ಹಲೋ ಸ್ನೇಹಿತರೇ, ಬ್ರಿಟನ್‌ನ ಪ್ರಮುಖ ಆನ್‌ಲೈನ್ ಫ್ಯಾಷನ್ ಕಂಪನಿ ಎಎಸ್‌ಒಎಸ್‌ನ (ಎಸೋಸ್) ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ರಿಲಯನ್ಸ್ ರಿಟೇಲ್ ಕಂಪನಿಯು ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ, ರಿಲಯನ್ಸ್ ರಿಟೇಲ್ ಕಂಪನಿಯು ಭಾರತದಲ್ಲಿ ತನ್ನ ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರಂಗಳಲ್ಲಿ (ASOS) ಎಎಸ್‌ಒಎಸ್‌ನ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಿದೆ. ಎಎಸ್‌ಒಎಸ್ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದೆ. 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ.
ʼನಮ್ಮ ಫ್ಯಾಷನ್ ಕುಟುಂಬಕ್ಕೆ ಎಎಸ್‌ಒಎಸ್ ಅನ್ನು ಸ್ವಾಗತಿಸುತ್ತೇವೆ. ಜಾಗತಿಕ ಫ್ಯಾಷನ್ ಅನ್ನು ಭಾರತದ ಮಾರುಕಟ್ಟೆಗೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲು. ಭಾರತದ ರಿಟೇಲ್ ಮಾರುಕಟ್ಟೆಯಲ್ಲಿ ನಮಗಿರುವ ಸ್ಥಾನವನ್ನು ಈ ಪಾಲುದಾರಿಕೆಯನ್ನು ಸೂಚಿಸುತ್ತದೆ. ಅಲ್ಲದೆ, ನಮ್ಮ ಗ್ರಾಹಕರು ಬಯಸುವ ಫ್ಯಾಷನ್ ಉತ್ಪನ್ನಗಳನ್ನು ಅವರಿಗೆ ಒದಗಿಸುವ ಖಾತರಿಯನ್ನೂ ನೀಡುತ್ತದೆʼ ಎಂದು ರಿಲಿಯನ್ಸ್ ರಿಟೇಲ್ ವೆಂಚರ್ಸ್‌ನ ನಿರ್ದೇಶಕಿ ಇಶಾ ಅಂಬಾನಿ ಹೇಳಿದರು.
ರಿಲಯನ್ಸ್ ರಿಟೇಲ್ ಜೊತೆಗೂಡಿ ನಮ್ಮ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಕೆಲವೊಂದನ್ನು ನಾವು ಭಾರತದ ಗ್ರಾಹಕರಿಗೆ ನೀಡಲು ಉತ್ಸುಕರಾಗಿದ್ದೇವೆ.
ಮಹಿಳೆಯರಿಗೆ ಗುಡ್ ನ್ಯೂಸ್.!! ಇನ್ಮುಂದೆ ನಿಮ್ಮದಾಗಲಿದೆ 25000 ರೂ. ಇಂದೇ ಅಪ್ಲೇ ಮಾಡಿ
ಮುಖ್ಯವಾಗಿ ಜಗತ್ತಿನಲ್ಲಿಯೇ ಬ್ರಿಟಿಷ್ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಎಎಸ್‌ಒಎಸ್ ವಿನ್ಯಾಸವನ್ನು ನೀಡಲು ಕಾತುರರಾಗಿದ್ದೇವೆ ಎಂದು ಎಎಸ್‌ಒಎಸ್‌ನ ಸಿಇಒ ಜೋಸ್ ಆಂಟೋನಿಯೋ ತಿಳಿಸಿದರು.
ಆರ್‌ಐಎಲ್ (ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್) ಸಮೂಹದ ಎಲ್ಲಾ ರೀಟೇಲ್ ಕಂಪನಿಗಳನ್ನು ಒಳಗೊಂಡಿರುವ ಕಂಪನಿಯೇ ರಿಲಿಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ರಿಲಯನ್ಸ್ ರಿಟೇಲ್). ರಿಲಯನ್ಸ್ ರಿಟೇಲ್ 18,836ಕ್ಕೂ ಅಧಿಕ ಮಳಿಗೆಗಳು ಮತ್ತು ಡಿಜಿಟಲ್ ಇ-ಕಾಮರ್ಸ್ ಮೂಲಕ ಕಾರ್ಯಾಚರಿಸುತ್ತದೆ. ರಿಲಯನ್ಸ್ ರಿಟೇಲ್ ಕಂಪನಿಯು ತನ್ನ ಹೊಸ ವಾಣಿಜ್ಯ ಯೋಜನೆಯ ಭಾಗವಾಗಿ 30 ಲಕ್ಷಕ್ಕೂ ಅಧಿಕ ವ್ಯಾಪಾರಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಇತರೆ ವಿಷಯಗಳು:
ಬ್ಯಾಂಕ್ ಅಕೌಂಟ್ ಇದ್ದವರಿಗೆ ಸಂತಸದ ಸುದ್ದಿ.! ತದ ರಾತ್ರಿ ಬದಲಾಯ್ತು ಬಡ್ಡಿ ದರ
ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ.!! ಈ ಎಲ್ಲಾ ವಸ್ತುಗಳ ಬೆಲೆ ಬಲು ದುಬಾರಿ