ಹಲೋ ಸ್ನೇಹಿತರೇ, ಇಷ್ಟು ದಿನ ಬೇಸಿಗೆ ಇತ್ತು ಮೊಟ್ಟೆ, ಮಾಂಸ ತಿನ್ನುವುದನ್ನು ಜನರು ಕಡಿಮೆ ಮಾಡಿದ್ದರು. ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ದೇಹವನ್ನು ಬೆಚ್ಚಗೆ ಮಾಡಿಕೊಳ್ಳೊಣ ಅಂತ ಮಾಂಸ ಖರೀದಿಸಿ ರುಚಿಕರವಾದ ಆಹಾರ ತಯಾರಿಸಿ, ಸವಿಯೋಣ ಎಂದುಕೊಂಡಿರುವ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಚಿಕನ್ ಬೆಲೆಯು ಇದೀಗ ಗಗನಕ್ಕೆ ಏರಿಕೆಯಾಗಿದ್ದು, ಬೆಲೆ ಕೇಳಿ ಮಾಂಸ ಪ್ರಿಯರು ದಂಗಾಗಿದ್ದಾರೆ..
ಇಷ್ಟು ದಿನ ತರಕಾರಿಗಳ ಬೆಲೆ ಏರಿಕೆಯಾಗಿತ್ತು. ಇದೀಗ ಹವಮಾನ ವೈಪರಿತ್ಯದಿಂದ ಮಾಂಸ ಮತ್ತು ಮೊಟ್ಟೆ ಬೆಲೆ ಕೂಡ ಹೆಚ್ಚಳವಾಗಿದೆ. ಕೆಜಿ ಚಿಕನ್ಗೆ 380 ರೂ ಆಗಿದೆ. ಕೆಜಿ ಮಟನ್ಗೆ 800 ರೂ. ಆಗಿದ್ದು, ಮೊಟ್ಟೆಗೆ 8 ರಿಂದ 7 ರೂ. ನಿಗದಿ ಮಾಡಲಾಗಿದೆ.
ಬೇಸಿಗೆ ಇದ್ದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕೋಳಿ ಸಾಕಾಣೆಯಾಗಿಲ್ಲ. ಇದೀಗ ಬೇಡಿಕೆ ಜಾಸ್ತಿಯಾಗಿದೆ. ಬೇಡಿಕೆಗೆ ತಕ್ಕಷ್ಟು ಕೋಳಿ ಮಾಂಸದ ಪೂರೈಕೆ ಇಲ್ಲದ ಕಾರಣ ಮಾಂಸಾಹಾರ ಬೆಲೆ ಕೂಡ ಏರಿಕೆಯಾಗಿದೆ.
ಕಾರ್ಮಿಕರಿಗೆ ಸಿಗಲಿದೆ ಉಚಿತ ಟೂಲ್ ಕಿಟ್ : ಸರ್ಕಾರದಿಂದ ಕಾರ್ಮಿಕರಿಗಾಗಿ ಹೊಸ ಯೋಜನೆ
ಅಲ್ಲದೆ ಮದುವೆ ಸೀಜನ್ನಲ್ಲಿ ಮಾಂಸಾಹಾರಕ್ಕೂ ಹೆಚ್ಚು ಬೇಡಿಕೆ ಇರುವುದರಿಂದ, ಮುಂದಿನ ಒಂದು ತಿಂಗಳವರೆಗೂ ಮಾಂಸದ ಬೆಲೆ ಹೆಚ್ಚಾಗಲಿದೆ ಎಂದು ಮಾಂಸ ವ್ಯಾಪಾರಿ ಉಬೇದ್ ಉಲ್ಲಾ ಖಾನ್ ಹೇಳಿದ್ದಾರೆ.
ತರಕಾರಿ ಬೆಲೆಹೆಚ್ಚಾಗಿದೆ. ಇದೀಗ ಮಾಂಸದ ಬೆಲೆಯೂ ಏರಿಕೆಯಾಗಿದೆ. ಇಷ್ಟೊಂದು ಬೆಲೆ ಏರಿಕೆಯಾದರೆ ಮಾಂಸವನ್ನು ತಿನ್ನುವುದಾದರೂ ಹೇಗೆ?. ಭಾನುವಾರ ಬಂದರೆ ಸಾಕು ಮನೆಯಲ್ಲಿ ಮಾಂಸಾಹಾರ ಇರಲೇ ಬೇಕು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಟ್ಟೆಯನ್ನು ಪ್ರತಿದಿನ ಕೊಡಬೇಕಾಗುತ್ತದೆ. ಆದ್ರೆ ಮೊಟ್ಟೆಯ ಬೆಲೆಯು 7 ರೂ ಆಗಿದೆ. ಮಟನ್ ಬೆಲೆಯು ಸಾವಿರದ ಗಡಿ ತಲಪುತ್ತಿದೆ. ಎಷ್ಟೇ ಬೆಲೆ ಏರಿಕೆಯಾದರು ಚಿಕನ್ ಹಾಗೂ ಮಟನ್ ತಿನ್ನಲೇಬೇಕು. ಹೀಗಾಗಿಯೇ ಚಿಕನ್ ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದೇವೆ ಅಂತ ಗ್ರಾಹಕ ನವಾಬ್ ಹೇಳಿದರು. ಒಟ್ಟಿನಲ್ಲಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಶಾಕ್ ಆಗಿದ್ದು, ಇನ್ನೂ ಒಂದು ತಿಂಗಳು ಕಾಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಇತರೆ ವಿಷಯಗಳು:
ಗ್ಯಾಸ್ ಸಬ್ಸಿಡಿಗಾಗಿ E-KYC ಮಾಡಿಸಿಕೊಳ್ಳುವುದು ಕಡ್ಡಾಯ! ಇಲ್ಲಿದೆ ಹೊಸ ಅಪ್ಡೇಟ್
ಉಚಿತ ಬೋರ್ ವೆಲ್ ಪಡೆಯಲು ಅರ್ಜಿ ಆಹ್ವಾನ.! ನೀರಿನ ಕೊರತೆ ನೀಗಿಸುವ ಈ ಯೋಜನೆ ತಕ್ಷಣ ಅಪ್ಲೇ ಮಾಡಿ