rtgh

ಕೃಷಿ ಭಾಗ್ಯ ಯೋಜನೆ ಸಹಾಯಧನಕ್ಕೆ ಅರ್ಜಿ ಆಹ್ವಾನ : ನಿಮಗೆ ಹಣ ಸಿಗುತ್ತಾ ಮೊಬೈಲ್ ನಲ್ಲಿ ಚೆಕ್ ಮಾಡಿ

Application Invitation for Krishi Bhagya Yojana Subsidy

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಬರಗಾಲದ ಹಿನ್ನೆಲೆಯಲ್ಲಿ ಕೃಷಿಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಕೃಷಿಭಾಗ್ಯ ಯೋಜನೆಯ ಅಡಿಯಲ್ಲಿ ಮಳೆಯಾಶ್ರಿತ ರೈತರಿಂದ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.

Application Invitation for Krishi Bhagya Yojana Subsidy
Application Invitation for Krishi Bhagya Yojana Subsidy

ಅದರಂತೆ ಈ ಯೋಜನೆಗೆ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಹೇಗೆ ಅವಕಾಶ ಕಲ್ಪಿಸಲಾಗಿದೆ ಪ್ರಮುಖ ದಾಖಲೆಗಳು ಏನಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ತಿಳಿದುಕೊಳ್ಳಬಹುದು.

2023-24ನೇ ಸಾಲಿನ ಕೃಷಿ ಭಾಗ್ಯ ಯೋಜನೆ :

ಕೃಷಿಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರವು 202324ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆ 106 ತಾಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಿದೆ ಎಂದು ಹೇಳಬಹುದು. ಈ ಯೋಜನೆಯ ಮೂಲಕ ರೈತರು ಬದು ನಿರ್ಮಾಣ ಕೃಷಿ ಹೊಂಡ ಹನಿ ಅಥವಾ ನೀರಾವರಿ ಹಾಗೂ ಪಂಪ್ಸೆಟ್ ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಲಿಂಕ್ : ಇಲ್ಲಿದೆ ಕ್ಲಿಕ್ ಮಾಡಿ

ಇದನ್ನು ಓದಿ : ಸತತ ಏರಿಕೆಯ ನಡುವೆ ಚಿನ್ನದ ಬೆಲೆ ಇಳಿಕೆ : ಖರೀದಿಗೆ ಬೆಸ್ಟ್ ಟೈಮ್ ಇದೆ : ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.!

ಐದು ನೀರಾವರಿ ಘಟಕಗಳಿಗೆ ಸಹಾಯಧನ :

ಐದು ನೀರಾವರಿ ಘಟಕಗಳಿಗೆ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಒದಗಿಸಲಾಗುತ್ತಿದ್ದು ರೈತರು ಆ ಇದು ಎಲ್ಲಾ ಘಟಕಗಳನ್ನು ಅಳವಡಿಕೆ ಮಾಡಿಕೊಳ್ಳಲು ಕೃಷಿ ಅಧಿಕಾರಿಗಳಿಗೆ ಮನೋವೈದ್ಯಕೀಯ ಮಾಡುವಂತೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

  1. ಕ್ಷೇತ್ರ ಬದು ನಿರ್ಮಾಣ : ಕ್ಷೇತ್ರ ಪದವುಗಳನ್ನು ರೈತರ ಜಮೀನಿನಲ್ಲಿ ಪಿದ್ದ ಮಳೆ ನೀರನ್ನು ಕೋಲಾರದಂತೆ ಅದೇ ಕೃಷಿ ಭೂಮಿಯಲ್ಲಿ ಇಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ನೀರನ್ನು ಸಂಗ್ರಹಿಸಲು ಸಹಾಯಧನವನ್ನು ಕ್ಷೇತ್ರದ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒದಗಿಸುತ್ತದೆ.
  2. ಕೃಷಿಹೊಂಡ ನಿರ್ಮಾಣ : ಕೃಷಿ ಭಾಗ್ಯ ಯೋಜನೆಯ ಮತ್ತೊಂದು ಪ್ರಮುಖ ಘಟಕಾ ವಾಗಿದ್ದು ಕೃಷಿ ಹೊಂಡ ನಿರ್ಮಾಣಕ್ಕೆ ಅನುಕೂಲವಾಗುವಂತೆ ಈ ಯೋಜನೆಯನ್ನು ಕಲ್ಪಿಸಲಾಗಿದೆ. ಮಳೆ ನೀರನ್ನು ಎಲ್ಲ ರೀತಿಯ ಮಣ್ಣುಗಳಲ್ಲಿ ಸಂಗ್ರಹಣೆಗಾಗಿ 10103 ಮೀಟರ್ 12123 ಮೀಟರ್ 15153 ಮೀಟರ್ 18183 3 ಮೀಟರ್ ಹಾಗೂ 21x 21×3 ಮೀಟರ್ ಅಳತೆಯ ಕೃಷಿ ಹೊಂಡಗಳನ್ನು ತಮ್ಮ ಭೂಮಿಯಲ್ಲಿ ರೈತರು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ.
  3. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ : ಕೃಷಿ ಹೊಂಡದಲ್ಲಿ ಅನೇಕ ಆಕಸ್ಮಿಕ ಸಾವು ನೋವುಗಳು ಈ ಹಿಂದೆ ಸಂಭವಿಸಿದ ವರದಿಯಾಗಿದ್ದರಿಂದ ಇದನ್ನು ತಡೆಯುವ ಉದ್ದೇಶದಿಂದ ಕಡ್ಡಾಯವಾಗಿ ಕೃಷಿಹೊಂಡದ ಸುತ್ತಲೂ ತಂತಿ ಬೇರೆ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಸಹಾಯಧನ ನೀಡುತ್ತದೆ.
  4. ನೀರನ್ನು ಎತ್ತಲು ಪಂಪ್ಸೆಟ್ : ಇನ್ನು ಕೃಷಿ ಹೊಂಡದಲ್ಲಿ ಸಂಗ್ರಹಣೆಯಾದಂತಹ ನೀರನ್ನು ಬೆಳೆಗಳಿಗೆ ಬಳಸಿಕೊಳ್ಳಲು ರೈತರು ಡೀಸೆಲ್ ಅಥವಾ ಪೆಟ್ರೋಲ್ ಅಥವಾ ಸೋಲಾರ್ ಪಂಪ್ಸೆಟ್ ಅನ್ನು ಖರೀದಿ ಮಾಡಲು ಈ ಯೋಜನೆ ಮೂಲಕ ಅವಕಾಶ ಕಲ್ಪಿಸಲಾಗಿದೆ.
  5. ತುಂತುರು ನೀರಾವರಿ : ಸಂಗ್ರಹಣೆ ಆದಂತಹ ನೀರಿಗೆ ಅವಳ ಮಳೆ ನೀರನ್ನು ಅವಶ್ಯಕತೆ ಇದ್ದಾಗ ಬೆಳೆಗಳಿಗೆ ಬಳಸಿಕೊಳ್ಳಲು ಸೂಕ್ಷ್ಮ ನೀರಾವರಿ ಘಟಕಗಳ ಪರಿಕರಗಳನ್ನು ವಿತರಣೆ ಮಾಡುತ್ತದೆ.

ಈ ರಾಜ್ಯದ ರೈತರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ :

ರಾಜ್ಯದ ಐದು ಒಣ ಹವ ವಲಯಗಳ 24 ಬರಪೀಡಿತ ಜಿಲ್ಲೆಗಳಲ್ಲಿನ 106 ತಾಲೂಕುಗಳು ಮತ್ತು ಗಣಿಗಾರಿಕೆಯಿಂದ ಬಾದೀತ ಪ್ರದೇಶದ ರೈತರು ಮಳೆಯಾಶ್ರಿತ ಕೃಷಿ ನೀತಿ 2014ರ ಅನ್ವಯ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಕೃಷಿಭಾಗ್ಯ ಯೋಜನೆಯನ್ನು ಈ ಕೆಳಗಿನ 24 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿ ಸಲಾಗುತ್ತಿದೆ.

  1. ಬಾಗಲಕೋಟೆ
  2. ಬೆಂಗಳೂರು ಗ್ರಾಮಾಂತರ
  3. ಬೆಳಗಾವಿ
  4. ಚಾಮರಾಜನಗರ
  5. ಚಿಕ್ಕಬಳ್ಳಾಪುರ
  6. ಬಳ್ಳಾರಿ
  7. ಚಿತ್ರದುರ್ಗ
  8. ಧಾರವಾಡ
  9. ಕಲಬುರ್ಗಿ
  10. ಗದಗ
  11. ದಾವಣಗೆರೆ
  12. ಹಾಸನ
  13. ಕೊಪ್ಪಳ
  14. ಮಂಡ್ಯ
  15. ಕೋಲಾರ
  16. ಮೈಸೂರು
  17. ವಿಜಯಪುರ
  18. ಯಾದಗಿರಿ ಜಿಲ್ಲೆ
  19. ವಿಜಯನಗರ
  20. ರಾಮನಗರ
  21. ತುಮಕೂರು
  22. ಬೆಂಗಳೂರು ನಗರ
  23. ಚಿಕ್ಕಮಗಳೂರು
  24. ರಾಯಚೂರು
    ಹೀಗೆ ಈ ಜಿಲ್ಲೆಗಳಲ್ಲಿನ 106 ಆಯ್ದ ತಾಲ್ಲೂಕುಗಳ ರೈತರು ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ,

  1. ಭರ್ತಿ ಮಾಡಿದ ಅರ್ಜಿ ನಮೂನೆ
  2. ರೈತರ ಭಾವಚಿತ್ರ
  3. ಪಹಣಿ ಪ್ರತಿ
  4. ಎಫ್ ಐ ಡಿ ನಂಬರ್
  5. ಆಧಾರ್ ಕಾರ್ಡ್
  6. ಜಾತಿ ಪ್ರಮಾಣ ಪತ್ರ
  7. ಬ್ಯಾಂಕ್ ಪಾಸ್ ಬುಕ್
    ಹೀಗೆ ಕೆಲವೊಂದು ದಾಖಲೆಗಳನ್ನ ಅಭ್ಯರ್ಥಿಗಳು ಹೊಂದಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆಗೆ ಆಯಾ ಜಿಲ್ಲೆಗಳ ಅರ್ಹ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ https://raitamitra.karnataka.gov.in\ಭೇಟಿ ನೀಡಿ ಕೃಷಿ ಭಾಗ್ಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಲ್ಲದೆ ಈ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಪರ್ಕಿಸಿ ತಿಳಿದುಕೊಳ್ಳಬಹುದು.

ಒಟ್ಟಾರೆ ರಾಜ್ಯ ಸರ್ಕಾರವು ರೈತರಿಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನೀರಿನ ವ್ಯವಸ್ಥೆಯನ್ನು ಮಾಡಿಕೊಡುವ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಅರ್ಹ ರೈತರು ಪಡೆಯಬಹುದಾಗಿದೆ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *