rtgh

ಮಳೆಯೇ ಮಳೆ.! ಈ 6 ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣರಾಯ

Rain update

ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯದ ಬಾಗಲಕೋಟೆ, ಬೀದರ್ ಮತ್ತು ರಾಯಚೂರು, ಯಾದಗಿರಿ ಸೇರಿ 6 ಜಿಲ್ಲೆಗಳನ್ನು ಬಿಟ್ಟು ಉಳಿದ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇಂದು ಮಳೆಯಾಗಲಿದೆ. ಮಳೆಯ ಜೊತೆಗೆ ಗುಡುಗು ಮಿಂಚು ಹಾಗೂ ಗಂಟೆಗೆ 40 ರಿಂದ 50 ಕಿ.ಮೀ. ವೇಗದ ಗಾಳಿಯೂ ಸಹ ಭೂಮಿಗೆ ಬಂದು ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮಳೆಯ ಎಚ್ಚರಿಕಾ ವರದಿಯನ್ನು ಈಗಾಗಲೇ ಪ್ರಕಟಿಸಿದೆ. ಈ ವರದಿಯ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ನಮ್ಮ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡಿ.

Rain update

ಬಾರತೀಯ ಹವಾಮಾನ ಇಲಾಖೆಯು ಮೇ 16ರ ಬೆಳಗ್ಗೆ 8.30ರ ವರೆಗೂ ನೀಡಿರುವ ಮಳೆಯ ಮುನ್ಸೂಚನೆ ವರದಿಯ ಪ್ರಕಾರ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಲ್ಲಿ ಕೆಲವು ಕಡೆಗಳಲ್ಲಿ ಸಾಧಾರಣವಾದ ಮಳೆಯಾಗಲಿದ್ದು, ಗುಡುಗು ಮಿಂಚು ಸಹ ಆಗಾಗ ಕಂಡು ಬರಲಿದೆ ಎಂದು ತಿಳಿಸಿದ್ದಾರೆ.

ಇನ್ನು ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೀದರ್, ಕಲಬರುಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಈ 6 ಜಿಲ್ಲೆಗಳು ಬಿಟ್ಟು ಉಳಿದ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ, ಕೊಪ್ಪಳ ಈ 5 ಜಿಲ್ಲೆಗಳಲ್ಲಿ ಕೆಲವು ಕಡೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಇಲ್ಲಿ ಮಳೆ ಬೀಳುವಾಗ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿ.ಮೀ ಇರಲಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗತುಮಕೂರು, ವಿಜಯನಗರ ಜಿಲ್ಲೆಗಳ ಹಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಗಾಳಿಯ ವೇಗವು ಸುಮಾರು ಗಂಟೆಗೆ 40 ರಿಂದ 50 ಕಿ.ಮೀ ಇರಲಿದೆ ಎಂದು ಮಳೆ ಮುನ್ಸೂಚನೆ ವರದಿಯಲ್ಲಿ ಎಚ್ಚರಿಸಿದೆ.

ಸರ್ಕಾರದಿಂದ ಸಿಗಲಿದೆ ಮಗಳ ಮದುವೆಗೆ 60,000 ಸಹಾಯ ಧನ : ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ

7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬಳ್ಳಾರಿ, ಚಾಮರಾಜನಗರ ಮತ್ತು ಹಾಸನ, ಕೊಡಗು, ಮಂಡ್ಯ ಹಾಗೂ ಮೈಸೂರು, ಶಿವಮೊಗ್ಗ – ಈ ಏಳು ಜಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಅನ್ನು ಘೋ‍ಷಿಸಲಾಗಿದೆ. ಈ ಜಿಲ್ಲೆಗಳ ಅನೇಕ ಕಡೆ ಭಾರಿ ಮಳೆಯಾಗಲಿದ್ದು, ಗುಡುಗು ಮಿಂಚು ಹಾಗೂ ಬಿರುಗಾಳಿಯ ಮುನ್ಸೂಚನೆಯನ್ನು ಸಹ ನೀಡಲಾಗಿದೆ, ಮುಂಜಾಗ್ರತೆ ವಹಿಸುವಂತೆ ಜನ ಸಾಮಾನ್ಯರಿಗೂ ತಿಳಿಸಿದ್ದಾರೆ.

ಪ್ರಮುಖ ನಗರಗಳ ತಾಪಮಾನ

ಬೆಂಗಳೂರು – 24.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 85)

ಮಂಗಳೂರು – 28 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 82)

ಚಿತ್ರದುರ್ಗ – 26 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 90)

ಗದಗ ಜಿಲ್ಲೆ – 22 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 83)

ಹೊನ್ನಾವರ – 25.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 79)

ಕಲಬುರಗಿ ಜಿಲ್ಲೆ – 22.3 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 99)

ಬೆಳಗಾವಿ ಜಿಲ್ಲೆ– 23 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 89)

ಕಾರವಾರ – 33.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 68 )

ಇತರೆ ವಿಷಯಗಳು:

ost Office Scheme: ಈ ಯೋಜನೆಯಲ್ಲಿ 250 ರೂ ಹೂಡಿಕೆ ಮಾಡಿ, ನಿಮ್ಮದಾಗುತ್ತೆ ಲಕ್ಷಾಂತರ ರೂ.

ರೈತರೇ ಇತ್ತಕಡೆ ಗಮನಕೊಡಿ.!! ಈ ದಾಖಲೆ ಇದ್ದವರ ಖಾತೆಗೆ ʼಬರ ಪರಿಹಾರʼ

Spread the love

Leave a Reply

Your email address will not be published. Required fields are marked *