rtgh

ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗೆ ಬಿಗ್ ಅಲರ್ಟ್ : ಈ ಲಿಂಕ್ ಅನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ

Big alert for account holders in State Bank

ನಮಸ್ಕಾರ ಸ್ನೇಹಿತರೇ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಆಗಾಗ ಹೊಸ ಹೊಸ ನಿಯಮಗಳನ್ನು ಹಾಗೂ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ ಅದರಂತೆ ನ್ನ ಗ್ರಾಹಕರಿಗೆ ಎಸ್‌ಬಿಐ ತಮ್ಮ ಬ್ಯಾಂಕಿನ ಹೆಸರಿನಲ್ಲಿ ಇರುವಂತಹ ವಾಟ್ಸಪ್ ಮತ್ತು ಎಸ್ಎಮ್ಎಸ್ ಸಂದೇಶಗಳಲ್ಲಿನ ಲಿಂಕ್ ಗಳನ್ನು ಕ್ಲಿಕ್ ಮಾಡಿದಂತೆ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.

Big alert for account holders in State Bank
Big alert for account holders in State Bank

ಇತ್ತೀಚಿಗೆ ಬಹುಮಾನದ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಾಟ್ಸಪ್ ಸಂದೇಶಗಳು ಹರಿದಾಡುತ್ತಿವೆ. ಸಾಮಾನ್ಯ ಇಮೇಲ್ ಗಳ ರೂಪದಲ್ಲಿ ಕೆಲವರು ಮೋಸದ ಲಿಂಗಗಳನ್ನು ಪಡೆಯುತ್ತಿದ್ದಾರೆ. ಅದರಂತೆ ಇದೀಗ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಕೆ ಸಂದೇಶವನ್ನು ನೀಡಿದ್ದು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

ಸ್ಟೇಟ್ ಬ್ಯಾಂಕ್ ನಿಂದ ಎಚ್ಚರಿಕೆ :

ವಾಟ್ಸಪ್ ಸಂದೇಶಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಹುಮಾನದ ಹೆಸರಿನಲ್ಲಿ ಹರಿದಾಡುತ್ತಿದ್ದು, ಸಾಮಾನ್ಯ ಇಮೇಲ್ ಗಳ ರೂಪದಲ್ಲಿ ಕೆಲವರು ಮೋಸದ ಲಿಂಕ್ ಗಳನ್ನು ಪಡೆಯುತ್ತಿದ್ದಾರೆ. ಆದರೆ ಅವುಗಳನ್ನು ಕ್ಲಿಕ್ ಮಾಡುವುದರ ಮೂಲಕ ಸಾಕಷ್ಟು ಜನರು ತಮ್ಮ ಹಣವನ್ನು ಕಳೆದುಕೊಂಡಿರುವ ಘಟನೆಗಳು ಕೂಡ ಬೆಳಕಿಗೆ ಬಂದಿವೆ. Sbi ತನ್ನ ಗ್ರಾಹಕರಿಗೆ ಈ ಹಿನ್ನೆಲೆಯಲ್ಲಿ ಎಚ್ಚರಿಕೆಯ ಸಂದೇಶ ಒಂದನ್ನು ನೀಡಿದೆ.

ಎಸ್‌ಬಿಐನ ಹೆಸರಿನಲ್ಲಿ ವಾಟ್ಸಾಪ್ನಲ್ಲಿ ಎಸ್ಬಿಐ ರಿವರ್ಸ್ ಲಿಂಕ್ ಅನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಇದು ತಿಳಿದಿರುವ ಸಂಖ್ಯೆಗಳಿಂದ ಬಂದಂತೆ ಸಾಕಷ್ಟು ಜನರು ಇದನ್ನು ನಿಜವೆಂದು ನಂಬಿರುತ್ತಾರೆ. ಅದರ ಪರಿಣಾಮವಾಗಿ ಅಂತಹವರು ಸುಲಭವಾಗಿ ಮೋಸ ಹೋಗುತ್ತಾರೆ. ಅದರಂತೆ ಆ ಸಂದೇಶ ಏನೆಂದು ನೋಡುವುದಾದರೆ ನಿಮ್ಮ ಎಸ್ಬಿಐ ಬಹುಮಾನ 7250 ಸಕ್ರಿಯಗೊಳಿಸಲಾಗಿದೆ ಇಂದು ಇದು ಮುಕ್ತಾಯಗೊಳ್ಳುತ್ತದೆ.

ಈ ಹಣವನ್ನು ಪಡೆದುಕೊಳ್ಳಲು ಎಸ್ ಬಿ ಐ ಇರುವ ಅಪ್ಲಿಕೇಶನ್ ಅನ್ನು ಸ್ಥಾಪಿಸಿ ಆಗ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಸಂದೇಶದಲ್ಲಿ ತಿಳಿಸಲಾಗಿರುತ್ತದೆ. ಅಲ್ಲದೆ ಎಸ್ ಬಿ ಐ yono ಹೆಸರಿನಲ್ಲಿ ಲಿಂಕ್ ಅನ್ನು ಸಹ ನೀಡಲಾಗಿರುತ್ತದೆ. ಈ ರೀತಿಯಾದಂತಹ ಸಂದೇಶ ಸುಳ್ಳಾಗಿದ್ದು , ಇಂತಹ ಮೋಸದ ಜಾಲಕ್ಕೆ ಎಸ್‌ಬಿನ ಗ್ರಾಹಕರು ಬಲಿಯಾಗಬಾರದು ಎನ್ನುವ ಉದ್ದೇಶದಿಂದ ಇದೀಗ sbi ತನ್ನ ಗ್ರಾಹಕರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದೆ.

ಇದನ್ನು ಓದಿ : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ : 11ನೇ ಕಂತಿನ ಹಣ ಜಮಾ

ಯಾವುದೇ ಲಿಂಕ್ಗಳನ್ನು ನಾವು ಕಳುಹಿಸಿರುವುದಿಲ್ಲ : ಎಸ್ ಬಿ ಐ

ರಿವರ್ಡ್ ಪಾಯಿಂಟ್ ಗಳ ಹೆಸರಿನಲ್ಲಿ ತನ್ನ ಬ್ಯಾಂಕ್ ನಡೆಯುತ್ತಿರುವ ಸೈಬರ್ ಅಪರಾಧಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿಕ್ರಿಯೆದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ರೀತಿಯ ಲಿಂಕುಗಳನ್ನು ರಿವಾರ್ಡ್ ಪಾಯಿಂಟ್ ಗಳಿಗೆ ಸಂಬಂಧಿಸಿದಂತೆ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ ಗ್ರಾಹಕರಿಗೆ ಎಪಿಕೆ ಫೈಲ್ಗಳನ್ನು ಡೌನ್ಲೋಡ್ ಮಾಡಲು ಸಹ ಕೇಳುವುದಿಲ್ಲ ಯಾವುದೇ ಲಿಂಕ್ಗಳನ್ನು ಗ್ರಾಹಕರು ಕ್ಲಿಕ್ ಮಾಡಿದಂತೆ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಅಲ್ಲದೆ ಸೈಬರ್ ಅಪರಾಧಗಳ ವಿರುದ್ಧ ಜಾಗರೂಕರಾಗಿರಲು ಗ್ರಾಹಕರಿಗೆ ಸಲಹೆ ನೀಡಿದೆ.

ಒಟ್ಟಾರೆ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸೈಬರ್ ಕ್ರೈಂ ಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದು ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೆಸರಿನಲ್ಲಿ ನಡೆಯುತ್ತಿದೆ. ಹಾಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಈ ವಿಷಯ ತಿಳಿದ ನಂತರ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು ಯಾವುದೇ ರೀತಿಯಾದಂತಹ ಲಿಂಕುಗಳನ್ನು ಓಪನ್ ಮಾಡಿದಂತೆ ತಿಳಿಸಿದೆ.

ಹಾಗಾಗಿ ನಿಮಗೆ ತಿಳಿದಿರುವ ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಎಸ್ಬಿಐ ಗ್ರಾಹಕರಾಗಿದ್ದರೆ ಅವರಿಗೆ ಈ ಲೇಖನದ ಮಾಹಿತಿಯು ಹೆಚ್ಚು ಉಪಯೋಗವಾಗಲಿದೆ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *