rtgh

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬರುತ್ತೆ : ನಿಮ್ಮ ಊರಿನ ಹೆಸರು ಇದೆಯಾ ನೋಡಿ

Heavy rains in some districts of Karnataka

ನಮಸ್ಕಾರ ಸ್ನೇಹಿತರೆ ಕರುನಾಡು ರಣ ಬೇಸಿಗೆಯ ಬೆಂಕಿ ಬಿಸ್ಲಿನ ಶಾಖಕ್ಕೆ ಕಂಗಾಲಾಗಿದ್ದು ಇದೀಗ ಮಳೆಯ ಸಿಂಚನಕ್ಕೆ ತಂಪಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಭಯಂಕರ ಬಿರು ಬೇಸಿಗೆ ಲಕ್ಷಣಗಳನ್ನು ಹುಟ್ಟುಹಾಕಿದ ಮಾರ್ಚ್ ತಿಂಗಳು ಇದೀಗ ಅಪರೂಪಕ್ಕೆ ಮಳೆ ಬರುವಂತಹ ಸೂಚನೆಯನ್ನು ತಿಳಿಸಿದೆ.

Heavy rains in some districts of Karnataka
Heavy rains in some districts of Karnataka

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿ ವರ್ಷ ಬೇಸಿಗೆಯ ತಾಪಮಾನ ಹೆಚ್ಚಾಗುತ್ತಿತ್ತು ಆದರೆ ಇದೀಗ ಮಾರ್ಚ್ ತಿಂಗಳಲ್ಲಿಯೇ ಮಿತಿಮೀರಿದ ಉಷ್ಣಾಂಶ ಈ ವರ್ಷ ದಾಖಲಾಗಿ ಉಷ್ಣಾಲೆ ಎದುರಾಗುವ ಮುನ್ಸೂಚನೆ ಕಂಡುಬಂದಿತ್ತು ಆದರೆ ಇದೀಗ ಕರ್ನಾಟಕದ ಹಲವು ಕಡೆಗಳಲ್ಲಿ ಮಾರ್ಚ್ ತಿಂಗಳಲ್ಲಿ ಲಘು ಮಳೆಯಾಗುತ್ತಿದೆ.

ಬಿಸಿಲು ನಾಡಲ್ಲಿ ಮಳೆಯ ಸಿಂಚನ ಆಗಲಿದೆ :

ಭಾರತೀಯ ಹವಾಮಾನ ಇಲಾಖೆಯು ನೀಡಿರುವ ಮಳೆ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಮುನ್ಸೂಚನೆ ಕಂಡು ಬರುತ್ತಿದೆ. ಸಾಧಾರಣ ಮಳೆ ಕೆಲವು ಜಿಲ್ಲೆಗಳಲ್ಲಿ ಆಗುತ್ತಿದ್ದು ಚಿಕ್ಕಮಗಳೂರು ಕೊಡಗು, ಮೈಸೂರು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯು ವರದಿ ಮಾಡಿದೆ.

ಅಲ್ಲದೆ ಬಿಸಿಲು ನಾಡು ಎಂದೇ ಕುಖ್ಯಾತವಾಗಿರುವ ಹಾಗೂ ಅಧಿಕ ತಾಪಮಾನದ ಜಿಲ್ಲೆಗಳಾಗಿರುವ ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿಯೂ ಕೂಡ ಲಘುಮಣೆಯಾಗಿದೆ.

ಇದನ್ನು ಓದಿ : ಬೆಳ್ಳಂಬೆಳಗ್ಗೆ ಸತತ ಏರಿಕೆಯಾಗಿದ್ದ ಚಿನ್ನದ ಬೆಲೆ ಕುಸಿತ : ಖರೀದಿಸಲು ಮುಗಿಬಿದಿದ್ದರೆ ಗ್ರಾಹಕರು ..!

ಕಲಬುರ್ಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಮಳೆ :

37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಲಬುರಗಿ ನಗರದಲ್ಲಿ ಮಾರ್ಚ್ ಹದಿನಾರು ರಂದು ದಾಖಲಾಗಿತ್ತು ಅಲ್ಲದೆ ಮೋಡಕವಿಧ ವಾತಾವರಣ ಕಲಬುರಗಿ ನಗರದ ಹಲವು ಕಡೆಗಳಲ್ಲಿ ಸಂಜೆ ನಿರ್ಮಾಣವಾಗಿ ಅದಾದ ನಂತರ ಕೆಲವು ಕಡೆ ಹತ್ತು ನಿಮಿಷಗಳ ವರೆಗೆ ಸಾಧಾರಣ ಮಳೆಯಾಗಿದೆ.

ಅದೇ ರೀತಿ ಬೀದರ್ ನಲ್ಲಿಯೂ ಕೂಡ ಮಾರ್ಚ್ ಹದಿನೇಳರಂದು ಮಳೆಯಾಗಿದ್ದು ಹೀಗೆ ಸಾಧಾರಣ ಮಳೆ ಕೆಲವು ಕಡೆ ಆಗುತ್ತಿರುವುದರಿಂದ ಉತ್ತಮ ಮುಂಗಾರು ಆಗಮನದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.

ಯಾವ ಸ್ಥಳಗಳಲ್ಲಿ ಮಳೆಯಾಗಿದೆ :

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ವಾರ ಮಳೆಯ ದರ್ಶನ ವಾಗಿದ್ದು ರಾಜ್ಯದಲ್ಲಿ ಮಾರ್ಚ್ 13 ರಿಂದ ಮಳೆ ಸಿಂಚನವಾಗುತ್ತಿತ್ತು ಮಾರ್ಚ್ ಅಧಿಕ ಉಷ್ಣಾಂಶ ಹೊಂದಿದ್ದ ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿಯೂ ಕೂಡ ಮಳೆಯಾಗುವುದರ ಮೂಲಕ ರಾಜ್ಯದ ರೈತರಿಗೆ ಹೊಸ ಭರವಸೆಯನ್ನು ಹುಟ್ಟು ಹಾಕಿದೆ ಎಂದು ಹೇಳಬಹುದು. ಯಾವ ದಿನಾಂಕದಂದು ಯಾವ ಸ್ಥಳಗಳಲ್ಲಿ ಎಷ್ಟು ಮೀಟರ್ ಮಳೆ ಸುರಿದಿದೆ ಎಂದು ನೋಡುವುದಾದರೆ,

  1. ಮಾರ್ಚ್ 13ರಂದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಿಗ್ಗಲು ಹಾಗೂ ಸೋಮವಾರಪೇಟೆ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
  2. ಮಾರ್ಚ್ 14 ರಂದು ಚಿಕ್ಕಮಗಳೂರು ತಾಲೂಕಿನ ಕೊಳಗಾವಿ ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ.
  3. ಮಾರ್ಚ್ 15 ರಂದು 27 ಮಿಲಿ ಮೀಟರ್ ಮಳೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಲ್ಲರಿಯಲ್ಲಿ ಆಗಿತ್ತು, ಅದೇ ರೀತಿ 9.5 ಮಿಲಿಮೀಟರ್ ಹೆಗ್ಗಡಹಳ್ಳಿ 3.5 ಮಿಲಿಮೀಟರ್ ಹಾರ್ಡ್ಯ ಹಾಗೂ 3.5 ಮಿಲಿಮೀಟರ್ ಕಲ್ಲಂಬಾಳು ಸ್ಥಳಗಳಲ್ಲಿ ಮಳೆ ಸುರಿದಿತ್ತು.
  4. ಮಾರ್ಚ್ 16 ರಂದು 10 ನಿಮಿಷಗಳ ಕಾಲ ಕಲಬುರ್ಗಿಯಲ್ಲಿ ಲಭಮಳೆಯಾಗಿದೆ.
  5. ಮಾರ್ಚ್ 17ರಂದು ಚಿಕ್ಕಮಗಳೂರು ಜಿಲ್ಲೆ, ಮುಡುದರೂ ತಾಲೂಕಿನ ಆಲೂರು ಸಮೀಪದ ಜೇನು ಗದ್ದೆ ಕಣತಿ ಹುಣಸೆಹಳ್ಳಿ ಭಾಗಗಳಲ್ಲಿ ಮತ್ತೆ ಮಳೆಯಾಗಿದೆ ಅದರ ಜೊತೆಗೆ ಬೀದರ್ ಜಿಲ್ಲೆಯ ಬೀದರ್ ನಗರ ಕಮಲನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿರುಗಾಳಿ ಮಿಶ್ರಿತ ಭಾರಿ ಮಳೆಯಾಗಿದ್ದು ಅಲ್ಲಿನ ಜನರ ಜೀವನ ಅಸ್ತವಿಸ್ತಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
  6. ಮಾರ್ಚ್ 25 ರಂದು ಈ ವರ್ಷ ಭರ್ಜರಿ ಮಳೆಯಾಗಲಿದ್ದು ಉತ್ತಮ ಮುಂಗಾರು ಮಳೆ ನಿರೀಕ್ಷೆಯಿದ್ದು ಈಗಾಗಲೇ ಖಚಿತ ಮಳೆಯ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ದೇಶದಾದ್ಯಂತ ಮುಂಗಾರು ಮಳೆ ಜೂನ್ ನಿಂದ ಪ್ರಾರಂಭ :

ದೇಶದಾದ್ಯಂತ ಜೂನ್ ನಿಂದ ಮುಂಗಾರು ಮಳೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿದ್ದು ಉತ್ತಮ ರೀತಿಯಲ್ಲಿ ಈ ಮುಂಗಾರು ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ ತಿಂಗಳ ನಂತರ ಪೆಸಿಫಿಕ್ ಮಹಾಸಾಗರದಲ್ಲಿ ಮಳೆಯ ಕೊರತೆಗೆ ಕಾರಣವಾಗಿದ್ದ ಎಲ್ಲ ನೀನು ಮತ್ತು ಲೀನಾ ಪರಿಸ್ಥಿತಿಗಳ ಪ್ರಭಾವ ಕಡಿಮೆಯಾಗಲಿದೆ ಎಂದು ಭಾರತೀಯ ಅವಮಾನ ಇಲಾಖೆ ಪ್ರಕಟಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸದ್ಯಕ್ಕೆ ಕಳೆದ ವಾರದಿಂದ ಸಾಧಾರಣ ಮಳೆ ಆಗಲಿದ್ದು ಮತ್ತಷ್ಟು ಮಾರ್ಚ್ ಇಪ್ಪತ್ತರ ನಂತರ ಸಾಕಷ್ಟು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಅಲ್ಲದೆ ಮಾರ್ಚ್ ಕೊನೆಯ ಹೊತ್ತಿಗೆ ಹಾಗೂ ಯುಗಾದಿಯ ಸಂದರ್ಭದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

ಒಟ್ಟಾರೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಕಳೆದ ವರ್ಷ ರೈತರಿಗೆ ಕೈಕೊಟ್ಟಿದ್ದ ಮುಂಗಾರು ಮಳೆ ಈ ವರ್ಷ ರೈತರ ಕೈ ಹಿಡಿಯಲಿದೆ ಎಂದು ತಿಳಿಸಿದೆ ಒಟ್ಟಾರೆ ಮುಂಗಾರು ಮಳೆ ಈ ವರ್ಷ ಚೆನ್ನಾಗಿ ಸುರಿದರೆ ರಾಜ್ಯದ ರೈತರು ಸಾಕಷ್ಟು ಕೃಷಿ ಚಟುವಟಿಕೆಗಳಿಗೆ ಸಾಧ್ಯವಾದಷ್ಟು ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಹಾಗಾಗಿ ಇನ್ನೇನು ಮುಂಗಾರು ಮಳೆ ಜೂನ್ ನಿಂದ ಪ್ರಾರಂಭವಾಗಲಿದೆ ಎಂಬ ಈ ಮಾಹಿತಿಯನ್ನು ಎಲ್ಲಾ ರೈತ ಸ್ನೇಹಿತರು ಹಾಗೂ ನಿಮಗೆ ತಿಳಿದಿರುವ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *