ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಗೆ ಸಂಬಂಧಪಟ್ಟ ಹಾಗೆ ದೊಡ್ಡ ಅಪ್ಡೇಟ್ ಸಿಕ್ಕಿದೆ, ಇದುವರೆಗೆ ಯಾರ ಖಾತೆಗೆ ಹಣ ಜಮಾ ಆಗಿಲ್ವೋ ಅಂತವರು ಇದೊಂದು ಕೆಲಸ ಮಾಡಿದರೆ ಪೆಂಡಿಂಗ್ ಇರುವ ಹಣವು ಕೂಡ ಬಿಡುಗಡೆ ಆಗಲಿದೆ ಎಂದು ಸರ್ಕಾರ ತಿಳಿಸಿದೆ.
ಹಾಗಾದ್ರೆ ಇದುವರೆಗೆ ಹಣ ಬಿಡುಗಡೆ ಆಗದೇ ಇರುವ ಮಹಿಳೆಯರು ಏನು ಮಾಡಬೇಕು ಯಾರ ಸಂಪರ್ಕ ಮಾಡಬೇಕು ಎನ್ನುವುದನ್ನು ತಿಳಿಯೋಣ.
ಮೊದಲನೆಯದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವಂತೆ, ಬ್ಯಾಂಕ್ ನಲ್ಲಿ ಯಾವುದೇ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಿಕೊಳ್ಳಿ.
ಅಂದರೆ ನಿಮ್ಮ ಖಾತೆಗೆ ಈ ಕೆ ವೈ ಸಿ ಮಾಡಿಸಿಕೊಳ್ಳುವುದು, ಆಧಾರ್ ಸೀಡಿಂಗ್, ಆಧಾರ್ ಕಾರ್ಡ್ ಅಪ್ಡೇಟ್, NPCI ಮ್ಯಾಪಿಂಗ್ ಈ ಎಲ್ಲಾ ಕೆಲಸಗಳನ್ನು ಮಾಡಿಕೊಂಡರೆ ಖಾತೆಗೆ ಹಣ ಜಮಾ ಆಗುತ್ತದೆ.
ಮಹಿಳೆ ಒಬ್ಬರು ಬ್ಯಾಂಕ್ ಆಫ್ ಬರೋಡದಲ್ಲಿ ಹೊಸ ಖಾತೆ ಆರಂಭಿಸಿದ ಅನಂತರ ಮೂರು ದಿನಗಳ ಅಂತರದಲ್ಲಿ ಇವರ ಖಾತೆಗೆ ಪೆಂಡಿಂಗ್ ಇರುವ ಹಣವು ಜಮಾ ಆಗಿತ್ತು, ಇದನ್ನು ಸ್ವತಃ ಮಹಿಳೆ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ತೋರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆರ್‌ಟಿಒ ಸಂಬಂಧಿಸಿದ ಎಲ್ಲಾ ಕೆಲಸಗಳು ಈ ಮನೆಯಲ್ಲೇ! ಸುಲಭ ವಿಧಾನದ ಬಗ್ಗೆ ಇಲ್ಲಿ ತಿಳಿರಿ
ಹಾಗಾಗಿ ನಿಮ್ಮ ಬ್ಯಾಂಕ್ ಖಾತೆ ಬಹಳ ಹಿಂದಿನದಾಗಿದ್ದು ಆಕ್ಟಿವ್ ಆಗಿಲ್ಲದೆ ಇದ್ದರೆ ಅಥವಾ ಮಿನಿಮಮ್ ಬ್ಯಾಲೆನ್ಸ್ ಮಾಡದೇ ಇದ್ದರೆ ನೇಮಕಾತಿಗೆ ಹಣ ಬಾರದೆ ಇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೊಸ ಖಾತೆಯನ್ನು ತೆರೆಯಿರಿ ಹಾಗೂ ನಿಮ್ಮ ಖಾತೆಯನ್ನು ಆಕ್ಟಿವ್ ಇರಿಸಿ.
ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿಯುವುದು ಹೇಗೆ?
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಡಿ ಬಿ ಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ ನಂತರ ಆಧಾರ್ ಸಂಖ್ಯೆಯನ್ನು ಕೊಟ್ಟರೆ ಒಟಿಪಿ ಕಳುಹಿಸಲಾಗುತ್ತದೆ, ಅದನ್ನ ನೀವು ನಮೂದಿಸಬೇಕು.
ಬಳಿಕ ನಾಲ್ಕು ಅಂಕೆಯ ಪಾಸ್ವರ್ಡ್ ಕ್ರಿಯೇಟ್ ಮಾಡಿ ಮತ್ತೆ ಆ ಪಾಸ್ವರ್ಡ್ ಹಾಕಿದರೆ ಹೊಸ ಪುಟ್ಟ ತೆರೆದುಕೊಳ್ಳುತ್ತದೆ ಅದರಲ್ಲಿ ಪಾವತಿ ಸ್ಟೇಟಸ್ ಎನ್ನುವ ಆಯ್ಕೆ ಇದೆ ಅದರ ಮೇಲೆ ಕ್ಲಿಕ್ ಮಾಡಿ. ಈಗ ಸರ್ಕಾರದಿಂದ ಯಾವೆಲ್ಲಾ DBT ಹಣ ನಿಮ್ಮ ಖಾತೆಗೆ ಬರುತ್ತದೆಯೋ ಅವೆಲ್ಲವುದರ ಬಗ್ಗೆ ನಿಮಗೆ ಮಾಹಿತಿ ಲಭ್ಯವಾಗುತ್ತದೆ.
ಇತರೆ ವಿಷಯಗಳು:
ಇದ್ದಕ್ಕಿದ್ದಂತೆ ಇಂಥವರ BPL ಕಾರ್ಡ್ ರದ್ದು.! ಇಲ್ಲಿದೆ ಅಸಲಿ ಕಾರಣ ಬಿಚ್ಚಿಟ್ಟ ಸರ್ಕಾರ
ಅಂತಿಮ ಹಂತ ತಲುಪಿದ ಪಿಎಂ ಸೂರ್ಯ ಘರ್ ಯೋಜನೆ ಅರ್ಜಿ ವಿಧಾನ