ನಮಸ್ಕಾರ ಸ್ನೇಹಿತರೆ, ಇಂದು ರೇಷನ್ ಕಾರ್ಡ್ ಎಲ್ಲಾ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು ಬಡವರ್ಗದ ಜನರಿಗೆ ಇದರಿಂದ ಹೆಚ್ಚು ಅನುಕೂಲವಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್ ಅತ್ಯಗತ್ಯವಾಗಿದೆ. ಹಾಗೆ ಯೇ ಸುಮಾರು ಒಂದುವರೆ ವರ್ಷದಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯನ್ನು ನಿಲ್ಲಿಸಲಾಗಿತ್ತು ಇದೀಗ ಮತ್ತೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿ ಕೊಡುತ್ತಿದೆ ಈಗಾಗಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಏಪ್ರಿಲ್ ಒಂದರಿಂದ ಅವಕಾಶ ನೀಡಿದ್ದು ಇದೀಗ ಅರ್ಜಿ ಸಲ್ಲಿಕೆ ಮಾಡಿದವರಿಗೆ ತಿಳಿಸಲಾಗುತ್ತಿದೆ.
ಹಾಗಾದರೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ ಯಾವಾಗ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗುತ್ತದೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
Contents
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆಹಾರ ಸಚಿವರಿಂದ ಮಾಹಿತಿ :
ರಾಜ್ಯ ಸರ್ಕಾರವು ಇನ್ನೇನು ಕೆಲವೇ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕೆಲವೊಂದು ಮಾಹಿತಿಗಳನ್ನು ತಿದ್ದುಪಡಿ ಮಾಡಲು ಮುಂದಿನ ತಿಂಗಳು ಅಂದರೆ ಜೂನ್ ತಿಂಗಳಲ್ಲಿ ಅವಕಾಶ ನೀಡುವುದಾಗಿ ಆಹಾರ ಸಚಿವರು ಈಗಾಗಲೇ ಮಾಹಿತಿಯನ್ನು ನೀಡಿದ್ದಾರೆ.
ಜೂನ್ ತಿಂಗಳಿನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಹಾಗೂ ರೇಷನ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆಗಳು ಮಾಡಿಸಬೇಕಿದ್ದರೂ ಕೂಡ ಆ ದಿನಗಳಲ್ಲಿ ಮಾಡಿಸಬಹುದಾಗಿದೆ.
ಇದನ್ನು ಓದಿ : ಅರಣ್ಯ ಪ್ರೇಮಿಗಳಿಗೆ ಸಿಹಿ ಸುದ್ದಿ : ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ
ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು :
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ ಆ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ,
- ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
- ಹೊಸ ಪಡಿತರ ಚೀಟಿಗೆ ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಹೊಸದಾಗಿ ಮದುವೆಯಾಗಿರುವ ದಂಪತಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.
- ಪಡಿತರ ಚೀಟಿ ಹೊಂದಿಲ್ಲದೆ ಇರುವವರು ಕೂಡ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ :
ಇಂದು ಹೆಚ್ಚಾಗಿ ಜನರು ಖಾಸಗಿ ಸೈಬರ್ ಸೆಂಟರ್ ಗಳಲ್ಲಿ ಯೆ ಅಜ್ಜಿಯನ್ನು ಸಲ್ಲಿಸುತ್ತಿರುತ್ತಾರೆ. ಇದರಿಂದ ಸಾಕಷ್ಟು ಜನರ ಅರ್ಜಿಗಳು ತಿರಸ್ಕಾರವಾಗಿದೆ ಹಾಗಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಸೇವ ಕೇಂದ್ರಗಳಲ್ಲಿ ಈ ಆಯ್ಕೆ ಇರುತ್ತದೆ ಅಂದರೆ ಗ್ರಾಮವನ್ ಬೆಂಗಳೂರು ಒನ್ ಹೀಗೆ ಸರ್ಕಾರದ ಸೇವ ಕೇಂದ್ರಗಳಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ಆಗ ಮಾತ್ರ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವಂತಹ ಸಂದರ್ಭದಲ್ಲಿ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ತಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಸುಲಭವಾಗೇ ಅರ್ಜಿ ಸಲ್ಲಿಸಬಹುದು.
ಇಂಥವರ ಅರ್ಜಿ ತಿರಸ್ಕಾರ :
ಕೆಲವೊಂದಿಷ್ಟು ಜನರ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸಲಾಗುತ್ತಿದೆ ಅಲ್ಲದೆ ಅರ್ಜಿಯನ್ನು ಸಲ್ಲಿಸಿದವರ ಅರ್ಜಿಗಳನ್ನು ಕೂಡ ತಿರಸ್ಕಾರ ಮಾಡಲಾಗುತ್ತಿದೆ ಅಂಥವರ ಅರ್ಜಿ ಯಾವುದು ಎಂದು ನೋಡುವುದಾದರೆ
- ಎಪಿಎಲ್ ಕಾರ್ಡ್ ಹೊಂದಿರುವವರು ಕೂಡ ಹೆಚ್ಚಿನದಾಗಿ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.
- ಈ ಬಾರಿ ಎಪಿಎಲ್ ಕಾರ್ಡ್ ದಾರದಿಂದ ಹೆಚ್ಚು ಅರ್ಜಿಗಳು ಬಂದಿದ್ದು ಅಂಥವರ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ.
- ಸುಳ್ಳು ದಾಖಲೆಯನ್ನು ನೀಡಿ ಅರ್ಜಿಯನ್ನು ಸಲ್ಲಿಸಿದವರ ಕಾಡುಗಳು ಕೂಡ ತಿರಸ್ಕಾರವಾಗಿದೆ.
- ಒಂದೇ ಕುಟುಂಬದಲ್ಲಿರುವಂತಹ ಅಂದರೆ ಒಂದೇ ಮನೆಯ ಸದಸ್ಯರಿಂದ ಪ್ರತ್ಯೇಕ ಕಾಡುಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಅಂತ ಅವರ ಕಾರ್ಡುಗಳನ್ನು ಕೂಡ ತಿರಸ್ಕರಿಸಲಾಗಿದೆ.
ಹೀಗೆ ಕೆಲವೊಂದಿಷ್ಟು ಜನರ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದ್ದು ಇಂಥವರು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಜಿ ಪರಿಶೀಲನೆ :
ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ತಮ್ಮ ಅರ್ಜಿಯನ್ನು ಪರಿಶೀಲನೆ ಮಾಡಬೇಕಾದರೆ ಅಭ್ಯರ್ಥಿಗಳು ಮೊದಲು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://ahara.kar.nic.in ಈ ವೆಬ್ಸೈಟ್ ಗೆ ಭೇಟಿ ನೀಡಿ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರ ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ತಿಳಿಸುತ್ತಿದ್ದು ಇದೀಗ ಹೊಸದಾಗಿ ರೇಷನ್ ಕಾರ್ಡ್ ಗೆ ಜೂನ್ ತಿಂಗಳಿಂದ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಲಾಗುತ್ತಿದೆ.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿರುವ ಮೂಲಕ ಅವರೇನಾದರೂ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವಂತಹ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಬಯಸುತ್ತಿದ್ದಾರೆ ಅವರಿಗೆ ಈ ಮಾಹಿತಿಯು ಹೆಚ್ಚು ಸಹಾಯಕವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಪ್ರತಿಯೊಬ್ಬರಿಗೂ ತಿಳಿಸಿ ಧನ್ಯವಾದಗಳು.