rtgh

ಬ್ಯಾಂಕ್ ಅಕೌಂಟ್ ಇದ್ದವರಿಗೆ ಸಂತಸದ ಸುದ್ದಿ.! ತದ ರಾತ್ರಿ ಬದಲಾಯ್ತು ಬಡ್ಡಿ ದರ

bank interest rate hike

ಹಲೋ ಸ್ನೇಹಿತರೇ, ದೇಶದ ಅತಿದೊಡ್ಡ ಸಾರ್ವಜನಿಕವಾದ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲಾಗಿದೆ.

bank interest rate hike

2 ಕೋಟಿಗಿಂತ ಕಡಿಮೆ ಇರುವ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಲಾಗಿದೆ ಎಂದು ತನ್ನ ವೆಬ್‌ಸೈಟ್‌ ಗಳಲ್ಲಿ ತಿಳಿಸಿದೆ. ಸಾಮಾನ್ಯ ನಾಗರಿಕರು ಹಾಗೂ ಹಿರಿಯ ನಾಗರಿಕ ಗ್ರಾಹಕರು ಹೆಚ್ಚಿನ ಸ್ಥಿರ ಠೇವಣಿ ಬಡ್ಡಿದರದಿಂದ ಪ್ರಯೋಜನವನ್ನು ಪಡೆಯುತ್ತಾರೆ.

2 ಕೋಟಿಕ್ಕಿಂತ ಕಡಿಮೆ ಚಿಲ್ಲರೆ ಠೇವಣಿಗಳ ಮೇಲೆ ಗರಿಷ್ಠ 75 ಬೇಸಿಸ್ ಪಾಯಿಂಟ್‌ಗಳ ಬಡ್ಡಿಯನ್ನು ಹೆಚ್ಚಿಸಲಾಗಿದೆ. ಸಾಮಾನ್ಯ ಗ್ರಾಹಕರಿಗೆ 46 ದಿನಗಳಿಂದ 179 ದಿನಗಳೊಳಗಿನ ಸ್ಥಿರವಾದ ಠೇವಣಿಗಳ ಮೇಲಿನ ಬಡ್ಡಿಯನ್ನು ಹಿಂದಿನ ದರದ 4.75 ಶೇಕಡಾದಿಂದ 5.50 ಕ್ಕೆ ಹೆಚ್ಚಿಗೆ ಮಾಡಲಾಗಿದೆ.

ಹಿರಿಯ ನಾಗರಿಕರ ಬಡ್ಡಿ ದರವನ್ನು ಶೇ.5.25ರಿಂದ ಶೇ.5.75ಕ್ಕೆ ಹೆಚ್ಚಿಸಲಾಗಿದೆ. 180 ರಿಂದ 210 ದಿನಗಳ ಬಡ್ಡಿ ದರವನ್ನು ಶೇ.5.75ರಿಂದ ಶೇ.6ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ಶೇಕಡಾ 6.5 ಬಡ್ಡಿ ಸಿಗುತ್ತದೆ.

ಅಲ್ಲದೆ, 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಲ್ಲಿಯವರೆಗೆ ಶೇಕಡಾ 6 ರಿಂದ 6.25 ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯದ ಮೇಲಿನ ಬಡ್ಡಿ ದರವನ್ನು ಶೇ.6.75ಕ್ಕೆ ಹೆಚ್ಚಿಸಲಾಗಿದೆ.

ಆದಾಗ್ಯೂ, 7 ರಿಂದ 45 ದಿನಗಳಲ್ಲಿ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ. ಅಲ್ಲದೆಯೇ 1-2 ವರ್ಷ ಮತ್ತು 2-3 ವರ್ಷ, 3-5 ವರ್ಷ ಹಾಗೂ 5-10 ವರ್ಷಗಳೊಳಗಿನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳು ಎಂದಿನಂತೆ ಮುಂದುವರಿಯಲಿವೆ.

ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ.!! ಈ ಎಲ್ಲಾ ವಸ್ತುಗಳ ಬೆಲೆ ಬಲು ದುಬಾರಿ

SBIನಲ್ಲಿ ಚಿಲ್ಲರೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳು ಈಗ ಹೀಗಿವೆ.

  • 7 – 45 ದಿನಗಳು: 3.50%
  • 46 – 179 ದಿನಗಳು: 5.50%
  • 180 -210 ದಿನಗಳು: 6.00%
  • 211 – 1 ವರ್ಷದೊಳಗೆ: 6.25%
  • 1 – 2 ವರ್ಷಗಳು: 6.80%
  • 2 – 3 ವರ್ಷಗಳು: 7.00%
  • 3 – 5 ವರ್ಷಗಳು: 6.75%
  • 5 – 10 ವರ್ಷಗಳು: 6.50%

ಎಸ್‌ಬಿಐನಲ್ಲಿ ಬೃಹತ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ಹೆಚ್ಚಳ

ಏತನ್ಮಧ್ಯೆ, ಎಸ್‌ಬಿಐ ಬೃಹತ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. 7 ದಿನಗಳಿಂದ 45 ದಿನಗಳೊಳಗಿನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು 25 ಮೂಲ ಅಂಕಗಳಷ್ಟು ಹೆಚ್ಚಿಸಲಾಗಿದೆ.

5% ಬಡ್ಡಿ ದರವನ್ನು ಶೇ 5.25ಕ್ಕೆ ಹೆಚ್ಚಿಸಲಾಗಿದ್ದು, ಹಿರಿಯ ನಾಗರಿಕರಿಗೆ ಶೇ 5.75ರ ಬಡ್ಡಿ ದರ ಸಿಗಲಿದೆ. 46 ದಿನಗಳಿಂದ 179 ದಿನಗಳೊಳಗಿನ ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.5.75ರಿಂದ ಶೇ.6.25ಕ್ಕೆ ಹೆಚ್ಚಿಸಲಾಗಿದೆ. ಈ ಅವಧಿಯಲ್ಲಿ ಹಿರಿಯ ನಾಗರಿಕರು ಬೃಹತ್ ಠೇವಣಿಗಳ ಮೇಲೆ ಶೇಕಡಾ 6.75 ಬಡ್ಡಿಯನ್ನು ಪಡೆಯುತ್ತಾರೆ.

ಇತರೆ ವಿಷಯಗಳು:

Post Office Scheme: ಈ ಯೋಜನೆಯಲ್ಲಿ 250 ರೂ ಹೂಡಿಕೆ ಮಾಡಿ, ನಿಮ್ಮದಾಗುತ್ತೆ ಲಕ್ಷಾಂತರ ರೂ.

ರೈತರೇ ಇತ್ತಕಡೆ ಗಮನಕೊಡಿ.!! ಈ ದಾಖಲೆ ಇದ್ದವರ ಖಾತೆಗೆ ʼಬರ ಪರಿಹಾರʼ


Spread the love

Leave a Reply

Your email address will not be published. Required fields are marked *