ನಮಸ್ಕಾರ ಸ್ನೇಹಿತರೆ ಆಗಾಗ ಹೊಸ ಹೊಸ ನಿಯಮಗಳನ್ನು ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎರಡು ಜಾರಿಗೊಳಿಸುತ್ತವೆ. ಅದರಂತೆ ಇದೀಗ ಪ್ರಸ್ತುತ ದೇಶದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಸರ್ಕಾರ ನೀಡುತ್ತಿರುವ ಎಲ್ಲ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇನ್ನು ಎಲ್ಲರಹರು ಕೂಡ ಉಚಿತಪಡಿತರ ಲಾಭವನ್ನು ಸರ್ಕಾರದಿಂದ ಪಡೆಯಬೇಕೆನ್ನುವ ಉದ್ದೇಶದಿಂದ ಸರ್ಕಾರ ಇದೆ ಈಗ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಾಗೂ ಪಡಿತರ ಚೀಟಿಯಲ್ಲಿರುವಂತಹ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಆಗಾಗ ಅವಕಾಶವನ್ನು ಕಲ್ಪಿಸುತ್ತಿರುತ್ತದೆ.
ಅದರಂತೆ ಇದೀಗ ಬಿಪಿಎಲ್ ಅಂತ್ಯೋದಯ ಸೇರಿ ಪಡಿತರ ಚೀಟಿಯನ್ನು ಹೊಂದಿರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ ನೀಡಲಾಗಿದೆ. ಇನ್ನು ಮುಂದೆ ಪಡಿತರ ಚೀಟಿಯನ್ನು ಹೊಂದಿರುವವರು ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
Contents
ಬೀಪಿಎಲ್ ಮತ್ತು ಅಂತ್ಯೋಯೋದಯ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್ :
ಮೇ ತಿಂಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಜಿಲ್ಲೆಯ ಪಡಿತರ ಚೀಟಿ ದಾರರಿಗೆ ಅನ್ವಯವಾಗುವಂತೆ ಪಡಿತರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. 35 ಕೆಜಿ ಅಕ್ಕಿ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಕಾರ್ಡಿಗೆ ಹಾಗೂ 5 ಕೆಜಿ ಅಕ್ಕಿ ಆದ್ಯತ ಮತ್ತು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವವರಿಗೆ ಉಚಿತವಾಗಿ ನೀಡಲಾಗುತ್ತದೆ.
5 ಕೆಜಿ ಅಕ್ಕಿಯನ್ನು ಎಪಿಎಲ್ ಏಕ ಸದಸ್ಯ ಪಡಿತರ ಚೀಟಿಗಾರರಿಗೆ ಹಾಗೂ 10 ಕೆಜಿ ಅಕ್ಕಿಯನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವವರಿಗೆ 15 ರೂಪಾಯಿಗಳಿಗೆ ವಿತರಣೆ ಮಾಡಲಾಗುತ್ತದೆ. 5 ಕೆಜಿ ಅಕ್ಕಿಯನ್ನು ನೇರವಾಗಿ ಹಣವನ್ನು ಪಡಿತರ ಚೀಟಿದಾರರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ವಿತರಣೆ ಮಾಡಲಾಗುತ್ತಿದ್ದು ತಾಂತ್ರಿಕ ಸಮಸ್ಯೆಗಳೇನಾದರೂ ಇದಕ್ಕೆ ಸಂಬಂಧಿಸಿದಂತೆ ಇದ್ದರೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದೆಂದು ತಹಶೀಲ್ದಾರರು ಪಡಿತರ ಚೀಟಿ ಹೊಂದಿರುವವರಿಗೆ ಮಾಹಿತಿಯನ್ನು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಪಡಿತರ ಚೀಟಿಯನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡ ಯೋಜನೆಯ ಲಾಭವನ್ನು ಪಡೆದುಕೊಳ್ಳಲಿದ್ದಾರೆ.
ಇದನ್ನು ಓದಿ : 1000 ರೂ ಹೂಡಿಕೆ ಮಾಡಿ 8 ಲಕ್ಷ ಆದಾಯ ಪಡೆಯಿರಿ : ಪೋಸ್ಟ್ ಆಫೀಸ್ನ ಹೊಸ ಯೋಜನೆ
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ಹೊಸ ಪಡಿತರ ಚೀಟಿಗೆ ಮೇ ತಿಂಗಳ ಅಂತ್ಯದಲ್ಲಿ ಅರ್ಜಿಯನ್ನು ಸಲ್ಲಿಸಲು ಹಾಗೂ ತಿದ್ದುಪಡಿ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ ಅದರಂತೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಅಗತ್ಯ ದಾಖಲೆಗಳನ್ನು ಪಡಿತರ ಚೀಟಿಯನ್ನು ಮಾಡಿಸಿಕೊಳ್ಳಲು ಅಭ್ಯರ್ಥಿಗಳು ಹೊಂದಿರಬೇಕು ಅವುಗಳೆಂದರೆ,
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ತೆರಿಗೆ ಕಟ್ಟದೇ ಇರುವ ಪ್ರಮಾಣ ಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ
ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ನಿಮಗೆ ತಿಳಿದಿರುವ ಎಲ್ಲರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮೇ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಯನ್ನು ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸಮಸ್ಯೆಗಳನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿ ಧನ್ಯವಾದಗಳು.