rtgh

7ನೇ ವೇತನ ಆಯೋಗ ಜಾರಿ :ನೌಕರರ ಮೂಲವೇತನದಲ್ಲಿ ಎಷ್ಟು ಏರಿಕೆಯಾಗಲಿದೆ ಗೊತ್ತಾ .?

Implementation of 7th Pay Commission

ನಮಸ್ಕಾರ ಸ್ನೇಹಿತರೆ ಏಳನೇ ವೇತನ ಆಯೋಗ ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದು ಇದೀಗ ಈ ಆಯೋಗದ ವರದಿ ಸರ್ಕಾರದ ಕೈ ಸೇರಿದೆ. ರಾಜ್ಯ ಸರ್ಕಾರವು ಕೂಡ ಈ ವರದಿಯ ಬಗ್ಗೆ ನಿರ್ಧಾರವನ್ನು ಶೀಘ್ರದಲ್ಲಿ ಕೈಗೊಳ್ಳಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Implementation of 7th Pay Commission
Implementation of 7th Pay Commission

ಒಂದು ವೇಳೆ 7 ನೇ ವೇತನ ಆಯೋಗ ಜಾರಿಯಾದರೆ, ಸರ್ಕಾರಿ ನೌಕರರ ಮೂಲವೇತನ ಎಷ್ಟು ಹೆಚ್ಚಾಗುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸರ್ಕಾರಿ ನೌಕರರು ತಿಳಿದುಕೊಳ್ಳಬಹುದು.

7ನೇ ವೇತನ ಆಯೋಗ ಜಾರಿಯಾದರೆ ಮೂಲವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ :

ರಾಜ್ಯ ಸರ್ಕಾರಿ ನೌಕರರ ಮೂಲವೇತನದಲ್ಲಿ ಏಳನೇ ವೇತನ ಆಯೋಗ ಜಾರಿಯಾದರೆ 27.5% ಹೆಚ್ಚಳ ಮಾಡುವುದರ ಜೊತೆಗೆ ತಿಂಗಳಿಗೆ 17 ಸಾವಿರದಿಂದ 22 ಸಾವಿರ ರೂಪಾಯಿಗಳವರೆಗೆ ಕನಿಷ್ಠ ವೇತನವನ್ನು ಹೆಚ್ಚಿಸುವಂತೆ ಈ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮಾಜಿ ಮುಖ್ಯ ಕಾರ್ಯದರ್ಶಿ ಕೆ ಸುಧಾಕರ್ ರಾವ್ ನೇತೃತ್ವದ ಆಯೋಗವು ಏಳನೇ ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಇದನ್ನು ಓದಿ : ಈ ಕೆಲಸ ಮಹಿಳೆ ಮಾತ್ರ ಮಾಡುತ್ತಾಳೆ ಆದರೆ ಪುರುಷನಿಗೆ ಮಾಡಲು ಸಾಧ್ಯವಿಲ್ಲ : ಹಾಗಾದ್ರೆ ಆ ಕೆಲಸ ಯಾವುದು ಗೊತ್ತ .?

ಮೂಲವೇತನದಲ್ಲಿ 27.5% ಹೆಚ್ಚಳ ಘೋಷಣೆ :

ಸರ್ಕಾರಿ ನೌಕರರ ಮೂಲವೇದನದಲ್ಲಿ ಏಳನೇ ವೇತನ ಆಯೋಗ ಜಾರಿಯಾದರೆ ಅದರಲ್ಲಿ 27.5% ಹೆಚ್ಚಳ ಘೋಷಣೆ ಮಾಡಲಾಗಿದೆ ಇದರ ಜೊತೆಗೆ ಬೇಸಿಕ್ ಸಲಾರಿ 15000 ದಿಂದ 27000ಗಳಿಗೆ ಏರಿಕೆಯಾಗಲಿದ್ದು,

  1. ಹೊಸ ವರದಿಯ ಪ್ರಕಾರ ಹಳೆಯ ಬೇಸಿಕ್ ಸ್ಯಾಲರಿ 20900 ರೂಪಾಯಿ ಆದರೆ ಹೊಸ ವರದಿಯ ಪ್ರಕಾರ ಮೂಲವೇತನದಲ್ಲಿ 33300 ಏರಿಕೆಯಾಗುತ್ತದೆ.
  2. ಹಳೆಯ ವೇತನ 40900ಗಳಿದ್ದರೆ ಹೊಸ ವರದಿಯ ಪ್ರಕಾರ ಸರ್ಕಾರಿ ನೌಕರರ ಮೂಲವೇದ 65,950 ಗೆ ಏರಿಕೆ ಆಗುತ್ತದೆ.
  3. ಅದೇ ರೀತಿ ಬೇಸಿಕ್ ಸ್ಯಾಲರಿ 50150 ರೂಪಾಯಿ ಇದ್ದರೆ 7ನೇ ವೇತನ ಆಯೋಗದ ವರದಿಯ ಪ್ರಕಾರ 79900 ರೂಪಾಯಿ ಆಗುತ್ತದೆ.

ಕೇವಲ ಏಳನೇ ವೇತನ ಆಯೋಗದಲ್ಲಿ ಮೂಲವೇತನನ್ನು ಹೆಚ್ಚಾಗುವುದಲ್ಲದೆ ಅದರ ಜೊತೆಗೆ ಡಿಎಐಆರ್ ಎಲ್ಲವು ಸೇರಿಕೊಂಡು ಮತ್ತಷ್ಟು ಸಂಬಳ ಹೆಚ್ಚಾಗಲಿದೆ.

ಇನ್ನು ಆರಂಭಿಕ ಕನಿಷ್ಠ ವೇತನ ಹಿರಿಯ ಶ್ರೇಣಿ ನೌಕರರದ್ದು ಈಗ 104600 ರೂಪಾಯಿಗಳಿದ್ದು ಅದನ್ನು 1,67,200 ಗಳಿಗೆ ಪರಿಷ್ಕರಿಸುವಂತೆ 7ನೇ ವೇತನ ಆಯೋಗದಲ್ಲಿ ಶಿಫಾರಸು ಮಾಡಲಾಗಿದೆ. ವಿಟ್ಟರಿ ಸಂಪೂರ್ಣವಾಗಿ ಹಳೆಯ ಕನಿಷ್ಠ ವೇತನ ಮತ್ತು ಹೊಸ ಮೂಲವೇತನ ಹಾಗೂ ಹೊಸ ವೇತನ ಗ್ರೋಸ್ ಎಲ್ಲದರ ವಿವರವನ್ನು ಈ ಲೇಖನದಲ್ಲಿ ನೋಡಬಹುದು.

ಏಳನೇ ವೇತನ ಆಯೋಗದ ಅನುಪಾತ :

ಪ್ರಸ್ತುತ 1:8.86 ಕನಿಷ್ಠ ಮತ್ತು ಗರಿಷ್ಠ ವೇತನಗಳ ಅನುಪಾತವನ್ನು 18.93 ಕ್ಕೆ 7ನೇ ವೇತನ ಆಯೋಗದ ವರದಿಯು ಹೆಚ್ಚಿಸಿದೆ. ಈ ವರದಿ 2022ರ ಜೂನ್ ನಿಂದ ಅನುಷ್ಠಾನ ಮಾಡುವಂತೆ ಆಯೋಗ ತಿಳಿಸಿದ್ದು ಈ ಶಿಫಾರಸ್ಸು ಅನುದಾನಿತ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯಗಳ ಬೋಧಕೇತರರ ನೌಕರರು ಹಾಗೂ ಸ್ಥಳೀಯ ಸಂಸ್ಥೆ ಗಳಿಗೂ ಅನ್ವಯವಾಗುತ್ತದೆ.

ಇನ್ನು ಮಹಿಳಾ ನೌಕರರು ಮತ್ತು ಪಿಂಚಣಿದಾರರ ನಿಯಮದಲ್ಲಿ ಬದಲಾವಣೆಗೆ ಶಿಫಾರಸು ಮಾಡಲಾಗಿದ್ದು ತಮ್ಮ ಪತಿಯ ಬದಲು ಮಹಿಳಾ ಸರ್ಕಾರಿ ನೌಕರರು ಮತ್ತು ಪಿಂಚಣಿ ದಾರರಿಂದ ಕುಟುಂಬ ಪಿಂಚಣಿಗಾಗಿ ಮಕ್ಕಳ ನಾಮ ನಿರ್ದೇಶನ ಮಾಡಬಹುದೆಂದು 7ನೆ ವೇತನ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಕ್ಷಮ ನ್ಯಾಯಾಲಯದಲ್ಲಿ ಪ್ರಸ್ತಾವಿಕ ತಿದ್ದುಪಡಿಯ ಮಹಿಳಾ ಸರ್ಕಾರಿ ನೌಕರರು ವಿಚ್ಛೇದನ ಪ್ರಕ್ರಿಯೆ ಬಾಕಿ ಇರುವಾಗ ಅಥವಾ ಸರ್ಕಾರಿ ನೌಕರರು ಅಥವಾ ಮಹಿಳಾ ಪಿಂಚಣಿದಾರರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಥವಾ ಭಾರತೀಯ ದಂಡ ಸಂಹಿತೆ ಅಥವಾ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ತನ್ನ ಗಂಡನ ವಿರುದ್ಧ ದಾಖಲು ಮಾಡಿದ್ದರೆ ಆಕೆಯು ತನ್ನ ಮಗುವನ್ನು ಅಥವಾ ಮಕ್ಕಳನ್ನು ಕುಟುಂಬ ಪಿಂಚಣಿಯನ್ನು ಪಡೆಯುವುದಕ್ಕಾಗಿ ನಾಮ ನಿರ್ದೇಶನ ಮಾಡಬಹುದಾಗಿದೆ ಎಂದು ಸೂಚನೆ ನೀಡಲಾಗಿದೆ.

ಮೂಲ ಪಿಂಚಣಿಯು ಇನ್ನೂ 70 ರಿಂದ 80 ವರ್ಷ ವಯಸ್ಸಿನ ಪಿಂಚಣಿ ದಾರರಿಗೆ ಹೆಚ್ಚುವರಿ ಶೇಕಡಾ ಹತ್ತರಷ್ಟು ಹೆಚ್ಚಳ ಆಗಬೇಕು ಎಂದು 7ನೆ ವೇತನ ಆಯೋಗದ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಹಣಕಾಸು ಇಲಾಖೆಯ ಸಲಹೆಗಳನ್ನು ಆಧರಿಸಿ ಸರ್ಕಾರ ಈ ಬಾರಿ ಜಾರಿ ಮಾಡಲು ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಒಟ್ಟಾರೆ ರಾಜ್ಯ ಸರ್ಕಾರವು ಇದೀಗ ಸಾಕಷ್ಟು ದಿನಗಳ ಬೇಡಿಕೆಯಾದ ಏಳನೇ ವೇತನ ಆಯೋಗದ ವರದಿಯನ್ನು ಜಾರಿ ಮಾಡಲು ಇನ್ನೇನು ಕೆಲವೇ ಕ್ಷಣಗಳು ಮಾತ್ರ ಬಾಕಿ ಇದೆ. ಸರ್ಕಾರಿ ನೌಕರರಿಗೆ ಹೆಚ್ಚು ಸಂಬಳ ಏಳನೇ ವೇತನ ಆಯೋಗ ಜಾರಿಯಾದರೆ ಸಿಗಲಿದೆ. ಹಾಗಾಗಿ ಇನ್ನೇನು ಶೀಘ್ರದಲ್ಲಿ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡುತ್ತದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *