ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರವು ಕಾರ್ಮಿಕರಿಗೆ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಈಗಾಗಲೇ ಕಾರ್ಮಿಕ ಕಾರ್ಡ್ ಹೊಂದಿರುವವರು ಮತ್ತು ಹೊಸದಾಗಿ ಕಾರ್ಡಿಗೆ ಅರ್ಹರಿರುವವರಿಗೆ ಕಾರ್ಮಿಕ ಇಲಾಖೆಯಿಂದ ಕರ್ನಾಟಕ ಸರ್ಕಾರವು ಈ ಕಾರ್ಮಿಕ ಕಾರ್ಡ್ ಅಡಿಯಲ್ಲಿ ಉಚಿತ ಟೂಲ್ ಕಿಟ್ಟನ್ನು ವಿತರಣೆ ಮಾಡುತ್ತಿದೆ.
ಹಾಗಾದರೆ ಕಾರ್ಮಿಕರು ಯಾವ ರೀತಿ ಉಚಿತವಾಗಿ ಟೂಲ್ ಕಿಟ್ಟನ್ನು ಪಡೆಯಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಮಾಹಿತಿಯನ್ನು ಸಂಪೂರ್ಣವಾಗಿ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.
Contents
ಲೇಬರ್ ಕಾರ್ಡ್ ಉಚಿತ ಟೂಲ್ ಕಿಟ್ ವಿತರಣೆ :
ಕರ್ನಾಟಕ ಸರ್ಕಾರವು ಕಾರ್ಮಿಕರಿಗಾಗಿ ಕಾರ್ಮಿಕ ಕಾರ್ಡ್ ಹೊಂದಿರುವ ನಾಗರಿಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹಲವಾರು ಯೋಜನೆಗಳನ್ನು ನೀಡಿದ್ದು ಆರ್ಥಿಕ ನೆರವನ್ನು ಕಾರ್ಮಿಕ ಕಾರ್ಡಿನ ಮೂಲಕ ಪಡೆದುಕೊಳ್ಳಬಹುದಾಗಿದೆ. ಅದರಂತೆ ಕಾರ್ಮಿಕ ಕಾರ್ಡನ್ನು ಹೊಂದಿರುವವರು ಏನೆಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು ಎಂದು ನೋಡುವುದಾದರೆ,
- ಮದುವೆ ಸಹಾಯಧನ ವೈದ್ಯಕೀಯ ವೆಚ್ಚಕ್ಕೆ ನೆರವನ್ನು ಪಡೆಯುವುದು
- ಮಾಸಿಕ ಪಿಂಚಣಿ ಸೌಲಭ್ಯ
- ಶ್ರಮ ಸಾಮರ್ಥ್ಯ ಟೂಲ್ ಕಿಟ್
- ಉಚಿತ ಸಾರಿಗೆ ಬಸ್ ಪಾಸ್ ವಿತರಣೆ
- ಅಂತ್ಯಕ್ರಿಯ ವೆಚ್ಚ ನೆರವು
- ಶೈಕ್ಷಣಿಕ ಸಹಾಯಧನ ಯೋಜನೆ
- ಹೆರಿಗೆ ಸೌಲಭ್ಯ
- ತಾಯಿ ಮಗು ಸಹಾಯ ಹಸ್ತ ಯೋಜನೆ
- ಅಪಘಾತ ಪರಿಹಾರ ಸೌಲಭ್ಯ
- ದುರ್ಬಲತೆ ಪಿಂಚಣಿ ನಿರವು
ಹೀಗೆ ಅನೇಕ ರೀತಿಯ ಸೌಲಭ್ಯಗಳನ್ನು ಕಾರ್ಮಿಕ ಕಾರ್ಡಿನ ಮೂಲಕ ಕಾರ್ಮಿಕರು ಪಡೆದುಕೊಳ್ಳಬಹುದಾಗಿದೆ.
ಕಾರ್ಮಿಕ ಕಾರ್ಡಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಕರ್ನಾಟಕ ಸರ್ಕಾರವು ನೀಡುತ್ತಿರುವ ಕಾರ್ಮಿಕ ಕಾರ್ಡನ್ನು ಪಡೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿಯನ್ನು ಸಲ್ಲಿಸಿದ ನಂತರ ಕಾರ್ಮಿಕ ಕಾರ್ಡನ್ನು ಪಡೆದು ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದರಂತೆ ಇದೀಗ ಕಾರ್ಮಿಕ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಎಂಬುದನ್ನು ನೋಡುವುದಾದರೆ,
- ಅರ್ಜಿದಾರರ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಸೈಜ್ ಫೋಟೋ
- ಮೊಬೈಲ್ ನಂಬರ್
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- 90 ದಿನಗಳ ಉದ್ಯೋಗದ ದೃಡೀಕರಣ ಪತ್ರ.
ಹೀಗೆ ಈ ಎಲ್ಲ ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಕಾರ್ಮಿಕ ಕಾರ್ಡ್ ಅನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಕಾರ್ಮಿಕ ಕಾರ್ಡಿಗೆ ಅರ್ಜಿ ಸಲ್ಲಿಸುವ ವಿಧಾನ :
ಕರ್ನಾಟಕ ಸರ್ಕಾರವು ನೀಡುತ್ತಿರುವಂತಹ ಕಾರ್ಮಿಕ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಅರ್ಜಿದಾರರು ತಮ್ಮ ಹತ್ತಿರದ ಸಿ ಎಸ್ ಎಸ್ ಸಿ ಕೇಂದ್ರಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅಥವಾ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯ ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಭೇಟಿ ಮಾಡುವುದರ ಮೂಲಕವೂ ಕೂಡ ಕಾರ್ಮಿಕರು ಅರ್ಜಿ ಸಲ್ಲಿಸಿ ಕಾರ್ಮಿಕ ಕಾರ್ಡನ್ನು ಪಡೆದು ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಸುಲಭವಾಗಿ ಪಡೆಯಬಹುದು. ಕಾರ್ಮಿಕ ಕಾರ್ಡ್ ಅನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇರುವ ಅಧಿಕೃತ ವೆಬ್ಸೈಟ್ ಎಂದರೆ https://ksuwssb.karnataka.gov.in ಈ ವೆಬ್ ಸೈಟಿಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಒಟ್ಟಾರೆ ರಾಜ್ಯ ಸರ್ಕಾರವು ಕಾರ್ಮಿಕರಿಗೆ ಅಗತ್ಯವಿರುವಂತಹ ಯೋಜನೆಗಳ ಪ್ರಯೋಜನವನ್ನು ನೀಡಲು ಕಾರ್ಮಿಕ ಕಾರ್ಡನ್ನು ನೀಡುತ್ತಿದ್ದು ಈ ಒಂದು ಕಾರ್ಯಕ್ರಮ ಮೂಲಕ ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಕಾರ್ಮಿಕ ಕಾರ್ಡನ್ನು ಪಡೆಯಲು ಅರ್ಹರಾಗಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಲಿ ಧನ್ಯವಾದಗಳು.