ಹಲೋ ಗೆಳೆಯರೇ, ಆಹಾರ ಇಲಾಖೆಯಿಂದ ಅಕ್ಕಿ ಬದಲು ನೀಡುವ ಎಪ್ರಿಲ್-2024 ತಿಂಗಳ ಅರ್ಥಿಕ ಸಹಾಯಧನ ಹಣವನ್ನು ಅರ್ಹ ಪಡಿತರ ಚೀಟಿಯ ಗ್ರಾಹಕರಿಗೆ ಜಮಾ ಮಾಡಲಾಗುವುದು. ನಿಮ್ಮ ಬ್ಯಾಂಕ್ ಖಾತೆಗೆ ಈ ಹಣ ಜಮಾ ಆಗಿರುವುದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದನ್ನು ಇಲ್ಲಿ ತಿಳಿಯಿರಿ.
ಪಡಿತರ ಚೀಟಿ ಹೊಂದಿರುವವರು ತಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ನೇರವಾಗಿ ಭೇಟಿ ಮಾಡದೇ ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್‌ನಲ್ಲಿ ಎಪ್ರಿಲ್-2024 ತಿಂಗಳ ಅಕ್ಕಿ ಬದಲು ನೀಡುವ ಹಣ ನಿಮಗೆ ವರ್ಗಾವಣೆ ಆಗಿದೆಯೇ?
ಇದಲ್ಲದೇ ಯಾರಿಗೆಲ್ಲಾ ಎಪ್ರಿಲ್-2024 ತಿಂಗಳ ಅರ್ಥಿಕ ಸಹಾಯಧನ ಸಿಗಲಿದೆ & ಅರ್ಹರ ಪಟ್ಟಿಯನ್ನು ಆಹಾರ ಇಲಾಖೆಯ ಅಧಿಕೃತ ಜಾಲತಾಣ ಭೇಟಿ ಮಾಡಿ ಯಾವ ವಿಧಾನ ಅನುಸರಿಸಿ ಪಡೆದುಕೊಳ್ಳಬೇಕು?
ಆಹಾರ ಇಲಾಖೆಯ ಅಧಿಕೃತ ಈ ವೆಬ್ಸೈಟ್‌ನ್ನು ನಿಮ್ಮ ಮೊಬೈಲ್‌ನಲ್ಲಿ ನೇರವಾಗಿ ಭೇಟಿ ಮಾಡಿಕೊಂಡು ಈ ಕೆಳಗಿನ ಹಂತಗಳನ್ನು ಅನುಸರಿಸಿ.
Step-1: ಪಡಿತರ ಚೀಟಿ ಹೊಂದಿರುವ ಗ್ರಾಹಕರು ಮೊದಲು ಈ Annabhagya beneficiary list ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ಜಾಲತಾಣವ ಭೇಟಿ ಮಾಡಿ. (ಗಮನಿಸಿ: ಮೊಬೈಲ್ ನಲ್ಲಿ ನೋಡುವಾಗ “Desktop view” ಆಯ್ಕೆ ಕ್ಲಿಕ್ ಮಾಡಿ) ಬಳಿಕ ಈ ಪುಟದಲ್ಲಿ “ಇ-ಸೇವೆ” ಬಟನ್ ಮೇಲೆ ಕ್ಲಿಕ್ ಮಾಡಿ.
Step-2: ಇದಾದ ಬಳಿಕ “ಇ-ಪಡಿತರ ಚೀಟಿ” ವಿಭಾಗದ ಮೇಲೆ ಒತ್ತಿ ಅಲ್ಲೇ ಕೆಳಗೆ ತೋರಿಸುವ “ಹಳ್ಳಿ ಪಟ್ಟಿ” ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ & ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ “GO” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹಳ್ಳಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ರೇಷನ್ ಕಾರ್ಡ್ ಪಡೆಯಲು ಅರ್ಹರಿರುವ ಕಾರ್ಡ್‌ಗಳ RC number, ಹೆಸರು, ವಿಳಾಸ, ಪಡಿತರ ಚೀಟಿ ವಿಧ & ಪಡಿತರ ಚೀಟಿಯಲ್ಲಿ ಎಷ್ಟು ಜನ ಸದಸ್ಯರಿದ್ದರೆ ಎಂದು ತೋರಿಸುತ್ತದೆ. ಈ ಪಟ್ಟಿಯಲ್ಲಿರುವವರಿಗೆ ಪಡಿತರ ದಾನ್ಯ & ಅಕ್ಕಿ ಹಣ ಪಡೆಯಲು ಅರ್ಹರು.
ಇ-ಆಡಳಿತ ಕಚೇರಿಯಿಂದ ಎಲ್ಲಾ ಸರ್ಕಾರಿ ಯೋಜನೆಗಳ ಅರ್ಥಿಕ ನೆರವಿನ ವರ್ಗಾವಣೆ ಸ್ಥಿತಿಯನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಲು DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಪಡಿಸಿದ್ದು, ಈ ಕೆಳಗಿನ ಹಂತವನ್ನು ಅನುಸರಿಸಿ ಅನ್ನಭಾಗ್ಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದೆಯಾ? ಎಂದು ಚೆಕ್ ಮಾಡಿಕೊಳ್ಳಿ.
Step-1: ಫಲಾನುಭವಿ ಗ್ರಾಹಕರು ಪ್ರಥಮದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ> Download DBT karnataka app ಗೂಗಲ್ ಪ್ಲೇ ಸ್ಟೋರ್ ಭೇಟಿ ನೀಡಿ DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ಇದಾದ ಬಳಿಕ ಗ್ರಾಹಕರ ಆಧಾರ್ ಕಾರ್ಡ್ ನಂಬರ್ ಅನ್ನು ಹಾಕಿ ಆಧಾರ್ ಕಾರ್ಡ್ ನಮೂದಿಸಿರುವ ಮೊಬೈಲ್ ನಂಬರ್‌ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಿ.
Step-2: ನಂತರ ನಿಮಗೆ ಸದಾ ನೆನಪಿನಲ್ಲಿ ಉಳಿಯುವ 4 ಅಂಕಿಯ ಪಾಸ್ವರ್ಡಅನ್ನು ರಚನೆ ಮಾಡಿಕೊಳ್ಳಿ. ನಂತರ ಫಲಾನುಭವಿಯ ವೈಯಕ್ತಿಕ ವಿವರ ತೋರಿಸುತ್ತದೆ ಕೊನೆಯಲ್ಲಿ ಮೊಬೈಲ್ ಸಂಖ್ಯೆ ಹಾಕಿ “ಸಲ್ಲಿಸಿ” ಎಂದು ತೋರಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
Step-3: 4 ಸಂಖ್ಯೆಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡ ನಂತರ karnataka DBT ಮೊಬೈಲ್ ಅಪ್ಲಿಕೇಶನ್ ಮುಖಪುಟ ಭೇಟಿ ಮಾಡಿ ಈಗಾಗಲೇ ನೀವು ರಚನೆ ಮಾಡಿಕೊಂಡ 4 ಅಂಕಿಯ ಪಾಸ್ವರ್ಡ ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕಾಣುವ “ಪಾವತಿ ಸ್ಥಿತಿ/Payment Status” ಬಟನ್ ಮೇಲೆ ಕ್ಲಿಕ್ ಮಾಡಿ ನಂತರ “ಅನ್ನಭಾಗ್ಯ ಯೋಜನೆ” ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮೆಯಾದ ವಿವರ ತಿಳಿಯಿರಿ..
ಇತರೆ ವಿಷಯಗಳು
ಈಗ ಎಲ್ಲಾ ಉದ್ಯೋಗಿಗಳು ಹಳೆಯ ಪಿಂಚಣಿ ಯೋಜನೆಯಡಿ ₹30000 ಲಾಭ!
ಹೊಸ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ.! ಅದರಲ್ಲಿ ಹೆಸರಿದ್ರೆ ಮಾತ್ರ ಮೇ ತಿಂಗಳಿನಿಂದ ಉಚಿತ ಪಡಿತರ