rtgh

ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ.!! ಈ ಎಲ್ಲಾ ವಸ್ತುಗಳ ಬೆಲೆ ಬಲು ದುಬಾರಿ

vegetable price hike kannada

ಹಲೋ ಸ್ನೇಹಿತರೇ, ಬರ ಮತ್ತು ಬಿಸಿಲು, ತಾಪಮಾನ ಏರಿಕೆ ಹಾಗೂ ನೀರಿನ ಕೊರತೆ ಮೊದಲಾದ ಕಾರಣಗಳಿಂದ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆಯಾಗಿದ್ದು, ಬಡ, ಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ.

vegetable price hike kannada

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕಳೆದ 15 ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆಯು ಭಾರಿ ಏರಿಕೆಯನ್ನು ಕಂಡಿದೆ. ಇಳುವರಿಯು ಕೂಡ ಬಹಳ ಕಡಿಮೆಯಾಗಿ ಬೇಳೆ ಕಾಳುಗಳ ಕೊರತೆಯು ಸಹ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತೊಗರಿಬೇಳೆ ಹಾಗೂ ಅಕ್ಕಿ ದರಗಳು ಶೇಕಡ 15ರಷ್ಟು ಏರಿಕೆಯನ್ನು ಕಂಡಿದ್ದು, ಉದ್ದಿನಬೇಳೆ ಮತ್ತು ಗೋಧಿ ಹಿಟ್ಟಿನ ದರ ಶೇಕಡ 10% ನಷ್ಟು ಏರಿಕೆಯನ್ನು ಕಂಡಿದೆ.

ನಾಟಿ ಬೀನ್ಸ್ ದರವು ಒಂದು ಕೆಜಿಗೆ 200 ರೂ. ಗೆ ಏರಿಕೆಯಾಗಿದೆ. ಸೇಬು ಹಣ್ಣಿನ ದರವು ದ್ವಿಶತಕವನ್ನು ದಾಟಿ ಮುನ್ನುಗ್ಗಿದೆ. ಕೆಜಿಗೆ 280ರೂ. ವರೆಗೆ ಸೇಬು ಮಾರಾಟವಾಗುತ್ತಿದೆ. ದಾಳಿಂಬೆ ದರವು ಕೆಜಿಗೆ 220 ರೂ.ನಿಂದ 260 ರೂ.ವರೆಗೆ ಇದ್ದು, ತೊಗರಿ ಬೇಳೆ 180 ರಿಂದ 200 ರೂಪಾಯಿವರೆಗೂ ಇದೆ.

BMTC ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ : ಈ ಕೂಡಲೇ ಅರ್ಜಿ ಸಲ್ಲಿಸಿ ಪರೀಕ್ಷಾ ಪ್ರಾಧಿಕಾರದಿಂದ ಮಾಹಿತಿ

ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 10 ರಿಂದ 15 ರೂ., ಸಬ್ಬಸಿಗೆ 30 ರಿಂದ 40 ರೂ., ಮೆಂತೆ 20 ರಿಂದ 25 ರೂ., ಪಾಲಕ್ ಸೊಪ್ಪು 30 ರೂ., ಕರಿಬೇವು 10 ರಿಂದ 15 ರೂ., ಒಂದು ಕೆಜಿ ಸೌತೆಕಾಯಿಗೆ 60 – 70 ರೂ., ಒಂದು ನಿಂಬೆಹಣ್ಣು 10 ರೂ. ಕೆಲ ಕಡೆಗಳಲ್ಲಿ 15 ರೂ.ಗಳನ್ನು ಸಹ ಏರಿಕೆಯನ್ನು ಕಂಡಿದೆ, ಮೂರು ನಿಂಬೆಹಣ್ಣಿಗೆ 20 ರೂಪಾಯಿ ದರ ಇದೆ.

2023ರಲ್ಲಿ ಕೆಜಿಗೆ 160 ರೂಪಾಯಿ ಇದ್ದ ಕೋಳಿ ಮಾಂಸದ ದರವು ಈಗ 260 ರೂ. ದಾಟಿದೆ. ವಿತೌಟ್ ಸ್ಕಿನ್ ಚಿಕಾನ್ 320 ರೂಪಾಯಿವರೆಗೆ ಏರಿಕೆಯನ್ನು ಕಂಡಿದೆ. ಬೋನ್ ಲೆಸ್ ಚಿಕನ್ ದರವು ಸಹ ಹೆಚ್ಚಾಗಿದ್ದು, ನಾಟಿ ಕೋಳಿ ದರ ಕೇಜಿಗೆ 600 ರಿಂದ 700 ರೂ. ವರೆಗೆ ಕುರಿ ಮಾಂಸದ ದರ ಕೆಜಿಗೆ 700 ರೂ.ಗೆ ತಲುಪಿದ್ದು ಈಗಾಗಲೇ ಇದೆ ಇನ್ನು ಕೂಡ ಏರಿಕೆಯಾಗೂವ ಸಾಧ್ಯತೆ ಇದೆ, ಸ್ಪೆಷಲ್ ಕುರಿ ಮಟನ್ ಕೆಜಿಗೆ 800 ರೂ. ವರೆಗೆ ಮಾರಾಟವಾಗುತ್ತಿದೆ. ಕಾಳು ಮೆಣಸು ದರ ಕೂಡ ಹೆಚ್ಚಾಗಿದ್ದು ಕೆಜಿಗೆ 750 ರಿಂದ 850 ರೂ., ಬ್ಯಾಡಗಿ ಮೆಣಸಿನಕಾಯಿ 280 ರೂ. ವರೆಗೆ ಮಾರಾಟವಾಗಿದೆ.

ಇತರೆ ವಿಷಯಗಳು:

Post Office Scheme: ಈ ಯೋಜನೆಯಲ್ಲಿ 250 ರೂ ಹೂಡಿಕೆ ಮಾಡಿ, ನಿಮ್ಮದಾಗುತ್ತೆ ಲಕ್ಷಾಂತರ ರೂ.

ರೈತರೇ ಇತ್ತಕಡೆ ಗಮನಕೊಡಿ.!! ಈ ದಾಖಲೆ ಇದ್ದವರ ಖಾತೆಗೆ ʼಬರ ಪರಿಹಾರʼ

Spread the love

Leave a Reply

Your email address will not be published. Required fields are marked *