rtgh

RBI ನಿಂದ ಒಂದು ಮೊಬೈಲ್ ನಂಬರ್ ನಲ್ಲಿ ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿರುವವರಿಗೆ ಹೊಸ ನಿಯಮ

New rule for having two bank accounts in one mobile number

ನಮಸ್ಕಾರ ಸ್ನೇಹಿತರೆ ಇಂದು ಅತಿ ಅಗತ್ಯವಾದ ಅಂತಹ ವಸ್ತು ಮೊಬೈಲ್ ಆಗಿದ್ದು ಪ್ರತಿಯೊಬ್ಬರ ಕೈಗಳಲ್ಲಿಯೂ ಕೂಡ ಮೊಬೈಲ್ ಇದ್ದೇ ಇರುತ್ತದೆ. ದಿನನಿತ್ಯದ ವ್ಯವಹಾರ ಕೆಲಸ ಹೀಗೆ ಹಲವಾರು ರೀತಿಯ ಕೆಲಸಗಳನ್ನು ಮಾಡಬೇಕಾದರೆ ಮೊಬೈಲ್ ಮೂಲಕವೇ ಇಂದು ನಡೆಯುತ್ತಿದೆ ಎಂದು ಹೇಳಬಹುದು ಅದೇ ರೀತಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಇನ್ನೂ ಅಗತ್ಯ ದಾಖಲೆಗಳಿಗೆ ಇಂದು ಮೊಬೈಲ್ ಲಿಂಕ್ ಎನ್ನುವುದು ಕಡ್ಡಾಯಗೊಳಿಸಲಾಗಿದೆ.

ಅದೇ ರೀತಿ ತಮ್ಮ ಮೊಬೈಲ್ ನಂಬರನ್ನು ಬ್ಯಾಂಕ್ ಖಾತೆಗಳಿಗೂ ಕೂಡ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿದ್ದು. ಮೊಬೈಲ್ ನಂಬರ್ ಗಳನ್ನು ಬ್ಯಾಂಕ್ ಖಾತೆ ಲಿಂಕ್ ಮಾಡುವ ವಿಚಾರವಾಗಿ ಮಹತ್ವದ ಮಾಹಿತಿ ಒಂದನ್ನು ಆರ್ ಬಿ ಐ ಬಗ್ಗೆ ಹೊರಡಿಸಿದೆ.

New rule for having two bank accounts in one mobile number
New rule for having two bank accounts in one mobile number

ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದಕ್ಕೆ ಹೊಸ ನಿಯಮ :

ಹೀಗಿದೆ ವಿಧಮಾನಗಳಲ್ಲಿ ಬ್ಯಾಂಕ್ ಖಾತೆ ಎನ್ನುವುದು ಬಹಳ ಮುಖ್ಯವಾಗಿದೆ. ಯಾವುದೇ ರೀತಿಯ ಸರ್ಕಾರದ ಹಣ ಬರಬೇಕಾದರೆ ಆಗ ನಮ್ಮ ಖಾತೆ ಒಂದನ್ನು ನಾವು ಬ್ಯಾಂಕಿನಲ್ಲಿ ಹೊಂದಿರಬೇಕು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಅಂದರೆ ಪ್ರತಿಯೊಬ್ಬರೂ ಕೂಡ ಒಂದು ಕನಿಷ್ಠ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಒಂದೇ ಸಂಖ್ಯೆಯೊಂದಿಗೆ ಹೆಚ್ಚಿನ ಖಾತೆಗಳನ್ನು ಇಂದು ತೆರೆಯುವ ಸಾಧ್ಯತೆ ಇರುವುದರಿಂದ ಅನೇಕ ರೀತಿಯ ಬ್ಯಾಂಕ್ ಖಾತೆಗಳನ್ನು ಜನರು ತೆಗೆದುಕೊಂಡಿರುತ್ತಾರೆ.

ಬ್ಯಾಂಕ್ ಖಾತೆಗಳನ್ನು ಕೆಲವರು ಉದ್ಯೋಗಕ್ಕಾಗಿ ತೆಗೆದುಕೊಳ್ಳುತ್ತಿದ್ದರೆ ಇನ್ನೂ ಕೆಲವರು ಗೃಹ ಸಾಲ ವಾಹನ ಸಾಲಕ್ಕಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ. ಆದರೆ ಇದೀಗ ಆರ್‌ಬಿಐ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಹೊಸ ನಿಯಮವೊಂದನ್ನು ಹೊರಡಿಸಿದೆ.

ಇಂದು ಹೊಸ ನಿಯಮಗಳನ್ನು ಆರ್‌ಬಿಐ ಜಾರಿಗೆ ತರುತ್ತಿದ್ದು ಬ್ಯಾಂಕುಗಳಿಗೆ ಕಠಿಣ ಕ್ರಮಗಳನ್ನು ಹಣ ಸುರಕ್ಷಿತವಾಗಿ ಇರಿಸಲು ಜಾರಿಗೆ ತರುತ್ತಿದೆ. ಅದೇ ರೀತಿ ಒಂದೇ ಮೊಬೈಲ್ ನಂಬರ್ ಅನ್ನು ಅನೇಕ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸುವ ಬಗ್ಗೆಯೂ ಕೂಡ ಆರ್ ಬಿ ಐ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಆರ್ ಬಿ ಐ ನಿಯಮವನ್ನು ಗ್ರಾಹಕರ ಖಾತೆಗಳ ಸುರಕ್ಷತೆಯಲ್ಲಿ ಬದಲಾವಣೆ ಮಾಡುವ ಉದ್ದೇಶದಿಂದ ಜಾರಿಗೆ ತಂದಿದೆ.

ಈ ನಿಯಮ ಕಡ್ಡಾಯ :

ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆಯನ್ನು ಇಂದು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದ್ದು ಹಾಗಾಗಿ ಹೆಚ್ಚು ಗಾದೆಗಳನ್ನು ಹೊಂದಿರುವವರು ಒಂದೇ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿರುತ್ತಾರೆ. ಇದರಿಂದಾಗಿ ುಂದಿನ ದಿನಗಳಲ್ಲಿ ಅವರಿಗೆ ಸಮಸ್ಯೆ ಉಂಟಾಗಬಹುದು.

ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಆರ್‌ಬಿಐ ಜಾರಿಗೆ ತಂದಿದೆ. ಹೊಸ ಬ್ಯಾಂಕ್ ಖಾತೆ ಯನ್ನು ನೀವೇನಾದರೂ ತೆಗೆದರೆ ಕೆವೈಸಿ ಫಾರ್ಮನ್ನು ಪೂರ್ಣಗೊಳಿಸಬೇಕಾಗಿದ್ದು ಆರ್ ಬಿ ಐ ಕೆ ವೈ ಸಿ ಯ ನಿಯಮ ಮತ್ತು ಮಾನದಂಡಗಳನ್ನು ಇದಕ್ಕಾಗಿ ಬದಲಾವಣೆ ಮಾಡಿದೆ.

ಒಂದಕ್ಕಿಂತ ಹೆಚ್ಚು ಬ್ಯಾಂಕುಗಳನ್ನು ಹೊಂದಿರುವವರು ಮತ್ತು ಒಂದೇ ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವಂತಹ ಗ್ರಾಹಕರು ಕೆವೈಸಿ ಮಾಡಲು ನವೀಕರಣ ಮಾಡಬಹುದಾಗಿದೆ ಆದರೆ ಜಂಟಿ ಖಾತೆಗಳ ಸಂದರ್ಭದಲ್ಲಿ ೆ ವೈ ಸಿ ಫಾರ್ಮ್ ನಲ್ಲಿ ಕೇವಲ ಒಂದು ಮೊಬೈಲ್ ಸಂಖ್ಯೆಯನ್ನು ಮಾತ್ರವಲ್ಲದೆ ಮತ್ತೊಂದು ಮೊಬೈಲ್ ಸಂಖ್ಯೆಯನ್ನು ನವೀಕರಣ ಮಾಡಬೇಕೆಂದು ಆರ್‌ಬಿಐ ತಿಳಿಸಿದೆ.

ಹೀಗೆ ರ್‌ಬಿಐ ಗ್ರಾಹಕರ ಹಣದ ಸುರಕ್ಷತೆಗಾಗಿ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು ಇದೀಗ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡುವ ಸಂದರ್ಭದಲ್ಲಿ ಕೇವಲ ಒಂದು ಮೊಬೈಲ್ ನಂಬರ್ ಮಾತ್ರವಲ್ಲದೆ ಇನ್ನೊಂದು ಮೊಬೈಲ್ ನಂಬರ್ ಅನ್ನು ಕೂಡ ಸೇರಿಸಬಹುದಾಗಿದೆ.

ಆದರೆ ಈ ನಿಯಮ ಹೆಚ್ಚಾಗಿ ಜಂಟಿ ಖಾತೆಯನ್ನು ಹೊಂದಿರುವವರಿಗೆ ತಿಳಿಸಲಾಗಿದ್ದು ಈ ಬಗ್ಗೆ ಎಲ್ಲರಿಗೂ ಶೇರ್ ಮಾಡುವ ಮೂಲಕ ಬ್ಯಾಂಕ್ ಖಾತೆಯನ್ನು ಅವರು ಹೊಂದಿದ್ದರೆ ಈ ಮಾಹಿತಿಯು ಹೆಚ್ಚು ಸಹಕಾರಿಯಾಗಲಿದೆ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *