೇ ರಾಜ್ಯವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ಸಂಬಳ ಭತ್ಯೆ ಹಾಗೂ ಸೌಲಭ್ಯಗಳು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಾಗಿರುವ ನೀತಿ ಸಂಹಿತೆ ತೆರವುಗೊಳ್ಳುತ್ತಿದ್ದ ಹಾಗೆಯೇ ಪರಿಷ್ಕರಣೆ ಆಗುವುದು ಖಚಿತವಾಗಿದೆ. ಶೇಕಡ ಎಂಟರಿಂದ ಶೇಕಡ 8.5 ರಷ್ಟು ವೇತನವನ್ನು ಅಂತಿಮವಾಗಿ ಹೆಚ್ಚಳ ಮಾಡುವ ನಿರೀಕ್ಷೆ ಮಾಡಲಾಗಿದ್ದು ಒಟ್ಟಾರೆ ಏಳನೇ ವೇತನ ಆಯೋಗ ಜಾರಿಯಾದರೆ ಏರಿಕೆ ಮೂಲವೇತನದ ಶೇಖಡ 25 ರಿಂದ ಶೇಕಡ 25.5% ರಷ್ಟು ತಲುಪುವ ಸಾಧ್ಯತೆ ಹೆಚ್ಚಾಗಲಿದೆ.

ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶಗಳನ್ನು ಸಿದ್ಧಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಏಳನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಜೂನ್ 15 ಕ್ಕೂ ಮುನ್ನವೇ ಎಲ್ಲಾ ಆದೇಶವನ್ನು ಹೊರಡಿಸಲು ಪ್ರಯತ್ನಿಸುತಿದ್ದೇವೆ ಎಂದು ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ಎಲ್ ಕೆ ಅತಿಕ್ ಅವರು ಸರ್ಕಾರಿ ನೌಕರರಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : ಸರ್ಕಾರದಿಂದ ಪಡಿತರ ನಿಯಮದಲ್ಲಿ ಬದಲಾವಣೆ : BPL ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ ಸುದ್ದಿ!

ಏಳನೇ ವೇತನ ಆಯೋಗದ ಪ್ರಮುಖ ಶಿಫಾರಸುಗಳು :

ಮಾರ್ಚ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವೇತನ ಆಯೋಗ ಸಲ್ಲಿಸಿದ ವರದಿಯಲ್ಲಿ ಪ್ರಮುಖವಾಗಿ ತುಟ್ಟಿ ಭತ್ಯೆಯನ್ನು ಶೇಕಡ 31 ರಷ್ಟು ವಿಲೀನಗೊಳಿಸಿ ಫಿಟ್ ಮೆಂಟನ್ನು ಶೇಕಡ 27.50 ರಷ್ಟು ನೀಡುವ ಮೂಲಕ ಕನಿಷ್ಠ ಮೂಲವೇತನವನ್ನು ಸದ್ಯದೀಗ ಪಡೆಯುತ್ತಿರುವ ಸರ್ಕಾರಿ ನೌಕರರ ವೇತನವಾದ 17000 ಗಳಿಂದ 27 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಲು ಸಲಹೆ ನೀಡಲಾಗಿತ್ತು.

2,41,200 ಗಳಿಗೆ ಗರಿಷ್ಠ ವೇತನವನ್ನು ನಿಗದಿಪಡಿಸಬೇಕೆಂದು 7ನೇ ವೇತನ ಆಯೋಗದಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಆಯೋಗದ ಪ್ರಮುಖ 30 ಶಿಫಾರಸ್ಸುಗಳಲ್ಲಿ ನೌಕರರಿಗೆ ಹಲವು ಸೌಲಭ್ಯಗಳ ಹೆಚ್ಚಳವು ಕೂಡ ಸೇರಿವೆ.

ಸರ್ಕಾರಿ ನೌಕರರ ಸಂಬಳ ಎಷ್ಟು ಹೆಚ್ಚಳವಾಗಲಿದೆ ಎಂದು ನೋಡುವುದಾದರೆ,

ಸದ್ಯದ ರಾಜ್ಯದಲ್ಲಿ ಏಳನೇ ವೇತನ ಆಯೋಗ ಜಾರಿಯಾದರೆ ಈ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂತಹ ಸಿ ಮತ್ತು ಡಿ ದರ್ಜೆಯ ನೌಕರರಿಗೆ ಮೂಲವೇತನ 17000 2022 ರ ಜುಲೈ ಒಂದರಂದು ಇದ್ದರೆ 5270 ಬರ್ತೀಯ ಹಾಗೂ ನಾಲ್ಕು ಸಾವಿರದ 675 ರೂಪಾಯಿ ಫಿಟ್ನೆಂಟ್ ಸೇರಿ ಒಟ್ಟು 26945 ಸಿಗುತ್ತಿತ್ತು. ಇದೀಗ ಪರಿಷ್ಕೃತ ಏಳನೇ ವೇತನ ಆಯೋಗ ಜಾರಿಯಾದರೆ.

ಪರಿಷ್ಕೃತ ವೇತನ ಶ್ರೇಣಿಯಲ್ಲಿ 2024ರಲ್ಲಿ ಮೂಲವೇತನ 27,000ಗಳಿದ್ದರೆ ಅಂದಾಜು 2195 ತುಟ್ಟಿ ಭತ್ಯೆ ಗೆ 5400 ಮನೆ ಬಾಡಿಗೆ ಭತ್ಯೆ 500 ವೈದ್ಯಕೀಯ 750 ನಗರ ಪರಿಹಾರ ಭತ್ಯೆ ಸೇರಿ ಒಟ್ಟು 35,945 ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ.

ಆರನೇ ವೇತನ ಆಯೋಗ :

ರಾಜ್ಯ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದಲ್ಲಿ ಒಟ್ಟು 29,005 ರೂಪಾಯಿ ಸಿಗುತ್ತಿತ್ತು. ಪ್ರಸ್ತುತ ಇದೀಗ ಪರಿಷ್ಕೃತ ವೇದನದಲ್ಲಿ 6940 ಅಂದರೆ 7ನೇ ವೇತನ ಆಯೋಗದಲ್ಲಿ ಇಷ್ಟು ಹೆಚ್ಚಳವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024 ಮತ್ತು 25ನೇ ಸಾಲಿನ ಬಜೆಟ್ ನಲ್ಲಿ ಸರ್ಕಾರಿ ನೌಕರ ಸಮುದಾಯದ ಒತ್ತಡದ ಮೇರೆಗೆ ಏಳನೇ ವೇತನ ಆಯೋಗದ ನಿರೀಕ್ಷಿತ ಶಿಫಾರಸ್ಸುಗಳ ಅನುಷ್ಠಾನಕ್ಕಾಗಿ ಒಟ್ಟಾರೆ 15431 ಕೋಟಿ ರೂಪಾಯಿಗಳ ಅನುದಾನ ಮೀಸಲಿಟ್ಟಿದ್ದಾರೆ ಎಂದು ಹೇಳಬಹುದು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ನಿರ್ಬಂಧ ಜೂನ್ ಮೊದಲ ವಾರದಲ್ಲಿ ಸಡಿಲವಾದ ನಂತರ ಸಂಪೂರ್ಣ ಸಭೆಯಲ್ಲಿ ಈ ಸಂಬಂಧವಾಗಿ ಅಂತಿಮ ತೀರ್ಮಾನ ಪ್ರಕಟಿಸುವ ಸಂಭವ ಹೆಚ್ಚಿದೆ.

ಒಟ್ಟಾರೆ ರಾಜ್ಯ ಸರ್ಕಾರವು ಇದೀಗ ರಾಜ್ಯ ಸರ್ಕಾರಿ ನೌಕರರಿಗೆ 2024 ಮತ್ತು 25 ನೇ ಸಾಲಿನ ಬಜೆಟ್ ನಲ್ಲಿ ಏಳನೇ ವೇತನ ಆಯೋಗ ಜಾರಿಯಾಗುವುದರ ಬಗ್ಗೆ ಮಾಹಿತಿಯನ್ನು ತಿಳಿಸಿದ್ದು ರಾಜ್ಯ ಸರ್ಕಾರಿ ನೌಕರರ ಸಮುದಾಯಕ್ಕೆ ಖುಷಿ ನೀಡುವಂತಹ ತೀರ್ಮಾನವ ಪ್ರಕಟಿಸುವ ನಿರೀಕ್ಷೆಯನ್ನು ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರು ಮಾಡಲಿದ್ದಾರೆ.

ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ರಾಜ್ಯ ಸರ್ಕಾರಿ ನೌಕರರಾಗಿದ್ದರೆ ರಾಜ್ಯ ಸರ್ಕಾರದಿಂದ 7ನೇ ವೇತನ ಆಯೋಗ ಜಾರಿಯಾಗಲಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *