rtgh

IPL : ಹಾರ್ದಿಕ್‌ ಪಾಂಡ್ಯ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್.!‌ ಮತ್ತೆ ರೋಹಿತ್‌ಗೆ ನಾಯಕನ ಪಟ್ಟ?

ipl news 2024

ಹಲೋ ಸ್ನೇಹಿತರೇ, ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ತನ್ನ ಯಶಸ್ವಿ ನಾಯಕರಾದ ರೋಹಿತ್‌ ಶರ್ಮಾ ಸ್ಥಾನಕ್ಕೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಕರೆತಂದಿದೆ ಇದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ, ತವರಿನ ಅಂಗಳದಲ್ಲೇ ನಾಯಕ ಹಾರ್ದಿಕ್‌ ವಿರುದ್ಧ ಫ್ಯಾನ್ಸ್‌ ತಿರುಗಿ ಬಿದ್ದಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟಿಗರಾದ ಆಡಮ್‌ ಗಿಲ್‌ ಕ್ರಿಸ್ಟ್‌ & ಮೈಕಲ್‌ ವಾನ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. IPL ಬಗ್ಗೆ ಒಂದಷ್ಟು ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ipl news 2024

ಬೆಂಗಳೂರು: 17 ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 5 ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸುತ್ತಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ವಿರುದ್ಧವೇ ಫ್ಯಾನ್ಸ್‌ಗಳು ತಿರುಗಿಬಿದ್ದಿದ್ದಾರೆ. ಮುಂಬೈ ಇಂಡಿಯನ್ಸ್‌ ಆಡುತ್ತಿರುವ ಪ್ರತಿ ಪಂದ್ಯದಲ್ಲೂ ಕ್ರೀಡಾಂಗಣದಲ್ಲಿ ಸೇರುವ ಪ್ರೇಕ್ಷಕರು ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ ಅವರಿಗೆ ಸಾಕಷ್ಟು ಕಾಟಗಳನ್ನು ಕೊಡುತ್ತಿದ್ದಾರೆ.

IPL 2024 ಟೂರ್ನಿ ಪ್ರಾರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಹಿಂದೆ ಮುಂದೆ ಯೋಚಿಸದೆ ತನಗೆ 5 ಬಾರಿ ಟ್ರೋಫಿ ಗೆದ್ದುಕೊಟ್ಟ ನಾಯಕ ರೋಹಿತ್‌ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್‌ ಪಾಂಡ್ಯಗೆ ಕ್ಯಾಪ್ಟನ್ಸಿ ಕಿರೀಟ ನೀಡಿತು. ಇದು ಮುಂಬೈ ಇಂಡಿಯನ್ಸ್‌ ಅಭಿಮಾನಿ ಬಳಗಕ್ಕೆ ಇನ್ನಿಲ್ಲದ ಅಸಮಾಧಾನ ಉಂಟುಮಾಡಿದೆ. ಸೋಷಿಯಲ್‌ ಮೀಡಿಯಾವಲ್ಲದೇ ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರು ಕೂಡ ಪಾಂಡ್ಯ ವಿರುದ್ಧ ಘೋಷಣೆಯನ್ನು ಕೂಗಿ, ಕಾಲೆಳೆಯುವ ಕೆಲಸವನ್ನು ಮಾಡುತ್ತಿದ್ದಾರೆ.

ಇದರ ಬಗ್ಗೆ ಮಾಜಿ ಕ್ರಿಕೆಟಿಗರಾದ ಆಸ್ಟ್ರೇಲಿಯಾದ ಆಡಮ್‌ ಗಿಲ್‌ಕ್ರಿಸ್ಟ್‌ & ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್‌ ವಾನ್‌ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳು ರೊಚ್ಚಿಗೇಳಲು ಮಾಜಿ ನಾಯಕ ರೋಹಿತ್‌ ಶರ್ಮಾ ಕಾರಣ ಎಂದು ಹೇಳಿದ್ದಾರೆ. ಬೇರೆ ಕ್ರೀಡಾಂಗಣಗಳಲ್ಲಿ ಮಾತ್ರವಲ್ಲ ಮುಂಬೈ ಇಂಡಿಯನ್ಸ್‌ ತಂಡದ ಮನೆಯಂಗಣದಲ್ಲೂ ವಾಂಖೆಡೆ ಕ್ರೀಡಾಂಗಣದಲ್ಲೂ ಅಭಿಮಾನಿಗಳು ಕ್ಯಾಪ್ಟನ್‌ ವಿರುದ್ಧವೇ ತಿರುಗಿ ಬಿದ್ದಿರುವುದು ಕ್ರಿಕೆಟ್‌ ಲೋಕದಲ್ಲಿ ಅಚ್ಚರಿ ಉಂಟುಮಾಡಿದೆ.

ಭಾರತದಲ್ಲಿ ಭಾರತೀಯ ಆಟಗಾರನ ವಿರುದ್ಧವೇ ಪ್ರೇಕ್ಷಕರು ಇಷ್ಟರ ಮಟ್ಟಿಗೆ ತಿರುಗಿ ಬಿದ್ದಿದ್ದು ಈ ಹಿಂದೆ ಎಂದಿಗೂ ಕಂಡಿಲ್ಲ ಎಂದು ಮೈಕಲ್‌ ವಾನ್‌ ಹೇಳಿಕೆ ನೀಡಿದ್ದಾರೆ. ಕ್ಲಬ್‌ ಪ್ರೈರಿ ಫೈರ್‌ ಪಾಡ್‌ಕಾಸ್ಟ್‌ ಕಾರ್ಯಕ್ರಮದಲ್ಲಿ ಆಡಮ್‌ ಗಿಲ್ಕ್ರಿಸ್ಟ್‌ ಜೊತೆಗೆ ಮೈಕಲ್‌ ವಾನ್‌ ಈ ವಿಚಾರ ಚರ್ಚೆ ಮಾಡಿದರು.

ನಾಯಕನ ವಿಚಾರ ಸಾಕಷ್ಟು ವಿವಾದ ಎಬ್ಬಿಸಿರುವ ಕಾರಣದಿಂದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ರೋಹಿತ್‌ ಶರ್ಮಾ ಮರಳಿ ಕ್ಯಾಪ್ಟನ್‌ ಆಗುತ್ತಾರೆಯೇ? ಎಂದು ಭಾರಿ ಚರ್ಚೆಯಾಗುತ್ತಿದೆ. ಅಹ್ಮದಾಬಾದ್‌& ಹೈದರಾಬಾದ್‌ನಲ್ಲಿ ಇದನ್ನು ನಿರೀಕ್ಷೆ ಮಾಡಿದ್ದರು. ಆದರೆ, ಮುಂಬೈ ಇಂಡಿಯನ್ಸ್‌ ತಂಡದ ಮನೆ ಅಂಗಳದಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲೂ ಪ್ರೇಕ್ಷಕರ ಈ ವರ್ತನೆ ಅಚ್ಚರಿ ಉಂಟು ಮಾಡಿದೆ,” ಎಂದು ಮೈಕಲ್‌ ವಾನ್‌ ತಿಳಿಸಿದ್ದಾರೆ.

ಈ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡ ಆಡಮ್‌ ಗಿಲ್‌ಕ್ರಿಸ್ಟ್‌, ಮುಂಬೈ ಇಂಡಿಯನ್ಸ್‌ ತಂಡದಲ್ಲಿ ರೋಹಿತ್‌ ಶರ್ಮಾ ಅವರು ಬೀರಿರುವ ಪ್ರಭಾವ ಕಾರಣ ಅಭಿಮಾನಿಗಳು ಹೊಸ ಕ್ಯಾಪ್ಟನ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಹೇಳಿದರು.

“ಹಾರ್ದಿಕ್‌ ಪಾಂಡ್ಯರನ್ನು ಗುಜರಾತ್‌ ತಂಡದಿಂದ ಕರೆತಂದು ಏಕಾಏಕಿ ನಾಯಕನಾಗಿ ಮಾಡಿದ್ದು ಈಗ ಮುಂಬೈ ಇಂಡಿಯನ್ಸ್‌ ತಂಡಕ್ಕೆ ತಲೆನೋವು ತಂದಿದೆ. ಏಕಾಏಕಿ ರೋಹಿತ್‌ ಶರ್ಮಾ ಅವರಿಂದ ನಾಯಕತ್ವ ಕಿತ್ತುಕೊಂಡಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಮುಂಬೈ ಇಂಡಿಯನ್ಸ್‌ ತಂಡ ಏಪ್ರಿಲ್‌ 7ಕ್ಕೆ ತನ್ನ ಮುಂದಿನ ಪಂದ್ಯವನ್ನು ತವರಿನಂಗಣ ವಾಂಖೆಡೆ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಪೈಪೋಟಿ ನಡೆಸುತ್ತದೆ. ಈ ಪಂದ್ಯದಲ್ಲಿಯಾದರೂ ಹಾರ್ದಿಕ್ ಪಾಂಡ್ಯ ಪರವಾಗಿ ಫ್ಯಾನ್ಸ್‌ ನಿಲ್ಲುತ್ತಾರೆಯೇ? ಕಾದು ನೋಡಬೇಕಿದೆ. ಹ್ಯಾಟ್ರಿಕ್‌ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್‌ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದ್ದು, ಮೊದಲ ಗೆಲುವಿನ ಹುಡುಕಾಟದಲ್ಲಿದೆ.

ಇತರೆ ವಿಷಯಗಳು

ಗೃಹಲಕ್ಷ್ಮಿ 8ನೇ ಕಂತು ಏಪ್ರಿಲ್ 2ನೇ ವಾರಕ್ಕೆ ರಿಲೀಸ್.!‌ ಪ್ರತಿ ತಿಂಗಳ ಸ್ಟೇಟಸ್‌ ಈ ಪೋರ್ಟಲ್‌ನಲ್ಲಿ ಚೆಕ್‌ ಮಾಡಿ

ಹೊಸ 5g ಸ್ಮಾರ್ಟ್ ಫೋನ್ ಬಿಡುಗಡೆ : ಕೇವಲ 12,000ಕ್ಕೆ ಬ್ರಾಂಡ್ ಮೊಬೈಲ್ ಸಿಗುತ್ತೆ

Spread the love

Leave a Reply

Your email address will not be published. Required fields are marked *