rtgh

ಮಹಿಳೆಯರಿಗೆ 15,000 ಹಣ ಹಾಗೂ ಉಚಿತ ಟ್ರೈನಿಂಗ್ ಸಿಗಲಿದೆ : ನಮೋ ಡ್ರೋನ್ ದೀದಿ ಯೋಜನೆಗೆ ಅರ್ಜಿ ಸಲ್ಲಿಸಿ

Namo Drone Didi Scheme for Women

ನಮಸ್ಕಾರ ಸ್ನೇಹಿತರೆ ಇನ್ನಷ್ಟು ಬೆಳೆಸುವ ಸಲುವಾಗಿ ಹಾಗೂ ಮಹಿಳೆಯರನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಪರಿಚಯಿಸಿದೆ ಎಂದು ಹೇಳಬಹುದು.

Namo Drone Didi Scheme for Women
Namo Drone Didi Scheme for Women

ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ದೇಶದಲ್ಲಿ ಕೇಂದ್ರ ಸರ್ಕಾರವು ಪರಿಚಯಿಸಿದೆ ಅದರಲ್ಲಿಯೂ ಮುಖ್ಯವಾಗಿ ದೇಶದ ಬೆನ್ನೆಲುಬಾಗಿರುವ ರೈತರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ.

ಮಹಿಳಾ ರೈತರಿಗೆ ಹೊಸ ಯೋಜನೆ :

ನಮಗೆಲ್ಲ ತಿಳಿದಿರುವ ಹಾಗೆ ಸಾಮಾನ್ಯವಾಗಿ ಹೆಚ್ಚಾಗಿ ಕೃಷಿಯಲ್ಲಿ ತೊಡಗಿಕೊಂಡಿರುವವರು ಪುರುಷರೇ ಆಗಿರುತ್ತಾರೆ ಗದ್ದೆಯಲ್ಲಿ ಕೆಲಸ ಮಾಡುವುದರಿಂದ ಹಿಡಿದು ಕೃಷಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿದ್ದರೂ ಕೂಡ ಪುರುಷರ ರೈತರ ಹೆಚ್ಚಾಗಿ ಮಾಡುತ್ತಿರುತ್ತಾರೆ.

ಆದರೆ ಪುರುಷರಿಗೂ ಬೆನ್ನೆಲುಬಾಗಿ ಕೃಷಿಯನ್ನು ಮಾಡುತ್ತಿರುವ ಸಾಕಷ್ಟು ಹೆಣ್ಣು ಮಕ್ಕಳು ಕೂಡ ಇರುವುದನ್ನು ನಾವು ನೋಡಬಹುದು ಹೌದು ಪುರುಷರಿಗೆ ಹೋಲಿಕೆ ಮಾಡಿದರೆ ಕೃಷಿ ಮಾಡುವ ಹೆಂಗಸರ ಸಂಖ್ಯೆ ಕಡಿಮೆ ಇರಬಹುದು ಆದರೆ ಕೃಷಿಯನ್ನು ಸಾಕಷ್ಟು ಮಹಿಳೆಯರು ಪೋಷಿಸಿಕೊಂಡು ಬಂದಿದ್ದಾರೆ ಎಂದು ಹೇಳುವ ಮೂಲಕ ಕೃಷಿ ಮಾಡುವ ಮಹಿಳೆಯರ ಸಬಲೀಕರಣವನ್ನು ಈ ನೆಟ್ಟಿನಲ್ಲಿ ಸಾಧಿಸುವುದಕ್ಕಾಗಿ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ.

ಕೇಂದ್ರದಿಂದ ಯಾವ ರೀತಿಯ ಯೋಜನೆ ಜಾರಿಗೆ ಬಂದಿದೆ ಈ ಯೋಜನೆಯ ಪ್ರಯೋಜನವನ್ನು ಹೇಗೆ ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ನಮೋ ಡ್ರೋನ್ ದೀದಿ ಯೋಜನೆ :

ಕೇಂದ್ರ ಸರ್ಕಾರವು ಈ ಯೋಜನೆಯನ್ನು ಕೃಷಿ ಮಾಡುವ ಮಹಿಳೆಯರಿಗೆ ಇನ್ನಷ್ಟು ಉತ್ತೇಜನ ನೀಡುವ ಸಲುವಾಗಿ ಹಾಗೂ ಕೃಷಿ ಕ್ಷೇತ್ರವನ್ನು ಸಾಕಷ್ಟು ಬೆಳೆಸುವ ಸಲುವಾಗಿ ಪರಿಚಯಿಸಿದ್ದು ಮಹಿಳೆಯರು ಹದಿನೈದು ಸಾವಿರ ರೂಪಾಯಿಗಳವರೆಗೆ ಈ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಇದರ ಜೊತೆಗೆ ಕೃಷಿಯ ಬಗ್ಗೆ ಹೆಚ್ಚಿನ ಅರಿವನ್ನು ಹಾಗೂ ಆಸಕ್ತಿಯನ್ನು ಮಹಿಳೆಯರಲ್ಲಿ ಮೂಡಿಸಲು ಉಚಿತವಾಗಿ ತರಬೇತಿಯನ್ನು ಕೂಡ ಈ ಯೋಜನೆ ಮೂಲಕ ನೀಡಲಾಗುತ್ತದೆ.

ಇದನ್ನು ಓದಿ : ರೈತರಿಗೆ ಬೇಸಿಗೆಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು 4 ಲಕ್ಷ ಸಹಾಯಧನ ಹೆಚ್ಚಿನ ಮಾಹಿತಿ ಇಲ್ಲಿದೆ

ಯೋಜನೆಯ ಪ್ರಯೋಜನಗಳು :

15 ದಿನಗಳವರೆಗೆ ಕೃಷಿ ಮಾಡುವ ಮಹಿಳೆಯರಿಗೆ ಈ ಯೋಜನೆಯ ಅಡಿಯಲ್ಲಿ ತರಬೇತಿಯನ್ನು ನೀಡಲಾಗುತ್ತದೆ ಇತರಬೇತಿಯಲ್ಲಿ ಹೇಗೆ ಮಹಿಳೆಯರು ಡ್ರೋನ್ ಅನ್ನು ಚಲಾಯಿಸಬೇಕು ಎಂಬುದರ ಬಗ್ಗೆ ಸಾಕಷ್ಟು ವಿವರವಾಗಿ ತಿಳಿದುಕೊಳ್ಳಬಹುದು. 15 ದಿನಗಳ ತರಬೇತಿಯ ಜೊತೆಗೆ ಸರ್ಕಾರ ಹದಿನೈದು ಸಾವಿರ ರೂಪಾಯಿಗಳ ಹಣವನ್ನು ಕೂಡ ಮಹಿಳೆಯರಿಗೆ ನೀಡುತ್ತದೆ ಇದರಿಂದ ಸುಲಭವಾಗ ಡ್ರೋನ್ ಖರೀದಿಸಿ.

ಕೃಷಿಗೆ ಆ ಮೂಲಕ ನಾಶಕ ಗೊಬ್ಬರ ಮೊದಲಾದವುಗಳನ್ನು ಸುಲಭವಾಗಿ ಸಿಂಪಡಿಸಬಹುದಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೂ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಹಾಗೂ ಕೃಷಿಯಲ್ಲಿ ಈಗಾಗಲೇ ತೊಡಗಿಕೊಂಡಿರುವ ಮಹಿಳೆಯರು ಕೂಡ ಡ್ರೋನ್ ತರಬೇತಿಯನ್ನು ಈ ಯೋಜನೆ ಮೂಲಕ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ಕೃಷಿ ಮಾಡುವ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಮಹಿಳೆಯರು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

  1. ಆಧಾರ್ ಕಾರ್ಡ್.
  2. ಪ್ಯಾನ್ ಕಾರ್ಡ್.
  3. ನಿವಾಸ ಪ್ರಮಾಣ ಪತ್ರ.
  4. ಪಾಸ್ ಬುಕ್.
  5. ಪಾಸ್ಪೋರ್ಟ್ ಸೈಜ್ ಫೋಟೋ.
  6. ಸ್ವಸಹಾಯ ಗುಂಪಿನಲ್ಲಿ ಇದ್ದರೆ ಅದರ ಗುರುತಿನ ಚೀಟಿ.
    ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ ತರಬೇತಿ ಹಾಗೂ ಅದರ ಜೊತೆಗೆ 15000 ಹಣವನ್ನು ಕೂಡ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ಕೇಂದ್ರ ಸರ್ಕಾರದ ಈ ಯೋಜನೆಗೆ ಮಹಿಳೆಯರು ಅರ್ಜಿಯನ್ನು ಸಲ್ಲಿಸಬೇಕಾದರೆ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಈ ಯೋಜನೆಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಕೃಷಿಯಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಸಾಕಷ್ಟು ಪ್ರಯೋಜನವಾಗಲಿ ಎನ್ನುವ ಉದ್ದೇಶದಿಂದ ಹಾಗೂ ಅವರಲ್ಲಿ ಕೃಷಿ ಮಾಡುವ ಆಸೆಯನ್ನು ಇನ್ನಷ್ಟು ಉತ್ತೇಜಿಸುವ ಸಲುವಾಗಿ ಜೊತೆಗೆ ಕೃಷಿ ಕ್ಷೇತ್ರವನ್ನು ಬೆಳೆಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಮಹಿಳೆಯರು ಪಡೆದುಕೊಂಡು ತಮ್ಮ ಕೃಷಿ ಚಟುವಟಿಕೆಗಳನ್ನು ಸುಲಭವಾಗಿ ಮಾಡಬಹುದಾಗಿದೆ.

ಹಾಗಾಗಿ ಮಾಹಿತಿಯನ್ನು ನಿಮಗೆ ತಿಳಿದಿರುವ ಕೃಷಿ ಮಾಡುತ್ತಿರುವ ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಅವರು ತಮ್ಮ ಕೃಷಿಗೆ ಸಂಬಂಧಿಸಿದಂತೆ ಸುಲಭ ವಿಧಾನಗಳನ್ನು ಕೇಂದ್ರ ಸರ್ಕಾರದ ಈ ಯೋಜನೆ ಮೂಲಕ ಡ್ರೋನ್ ಖರೀದಿ ಮಾಡಿ ಕೃಷಿ ಚಟುವಟಿಕೆಗಳನ್ನು ಸುಲಭ ರೀತಿಯಲ್ಲಿ ಮಾಡಬಹುದು ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *