rtgh

ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ನೇಮಕಾತಿ : ಒಟ್ಟು 513 ಹುದ್ದೆಗಳು ಖಾಲಿ .!

Recruitment for the posts of Anganwadi Teacher and Assistant

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಉದ್ಯೋಗಾವಕಾಶವನ್ನು ನಿರುದ್ಯೋಗ ಯುವಕ ಯುವತಿಯರು ಪಡೆಯಬಹುದಾಗಿದೆ. ಅಂಗನವಾಡಿ ಹುದ್ದೆಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಅಂಗನವಾಡಿಗಳಲ್ಲಿ ಎಷ್ಟು ಸಹಾಯಕ್ಕೆ ಹುದ್ದೆಗಳು ಹಾಗೂ ಎಷ್ಟು ಟೀಚರ್ ಹುದ್ದೆಗಳು ಖಾಲಿ ಇವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.

Recruitment for the posts of Anganwadi Teacher and Assistant
Recruitment for the posts of Anganwadi Teacher and Assistant

ಅದರ ಜೊತೆಗೆ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ವಿದ್ಯಾರ್ಹತೆ ವೇತನ ಶ್ರೇಣಿ ಅರ್ಜಿ ಶುಲ್ಕದ ವಿವರ ಪ್ರಮುಖ ದಿನಾಂಕಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸುಲಭವಾಗಿ ತಿಳಿಯಬಹುದು.

ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆಗಳು :

ಈಗಾಗಲೇ ಅಂಗನವಾಡಿ ಹುದ್ದೆಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಸೂಚನೆಯನ್ನು ಕೂಡ ಪ್ರಕಟಣೆ ಮಾಡಿದೆ. ಎಲ್ಲರಹ ಅಭ್ಯರ್ಥಿಗಳು ಈ ಒಂದು ಅಧಿಸೂಚನೆಯನ್ನು ಕೂಡ ಪಾಲಿಸಬೇಕು ಅಂಗನವಾಡಿ ಸಹಾಯಕಿ ಹಾಗೂ ಟೀಚರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಮಾತ್ರ ನೇಮಕ ಆಗುತ್ತಾರೆ. ಅದರಂತೆ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ವಿವರವನ್ನು ನೋಡುವುದಾದರೆ,

ನೇಮಕಾತಿ ಸಂಸ್ಥೆ ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಖಾಲಿ ಇರುವ ಹುದ್ದೆಗಳ ಸಂಖ್ಯೆ513
ಖಾಲಿ ಇರುವ ಹುದ್ದೆಗಳುಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಟೀಚರ್
ಉದ್ಯೋಗದ ಸ್ಥಳ ಕೋಲಾರ
ಅರ್ಜಿ ಸಲ್ಲಿಸುವ ಲಿಂಕ್ https://wcd.karnataka.gov.in/

ಹೀಗೆ ಈಗಾಗಲೇ ಜಿಲ್ಲಾ ಮಾರು ಅಂಗನವಾಡಿ ಹುದ್ದೆಗಳ ಆದಿ ಸೂಚನೆಯನ್ನು ಕೂಡ 2024ನೇ ಸಾಲಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಬೇರೆ ಬೇರೆ ವಿವಿಧವಾದ ಜಿಲ್ಲೆಗಳನ್ನು ಕೂಡ ಅಂಗನವಾಡಿ ಟೀಚರ್ ಹಾಗೂ ಸಹಾಯಕಿ ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.

ಒಟ್ಟು 513 ಅಂಗನವಾಡಿ ಸಹಾಯಕ್ಕೆ ಹಾಗೂ ಕಾರ್ಯಕರ್ತೆ ಹುದ್ದೆಗಳು ಖಾಲಿ ಇದ್ದು ಟೀಚರ್ ಆಗುವಂತಹ ಅವಕಾಶವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲ್ಪಿಸಿಕೊಟ್ಟಿದೆ ಎಂದು ಹೇಳಬಹುದು. ಇದರಿಂದ ತಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಹೋಳಿ ಭರ್ಜರಿ ಗಿಫ್ಟ್.!‌ ಇಳಿಕೆ ಕಂಡ ಪೆಟ್ರೋಲ್‌-ಡೀಸೆಲ್

ವಿದ್ಯಾರ್ಹತೆ :

ಅಂಗನವಾಡಿಯಲ್ಲಿ ಖಾಲಿ ಇರುವಂತಹ ಸಹಾಯಕ ಹುದ್ದೆ ಹಾಗೂ ಟೀಚರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು.

ಯಾವುದೇ ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಓದಿದಂತಹ ಅಭ್ಯರ್ಥಿಗಳು ಅಂಗನವಾಡಿಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯಸ್ಸಿನ ಮಿತಿ :

ಅಂಗನವಾಡಿಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಗಳು ತತ್ಸಮನ ವಿದ್ಯಾರ್ಥಿಯನ್ನು ಪಡೆದಿರಬೇಕು ಹಾಗೂ ವಯಸ್ಸಿನ ಮಿತಿಯಲ್ಲಿ ಅರ್ಹತೆಗಳನ್ನು ಕೂಡ ಹೊಂದಿರಬೇಕಾಗುತ್ತದೆ.

ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಹಾಗೂ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅಂಗನವಾಡಿಯಲ್ಲಿ ಖಾಲಿ ಇರುವ ಸಹಾಯಕ ಹಾಗೂ ಟೀಚರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿತ್ತು ನೇರವಾಗಿ ಅಂಗನವಾಡಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಸೂಚನೆ ಯಲ್ಲಿ ತಿಳಿಸಲಾಗಿದೆ.

ವೇತನ ಶ್ರೇಣಿ :

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಸೂಚನೆಯಲ್ಲಿ ಯಾವುದೇ ರೀತಿಯ ವೇತನದ ಬಗ್ಗೆ ಮಾಹಿತಿಯನ್ನು ತಿಳಿಸಿ ಇಲ್ಲ.

ಅರ್ಜಿ ಶುಲ್ಕದ ವಿವರ :

ಅಂಗನವಾಡಿಯಲ್ಲಿ ಖಾಲಿ ಇರುವಂತೆ ಈ ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ ಎಲ್ಲಾ ಅಭ್ಯರ್ಥಿಗಳು ಕೂಡ ಉಚಿತವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು :

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಅಂಗದವಾಡಿಯಲ್ಲಿ ಕಾದಿರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆನ್ಲೈನ್ ಮುಖಾಂತರ ಮಾರ್ಚ್ 12ನೇ ತಾರೀಕಿನಿಂದ ಅರ್ಮಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಇದೀಗ ಏಪ್ರಿಲ್ 19 ನೇ ತಾರೀಖಿನವರೆಗೆ ಅರ್ಜಿಯನ್ನು ಸಲ್ಲಿಸಲು ನಿಗದಿತ ದಿನಾಂಕವನ್ನು ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ಅಂಗನವಾಡಿಯಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟಾರೆ ಕರ್ನಾಟಕ ಸರ್ಕಾರವು ಕೋಲಾರ ಜಿಲ್ಲೆಯಲ್ಲಿ ಖಾಲಿ ಇರುವಂತಹ ಅಂಗನವಾಡಿ ಹುದ್ದೆಗಳಿಗೆ ಅರ್ಜಿಯನ್ನು ವಾಹನ ಮಾಡಲಾಗಿದ್ದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸರ್ಕಾರಿ ಉದ್ಯೋಗವನ್ನು ಪಡೆಯಬಹುದಾಗಿದೆ.

ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಅದರಲ್ಲಿ ಮುಖ್ಯವಾಗಿ 10 ರಿಂದ 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಶೇರ್ ಮಾಡುವ ಮೂಲಕ ಸರ್ಕಾರಿ ಉದ್ಯೋಗವನ್ನು ಪಡೆಯಬಹುದೆಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *