ಹಲೋ ಸ್ನೇಹಿತರೇ, ಗೃಹಜ್ಯೋತಿ ಯೋಜನೆಯ ಮೂಲಕ ಉಚಿತ ಕರೆಂಟ್ ಭಾಗ್ಯ ಇಂದು ಲಕ್ಷಾಂತರ ಕುಟುಂಬಗಳಿಗೆ ಸಿಕ್ಕಿದೆ. ಕಳೆದ 6 ತಿಂಗಳಿನಿಂದಲೂ ಉಚಿತವಾಗಿ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗಿದೆ.
ಕೇವಲ ಹಳ್ಳಿ ಪ್ರದೇಶಗಳಲ್ಲಿ ಅಷ್ಟೇ ಅಲ್ಲದೆ ನಗರ ಪ್ರದೇಶಗಳಲ್ಲಿ ವಾಸಿಸ ಮಾಡುವವರು ಕೂಡ ಪ್ರತಿ ತಿಂಗಳು ಭರಿಸಬೇಕಾದ 2000 ರೂಪಾಯಿ ಬಿಲ್ ಉಳಿತಾಯ ಮಾಡುತ್ತಿದ್ದಾರೆ.
ಹೌದು, ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಯ ಪ್ರತಿಫಲವಾಗಿ ಗೃಹಜ್ಯೋತಿ ಯೋಜನೆಯ ಮೂಲಕ ಇನ್ನೂರು ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಬಳಕೆ ಮಾಡುವ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಆದರೆ ಈಗ ಉಚಿತ ವಿದ್ಯುತ್ ಬಳಕೆ ಮಾಡುತ್ತಿರುವ ಕುಟುಂಬಗಳಿಗೆ ಇದು ಕಹಿ ಸುದ್ದಿ ಎನ್ನಬಹುದು.
Contents
ಹೆಚ್ಚುವರಿ ವಿದ್ಯುತ್ ಬಳಕೆ ಮಾಡ್ತಾ ಇದ್ದೀರಾ?
ಬೇಸಿಗೆಕಾಲ ಆರಂಭದಿಂದಲೂ ಕೂಡ ಈ ಬಾರಿ ತಾಪಮಾನ ತುಂಬಾನೆ ಹೆಚ್ಚಾಗಿದೆ, ಹಾಗಾಗಿ ಬೇಸಿಗೆ ಉರಿ ತಡೆದುಕೊಳ್ಳುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಫ್ಯಾನ್ ಕೂಲರ್ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.
ಜನರು ತಮಗೆ 200 ಯೂನಿಟ್ ವರೆಗೆ ಮಾತ್ರ ಉಚಿತ ವಿದ್ಯುತ್ ಸಿಗುತ್ತದೆ ಎನ್ನುವುದನ್ನು ಕೂಡ ಮರೆತು ಅತಿ ಹೆಚ್ಚು ವಿದ್ಯುತ್ ಬಳಕೆ ಮಾಡಲು ಆರಂಭಿಸಿದ್ದಾರೆ ಇದರಿಂದಾಗಿ ಗೃಹಜ್ಯೋತಿ ಯೋಜನೆಯ ಪ್ರಯೋಜನ ಸಿಗೋದಿಲ್ಲ ಅಂತ ಸರ್ಕಾರ ಈಗಾಗಲೇ ತಿಳಿಸಿದೆ.
ಕೇಂದ್ರದಿಂದ ಬಂತು ಪವರ್ ಫುಲ್ ಸ್ಕೀಮ್.!! ಖಾತೆ ಖಾಲಿ ಇದ್ರೂ ನಿಮ್ಮದಾಗುತ್ತೆ 10,000 ರೂ.
ಇಂಥವರಿಗೆ ಸಿಗಲ್ಲ ಗೃಹ ಜ್ಯೋತಿ ಯೋಜನೆ ಪ್ರಯೋಜನ
ವಾರ್ಷಿಕ ಸರಾಸರಿ ಎಷ್ಟು ಯೂನಿಟ್ ವಿದ್ಯುತ್ ಬಳಕೆ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಉಚಿತ ವಿದ್ಯುತ್ ನಿಗದಿಯಾಗುತ್ತದೆ. ಉದಾಹರಣೆಗೆ ನೀವು 150 ಯೂನಿಟ್ ಅವುಗಳನ್ನು ಪ್ರತಿ ತಿಂಗಳು ಬಳಸುತ್ತಿದ್ದರೆ 200 ಯೂನಿಟ್ ಒಳಗಡೆ ವಿದ್ಯುತ್ ಬಳಕೆ ಮಾಡಿದಂತೆ ಆಗುತ್ತದೆ ಹಾಗೂ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಸಿಗುತ್ತದೆ.
ಆದರೆ ಈಗ 150 ನಿಗದಿತ ಉಚಿತ ಯೂನಿಟ್ ಗಿಂತ ಹೆಚ್ಚುವರಿ 50 ಯೂನಿಟ್ ಬಳಕೆ ಮಾಡಿದ್ರೆ ಪ್ರತಿ ಯೂನಿಟ್ ಗೆ 7 ರೂಪಾಯಿಗಳಂತೆ ಪಾವತಿ ಮಾಡಬೇಕು. ಹಾಗೂ ನಿಮ್ಮ ವಿದ್ಯುತ್ ಬಳಕೆಯು 200 ಯೂನಿಟ್ ಗಡಿಯನ್ನು ತಲುಪಿದರೆ ಆಗ ಸಂಪೂರ್ಣ ವಿದ್ಯುತ್ ಬಿಲ್ ಪಾವತಿ ಮಾಡಬೇಕು.
ರಾಜ್ಯದಲ್ಲಿ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಈ ಮಾರ್ಚ್ ತಿಂಗಳಿನಲ್ಲಿ ಜನರ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು 20% ನಷ್ಟು ವಿದ್ಯುತ್ ಅಧಿಕ ಬಳಕೆ ಆಗಿದೆ.
ನಿಮಗೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಇನ್ನು ಮುಂದೆಯೂ ಸಿಗಬೇಕು ಅಂದರೆ ನೀವು ಬಳಕೆ ಮಾಡುವ ವಿದ್ಯುತ್ ಬಗ್ಗೆ ಗಮನ ಇರಲಿ ಅನಗತ್ಯ ವೇಳೆಯಲ್ಲಿ ಎಲೆಕ್ಟ್ರಾನಿಕ್ ಘಟಕಗಳನ್ನು ಉರಿಸುವುದಕ್ಕಿಂತ ಅವುಗಳನ್ನು ಸ್ವಿಚ್ ಆಫ್ ಮಾಡಿ ಕಡಿಮೆ ವಿದ್ಯುತ್ ಬಳಕೆ ಮಾಡಿ.
ಇತರೆ ವಿಷಯಗಳು:
ಕರ್ನಾಟಕದಲ್ಲಿ ಇಂದಿನಿಂದ ಈ ಜಿಲ್ಲೆಗಳಲ್ಲಿ ಭಾರಿ ಮಳೆ : ನಿಮ್ಮ ಊರಿನಲ್ಲಿ ಮಳೆ ಬರುತ್ತಾ ತಿಳಿಯಿರಿ
7ನೇ ಕಂತಿನ ಗೃಹಲಕ್ಷ್ಮಿ ಹಣ ಈ ಜಿಲ್ಲೆಗಳಿಗೆ ಬಿಡುಗಡೆ ಆಗಿದೆ : ನಿಮ್ಮ ಜಿಲ್ಲೆ ಹೆಸರು ಇದೆಯಾ ನೋಡಿ.!