rtgh

ಈ ದಾಖಲೆಗಳು ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಲು ಕಡ್ಡಾಯ : ಮತ್ತೆ ಸಂಬಂಧಿಸಿದ ನಿಯಮದಲ್ಲಿ ಚೇಂಜ್

These documents are mandatory for applying for ration card

ನಮಸ್ಕಾರ ಸ್ನೇಹಿತರೇ, ಬಡವರ್ಗದ ಜನತೆಗೆ ನೆರವಾಗಲೆಂದು ಇಂದು ಸರ್ಕಾರವು ಹಲವು ರೀತಿಯ ಸೌಲಭ್ಯಗಳನ್ನು ಘೋಷಣೆ ಮಾಡುತ್ತಿದೆ. ಅದರಲ್ಲಿ ಮುಖ್ಯವಾಗಿ ಪಡಿತರ ಆಹಾರ ಧಾನ್ಯಗಳನ್ನು ಆಹಾರ ಇಲಾಖೆಯು ನೀಡುವ ಒಂದು ಯೋಜನೆ ಆಗಿದ್ದು ಬಹಳಷ್ಟು ಬಡ ಜನರು ಈ ಯೋಜನೆಯಿಂದ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೀಗ ಪಡಿತರ ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್ ಇಂದು ಬಹಳ ಅಗತ್ಯವಾಗಿ ಬೇಕಾಗಿರುತ್ತದೆ.

These documents are mandatory for applying for ration card
These documents are mandatory for applying for ration card

ಹಾಗಾಗಿ ಸಾಕಷ್ಟು ಜನರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಅದರಂತೆ ಇದೀಗ ರಾಜ್ಯ ಸರ್ಕಾರವು ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸುವ ಮೊದಲು ಕೆಲವೊಂದು ದಾಖಲೆಗಳನ್ನು ಕಡ್ಡಾಯ ಮಾಡಿದ್ದು ಅದರ ಬಗ್ಗೆ ಅಪ್ಡೇಟ್ ಒಂದು ಇವತ್ತಿನ ಲೇಖನದಲ್ಲಿ ತಿಳಿಯಬಹುದು.

ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಪ್ರಾರಂಭ :

ಸುಮಾರು ಒಂದು ವರೆ ವರ್ಷಗಳ ಕಾಲ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಏಪ್ರಿಲ್ ಒಂದರ ಬಳಿಕ ಅರ್ಜಿ ಸಲ್ಲಿಕೆ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಲಾಗಿತ್ತು.

ಆದರೆ ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಅಂದರೆ ಜೂನ್ ತಿಂಗಳಿನಲ್ಲಿಯೇ ಮತ್ತೊಂದು ಬಾರಿ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಹಾಗಾಗಿ ಮತ್ತೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಅರ್ಜಿಯನ್ನು ಹಾಕಬಹುದು.

ಅದರಂತೆ ಹೊಸದಾಗಿ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಏನೆಲ್ಲಾ ಆಗುತ್ತೆ ದಾಖಲೆಗಳನ್ನು ಹೊಂದಿರಬೇಕು ಎಂದು ಇವತ್ತಿನ ಲೇಖನದಲ್ಲಿ ತಿಳಿಯಬಹುದು.

ಇದನ್ನು ಓದಿ : ಭಾರತದ ಈ ನಗರಗಳಲ್ಲಿ ಸದ್ಯದಲ್ಲಿಯೇ ಏರ್ ಟ್ಯಾಕ್ಸಿ ಸೇವೆಗಳು ಶುರು

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು :

ಜೂನ್ ತಿಂಗಳಿನಿಂದ ಮತ್ತೊಂದು ಬಾರಿ ರಾಜ್ಯ ಸರ್ಕಾರವು ಹೊಸದಾಗಿ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡುತ್ತದೆ. ಹಾಗಾಗಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಕಾಯುತ್ತಿರುವ ಅಂತಹ ವಿದ್ಯಾರ್ಥಿಗಳು ಕೆಲವೊಂದು ದಾಖಲೆಗಳನ್ನು ಕಡ್ಡಾಯವಾಗಿ ಹೊಂದುವುದರ ಮೂಲಕ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾದರೆ ಆ ದಾಖಲೆಗಳು ಯಾವುವು ಎಂದು ನೋಡುವುದಾದರೆ,

  1. ಆಧಾರ್ ಕಾರ್ಡ್
  2. ಪಾಸ್ಪೋರ್ಟ್ ಸೈಜ್ ಫೋಟೋ
  3. ವಿಳಾಸ ಪ್ರಮಾಣ ಪತ್ರ
  4. ಆದಾಯ ಪ್ರಮಾಣ ಪತ್ರ
  5. ಮೊಬೈಲ್ ನಂಬರ್ ಹೀಗೆ ಅನೇಕ ದಾಖಲೆಗಳನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ :

ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಸಾಕಷ್ಟು ಜನರು ಸುಲಭ ಹಾಗೂ ವೇಗವಾಗಿ ಈ ಕೆಲಸ ಆಗಲಿದೆ ಎಂದು ಖಾಸಗಿ ಸೈಬರ್ ಸೆಂಟರ್ ಗಳಲ್ಲಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಅರ್ಜಿಯನ್ನು ಹಾಕುತ್ತಿದ್ದಾರೆ.

ಆದರೆ ಖಾಸಗಿ ಸೈಬರ್ ಸೆಂಟರ್ ಗಳಲ್ಲಿ ಅರ್ಜಿಯನ್ನು ಸಲ್ಲಿಸುವುದರಿಂದ ಸಾಕಷ್ಟು ಅರ್ಜಿಗಳು ತಿರಸ್ಕಾರ ವಾಗುವ ಸಾಧ್ಯತೆ ಹೆಚ್ಚಾಗಿರಲಿದೆ ಹಾಗಾಗಿ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಸೇವಾ ಸಿಂಧು ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸುವುದು, ಉತ್ತಮವಾಗಿದೆ.

ಹಾಗಾಗಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಗ್ರಾಮವನ್ ಸಿಎಸ್ಸಿ ಸೆಂಟರ್ ಕರ್ನಾಟಕ ಒನ್ ಬೆಂಗಳೂರು ಒನ್ ಹೀಗೆ ಅನೇಕ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

ಇಂತಹ ಜನರು ಅರ್ಜಿಯನ್ನು ಸಲ್ಲಿಸುವಂತಿಲ್ಲ :

ಹೊಸದಾಗಿ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಮಾನದಂಡಗಳನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ ಅದರಂತೆ ಇಂಥವರು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಅಂದರೆ ಈಗಾಗಲೇ ರೇಷನ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

ಇನ್ನು ಎಪಿಎಲ್ ಕಾರ್ಡನ್ನು ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯುವುದಕ್ಕಾಗಿ ಅರ್ಜಿಯನ್ನು ಸುಳ್ಳು ದಾಖಲೆ ನೀಡಿ ಸಲ್ಲಿಕೆ ಮಾಡಿದ್ದಾರೆ ಅಂಥವರ ಕಾರ್ಡುಗಳನ್ನು ರದ್ದು ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಹೀಗೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವಾರು ಅಪ್ಡೇಟ್ಗಳು ಹೊರಬಿಡುತ್ತಿತ್ತು. ಇದೀಗ ಜೂನ್ ನಾಲ್ಕರ ನಂತರ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮಾನದಂಡಗಳನ್ನು ಅನುಸರಿಸುವುದರ ಮೂಲಕ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ರಾಜ್ಯ ಸರ್ಕಾರದಿಂದ ಪಡಿತರ ಚೀಟಿಯನ್ನು ಪಡೆದು ಸುಲಭವಾಗಿ ಉಚಿತವಾಗಿ ಪಡಿತರ ಸೌಲಭ್ಯವನ್ನು ರಾಜ್ಯ ಸರ್ಕಾರದಿಂದ ಪಡೆದುಕೊಳ್ಳಬಹುದಾಗಿದೆ.

ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಬಂಧು ಮಿತ್ರರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ ಇದರಿಂದ ಅವರು ಕೂಡ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಬಯಸುತ್ತಿದ್ದರೆ ಈ ಮಾಹಿತಿಯು ಸಹಾಯವಾಗಲಿದೆ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *