ಹಲೋ ಗೆಳೆಯರೇ, ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನಲಿಕಲಿ ಪಾಠಗಳ ಕುರಿತು ಲೇಟೆಸ್ಟ್ ನೋಟಿಸ್ ಒಂದನ್ನು ಜಾರಿ ಮಾಡಿದ್ದು, ಪ್ರಮುಖ ನಿರ್ದೇಶನಗಳನ್ನು ನೀಡಿದೆ. ನಲಿಕಲಿ ಪಾಠ, ಚಟುವಟಿಕೆಗಳ ಕುರಿತು ಏನೆಲ್ಲಾ ಹೇಳಿದೆ ಎಂದು ಇಲ್ಲಿ ತಿಳಿಯಬಹುದು.
ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 3ನೇ ತರಗತಿ ವರೆಗೂ ಅನುಸರಿಸುತ್ತಿರುವ ನಲಿಕಲಿ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾ ಪ್ರವೇಶ, ಸೇತುಬಂಧ ಮತ್ತು ಕಲಿಕಾಂಶಗಳ ಕಲಿಕೆಯನ್ನು ಪ್ರಮುಖವಾಗಿ ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ತಿಳಿಸಿದೆ. ಎಲ್ಲ ಜಿಲ್ಲೆ, ಬ್ಲಾಕ್ ಅಧಿಕಾರಿಗಳು ಈ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
Contents
ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ
- 1ನೇ ತರಗತಿ ವಿದ್ಯಾರ್ಥಿಗಳಿಗೆ ಜೂನ್ 01 ರಿಂದ 19 ವರೆಗೂ 40 ದಿನಗಳ ವಿದ್ಯಾಪ್ರವೇಶ ಕಾರ್ಯಕ್ರಮವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು.
- ಈ ಕ್ರಮಗಳ ಕುರಿತು ಪರಿಷ್ಕೃತ ಚಟುವಟಿಕೆಗಳನ್ನು ಡಿಎಸ್‌ಇಆರ್‌ಟಿ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಲಾಗುವುದು.
- 2 ಮತ್ತು 3ನೇ ತರಗತಿ ಮಕ್ಕಳಿಗೆ ಜೂನ್ 1 ರಿಂದ 30 ರವರೆಗೆ ಸೇತುಬಂಧ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದು.
- ವಿದ್ಯಾರ್ಥಿಗಳ ಅಭ್ಯಾಸ ಪುಸ್ತಕಗಳಲ್ಲಿ ಕಲಿಕಾ ಚಟುವಟಿಕೆ ಅಳವಡಿಸಲಾಗಿದ್ದು, ಸುಗಮಕಾರರಿಗೆ ನೀಡಿದ ಸೂಚನೆಯಂತೆ ಕಾರ್ಯ ನಿರ್ವಹಿಸಬೇಕು.
- ಬರವಣಿಗೆ, ಅಭ್ಯಾಸ ಹಾಗೂ ಸ್ವಯಂ ಮೌಲ್ಯಮಾಪನಕ್ಕೆ ವಿಫುಲವಾದ ಅವಕಾಶ ನೀಡಿದ್ದು, ನಿರ್ವಹಣೆ ನಂತರದಲ್ಲಿ ಸುಗಮಕಾರರು ಇವುಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು, ವಿದ್ಯಾರ್ಥಿಗಳು ಮಾಡಿರುವ ತಪ್ಪುಗಳನ್ನು ತಿದ್ದಿ ಸೂಕ್ತ ಹಿಮ್ಮಾಹಿತಿಯನ್ನು ನೀಡಿ ಮಗುವಿನ ಕಲಿಕೆಗೆ ಮುಂದಾಗಬೇಕು.
ಕಲಿಕಾಂಶದ ಗುಂಪು, ಅಭ್ಯಾಸ ಅಥವಾ ಬಳಕೆಯ ಗುಂಪು ಮತ್ತು ಮೌಲ್ಯಮಾಪನ ಗುಂಪುಗಳ ಬಳಕೆಗೆ ಅವಕಾಶವನ್ನು ಕಲ್ಪಿಸಬೇಕು. ಮಕ್ಕಳ ಕಲಿಕೆಯ ಕುರಿತ ಪ್ರೋಗ್ರಾಮ್‌ಗಳ ಅನುಷ್ಠಾನವನ್ನು ಪರಿಶೀಲಿಸಲು ಎಲ್ಲ ಹಂತದ ಅಧಿಕಾರಿಗಳು ನಿಯಮಿತವಾಗಿ ಸ್ಕೂಲ್‌ಗಳಿಗೆ ಭೇಟಿ ಕೈಗೊಳ್ಳುವ ಮೂಲಕ ಸಮರ್ಥ ಮೇಲುಸ್ತುವಾರಿ ಮತ್ತು ಮಾರ್ಗದರ್ಶನದೊಂದಿಗೆ ಪ್ರಾಥಮಿಕ ತರಗತಿಯ ಮಕ್ಕಳ ಕಲಿಕೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಶಿಕ್ಷಣ ಇಲಾಖೆ ತಿಳಿಸಿದೆ.
ಇಂಗ್ಲಿಷ್ ನಲಿಕಲಿ ಕಾರ್ಯಕ್ರಮಕ್ಕೆ ಆದ್ಯತೆ
ಇಂಗ್ಲಿಷ್ ನಲಿಕಲಿ ಕಾರ್ಯಕ್ರಮದಲ್ಲಿ ಶೇಕಡ.20 ರಷ್ಟು ಕೇಳುವುದು ಮತ್ತು ಮಾತನಾಡುವುದು, ಹಾಗೂ ಶೇಕಡ.80 ಓದುವುದು, ಬರೆಯುವ ಕೆಲಸದ ಮೇಲೆ ಕೇಂದ್ರೀಕರಿಸಬೇಕು. ಕ್ರಿಯಾತ್ಮಕ ವ್ಯಾಕರಣಗಳು, ಶಬ್ಧಕೋಶವನ್ನು ಅಭಿವೃದ್ಧಿ ಮಾಡುವ ಸಲುವಾಗಿ ಭಾಷಾ ಕಲಿಕೆಯ ಆಟಗಳು – ಸಂಭಾಷಣೆಯ ವೃತ್ತವನ್ನು ಆಯ್ಕೆ ಮಾಡಿಕೊಳ್ಳಬೇಕು.
ಇಂಗ್ಲಿಷ್ ನಲಿಕಲಿ ಕಾರ್ಯಕ್ರಮದ ಅಡಿಯಲ್ಲಿ ಐ.ಸ್ಪೈ, ಪಾಸಿಂಗ್ ದಿ ಪಾರ್ಸೆಲ್, ಫೈರ್ ಇನ್ ದಿ ಮೌಂಟೇನ್ & ಸೈಮನ್‌ಸೇಸ್ ನಂತರ ಆಟಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ
ಮೌಲ್ಯಾಂಕನ ಅನುಷ್ಠಾನಕ್ಕೆ ಕ್ರಮವಹಿಸುವುದು
ಪ್ರತಿ ಅಭ್ಯಾಸ ಸಹಿತ ನಲಿಕಲಿ ಪಠ್ಯಪುಸ್ತಕಗಳ ಲಾಸ್ಟ್ ಅಲ್ಲಿ ವಿಷಯವಾರು ಕಲಿಕೆಯ ಫಲಿತಾಂಶವನ್ನು ನೀಡಗುವುದು. ಕಲಿಕಾ ಫಲಗಳನ್ನು ಸಂಕಲನಾತ್ಮಕ & ರಚನಾತ್ಮಕ ಮೌಲ್ಯಮಾಪನಕ್ಕೆ ಅನುಗುಣವಾಗಿ ವರ್ಗೀಕರಿಸಲಾಗುವುದು, ಸುಗಮಕಾರರು ಅವುಗಳನ್ನು ಅವಲೋಕಿಸಿ, ಮೌಲ್ಯಾಂಕನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಇಲಾಖೆ ನಿರ್ದೇಶನದಲ್ಲಿ ತಿಳಿಸಿದೆ.
ಇತರೆ ವಿಷಯಗಳು
ರಾಜ್ಯದ ಜನರ ಜೀವಕ್ಕೆ ಬಿಸಿಲಿನ ಕಂಟಕ.! 6 ಜಿಲ್ಲೆಗಳಿಗೆ ಹೀಟ್ ವೇವ್ ಅಲರ್ಟ್ ಘೋಷಣೆ