ನಮಸ್ಕಾರ ಸ್ನೇಹಿತರೆ ಸ್ವಂತ ಮನೆ ಇಲ್ಲದ ಬಡವರಿಗೆ ವಸತಿ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಸ್ವಂತ ಮನೆಗಳನ್ನು ನಿರ್ಮಿಸಿಕೊಳ್ಳಲು ಸಬ್ಸಿಡಿ ಮೂಲಕ ನೆರವನ್ನು ನೀಡಲು ಮುಂದಾಗಿದೆ.
ಅದರಂತೆ ಪ್ರತಿಯೊಬ್ಬರೂ ಕೂಡ ಮನುಷ್ಯ ಜೀವಿಯಾಗಿದ್ದು ಅವನ ಬಹುದೊಡ್ಡ ಆಸೆ ಏನೆಂದರೆ ಅದು ಸ್ವಂತ ಮನೆ ನಿರ್ಮಿಸುವುದು. ಈ ಕನಸುಗಳನ್ನು ಶ್ರೀಮಂತ ವರ್ಗದ ಜನರು ನನಸಾಗಿಸಿಕೊಳ್ಳುತ್ತಾರೆ ಆದರೆ ಬಡವರ್ಗದ ಜನರು ಹಾಗೂ ಮಧ್ಯಮ ವರ್ಗದ ಜನರಿಗೆ ಈ ಕನಸುಗಳನ್ನು ಈಡೇರಿಸಿಕೊಳ್ಳುವುದು ಕನಸಾಗಿಯೇ ಉಳಿದಿರುತ್ತದೆ ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನಗೆ ಸ್ವಂತ ಸೂರನ್ನು ಕಟ್ಟಿಕೊಳ್ಳಲು ಬಯಸುತ್ತಿದ್ದರೆ.
ಅವರಿಗೆ ಇದೀಗ ಬಡವರ್ಗದ ಜನರ ಕನಸುಗಳನ್ನು ನನಸು ಮಾಡಲು ಕೇಂದ್ರ ಸರ್ಕಾರವು ಮುಂದಾಗಿದೆ ಎಂದು ಹೇಳಬಹುದು. ಗುಡಿಸಲು ಮುಕ್ತ ಭಾರತ ದೇಶವನ್ನು ನೋಡಬೇಕೆನ್ನುವುದು ಕೇಂದ್ರ ಸರ್ಕಾರದ ಬಹುಮುಖ್ಯ ಉದ್ದೇಶವಾಗಿರುವ ಕಾರಣದಿಂದ ಈ ಕನಸುಗಳನ್ನು ಈಡೇರಿಸಿಕೊಳ್ಳಲು ಯಾವ ತರದ ಯೋಜನೆಗಳನ್ನು ಸರ್ಕಾರ ರೂಪಿಸಿದೆ ಎಂದು ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
Contents
ಸರ್ಕಾರದಿಂದ ಬಡವರಿಗೆ ಹೊಸ ಯೋಜನೆ :
ಮುಂದಿನ ದಿನಗಳಲ್ಲಿ ಬರವ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಘೋಷಣೆಗೆ ಇನ್ನೇನು ಕೆಲವೇ ವಾರಗಳು ಬಾಕಿ ಇರುವ ಕಾರಣದಿಂದಾಗಿ ಸರ್ಕಾರವು ಚುನಾವಣೆಯ ಸಂದರ್ಭದಲ್ಲಿ ಹಲವರು ಯೋಜನೆಗಳನ್ನು ರೂಪಿಸುವುದು ಸರ್ವೇಸಾಮಾನ್ಯವಾಗಿದೆ.
ಅದರಲ್ಲಿ ಇದೀಗ ಪ್ರತಿಯೊಬ್ಬರ ಕನಸಾಗಿರುವ ಸ್ವಂತ ಮನೆ ಈ ಯೋಜನೆಯು ಬಹಳ ಸದ್ದು ಮಾಡುತ್ತಿದೆ ಏಕೆಂದರೆ ಸರ್ಕಾರದ ಈ ಯೋಜನೆ ಬಹುದೊಡ್ಡ ಯೋಜನೆಯಾಗಿ ರೂಪುಗೊಳ್ಳಲಿದೆ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಕೂಡ ಒಂದು ನಿರ್ದಿಷ್ಟ ಅವಧಿಯಲ್ಲಿ ಸ್ವಂತ ಮನೆ ಹೊಂದಿರುವ ಗುರಿಯನ್ನು ಈ ಯೋಜನೆಯಡಿಯಲ್ಲಿ ಸರ್ಕಾರ ಹೊಂದಿದೆ.
ಆದ್ದರಿಂದ ಕಟ್ಟುನಿಟ್ಟಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಹಲವಾರು ಕ್ರಮಗಳನ್ನು ಸರ್ಕಾರವು ಕೈಗೊಳ್ಳಲಿದೆ. ಹಲವಾರು ಮಧ್ಯಮ ಹಾಗೂ ಬಡವರ್ಗದ ಕುಟುಂಬಗಳಿಗೆ ಈ ಯೋಜನೆಯಿಂದ ಸಂತಸ ತಂದಿರುವ ಬಗ್ಗೆ ನೋಡಬಹುದು.
ಯೋಜನೆ ಮಾಹಿತಿ :
ಯೋಜನೆ ಹೆಸರು | ಪ್ರಧಾನ ಮಂತ್ರಿ ಆವಾಸ್ ಯೋಜನೆ |
ಯೋಜನೆ ಉದ್ದೇಶ | ಬಡವರಿಗೆ ಮನೆ ನಿರ್ಮಾಣ |
ಸರ್ಕಾರ | ಕೇಂದ್ರ ಸರ್ಕಾರ |
ಅಧಿಕೃತ ಲಿಂಕ್ | https://pmaymis.gov.in/ |
ಬಡವರಿಗಾಗಿ ಉಚಿತ ವಸತಿ ಯೋಜನೆ :
- ಬಡವರಿಗಾಗಿ ಉಚಿತ ವಸತಿ ಯೋಜನೆಯನ್ನು ಕೇಂದ್ರ ಸರ್ಕಾರವು ರೂಪಿಸುವುದರಿಂದ ಉತ್ತಮ ಪ್ರತಿಕ್ರಿಯೆಯನ್ನು ಜನರಿಂದ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
- ದೇಶದಲ್ಲಿರುವ ಮಧ್ಯಮ ಹಾಗೂ ಬಡವರ್ಗದ ಕುಟುಂಬಗಳಿಗೆ ಈ ಯೋಜನೆಯಿಂದ ತುಂಬಾ ಅನುಕೂಲವಾಗಲಿದೆ ತಮ್ಮ ಸ್ವಂತ ಮನೆಗಳನ್ನು ಬಡವರ್ಗದವರಿಗೆ ಕಟ್ಟಿಕೊಳ್ಳುವ ಕನಸನ್ನು ನನಸಾಗಿಸುವಲ್ಲಿ ಕೇಂದ್ರ ಸರ್ಕಾರ ಸಹಾಯ ಮಾಡುತ್ತದೆ.
- ಬಡವರ್ಗದ ಜನರ ಮನಸ್ಥಿತಿ ಹಾಗೂ ಜೀವನದ ಗುಣಮಟ್ಟವನ್ನು ಈ ಯೋಜನೆ ಸುಧಾರಿಸಲು ಮತ್ತು ಸಮಾಜದಲ್ಲಿ ಅವರ ಸ್ಥಾನಮಾನವನ್ನು ಬಲಪಡಿಸಲು ಕೂಡ ಸಹಾಯಮಾಡುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ದೇಶದಲ್ಲಿ ದೊಡ್ಡ ವಸತಿ ಕ್ರಾಂತಿಯಾಗುವುದು ಈ ಯೋಜನೆಯಿಂದ ಸಂದೇಹವಿಲ್ಲ.
ಬಜೆಟ್ ನಲ್ಲಿ ಈ ಯೋಜನೆಗೆ ಉತ್ತಮ ಸ್ಥಾನ :
- ಸದ್ಯ ಫೆಬ್ರವರಿ 2024ರಲ್ಲಿ ಕೇಂದ್ರದ ವಿತ್ತ ಸಚಿವೆ ಆದ ನಿರ್ಮಾಣ ಸೀತಾರಾಮನ್ ರವರು ಮಧ್ಯಂತರ ಬಜೆಟ್ ನಲ್ಲಿ ಈ ಯೋಜನೆಯ ಬಗ್ಗೆ ತಿಳಿಸಿದ್ದು ಯಶಸ್ವಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ಪ್ರಮುಖ ಸ್ಥಾನವನ್ನು ಈ ಯೋಜನೆಗೆ ಸರ್ಕಾರ ನೀಡಲಿದೆ ಎಂದು ತಿಳಿದುಬಂದಿದೆ.
- ಈ ಯೋಜನೆಗೆ ಹೆಚ್ಚಿನ ಹಣಕಾಸಿನ ಅನುದಾನವನ್ನು ಬಜೆಟ್ ನಲ್ಲಿ ನೀಡಲಾಗುವುದು ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರ ರೂಪಿಸಿರುವ ಅಂತಹ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಾದರೆ ಸರ್ಕಾರವು ಬ್ಯಾಂಕುಗಳು ವಾಣಿಜ್ಯ ಸಂಸ್ಥೆಗಳು ಮತ್ತು ಖಾಸಗಿ ವಲಯದೊಂದಿಗೆ ಸಹಕರಿಸುತ್ತದೆ.
- ಸ್ವಂತ ಮನೆ ಖರೀದಿಸಲು ಜನರಿಗೆ ಈ ಯೋಜನೆಯ ಅಡಿಯಲ್ಲಿ ಕಡಿಮೆ ದಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಸರ್ಕಾರವು ಒದಗಿಸುವ ಮೂಲಕ ಸಹಾಯ ಮಾಡುತ್ತದೆ.
ವಸತಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚಿನ ಹಣ ಬಿಡುಗಡೆ :
1.4 ಶತ ಕೋಟಿ ಜನರು ನಮ್ಮ ದೇಶದಲ್ಲಿ ವಾಸಿಸುತ್ತಿದ್ದು ಹೆಚ್ಚಿನ ಜನರು ಗ್ರಾಮೀಣ ಹಾಗೂ ಹಳ್ಳಿ ಭಾಗದಲ್ಲಿ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಿರುವುದಿಲ್ಲ ಅದರಂತೆ ನಗರ ಪ್ರದೇಶದಲ್ಲಿಯೂ ಕೂಡ ಸ್ವಂತ ಮನೆ ಇಲ್ಲದವರ ಪರಿಸ್ಥಿತಿಯನ್ನು ಕಾಣಬಹುದು. 1.5 ಮಿಲಿಯನ್ಗು ಹೆಚ್ಚು ವಸತಿ ಕೊರತೆ ನಗರದಲ್ಲಿ ಉಂಟಾಗಿದೆ
ಈ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ವಸತಿ ಯೋಜನೆಗಾಗಿ ಸರ್ಕಾರ ಬಜೆಟ್ ನಲ್ಲಿ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. 790 ಶತ ಕೋಟಿ ರೂಪಾಯಿಗಳನ್ನು ವಸತಿ ಯೋಜನೆಗೆ 202324ರಲ್ಲಿ ಮೀಸಲಿಡಲಾಗಿತ್ತು ಆದರೆ 2024 -25ರ ಬಜೆಟ್ ಮಂಡನೆಯ ಸಂದರ್ಭದಲ್ಲಿ ಹಿಂದಿನ ಬಜೆಟ್ಗಿಂತ ಶೇಕಡ 15ರಷ್ಟು ಹೆಚ್ಚಿಗೆ ವಸತಿ ಯೋಜನೆಗೆ ಅನುದಾನವನ್ನು ಅಂದರೆ 1013 ಶತ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಹೆಚ್ಚುವರಿ ಹಣವನ್ನು ಮನೆಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಹೆಚ್ಚಾಗಿ ಮಂಡಿಸಿದ ಹಣದಲ್ಲಿ ನಗರ ಮತ್ತು ಗ್ರಾಮೀಣ ಹೊಸ ವಸತಿ ಸೌಕರ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಇದರಿಂದ ಉತ್ತಮವಾದ ಸ್ಥಳವನ್ನು ಜನರಿಗೆ ಉಳಿದುಕೊಳ್ಳಲು ಒದಗಿಸುವುದು ಮತ್ತು ಅವರ ಮನಸ್ಥಿತಿ ಹಾಗೂ ಜೀವನ ಮಟ್ಟವನ್ನು ಸುಧಾರಿಸಬಹುದು.
ಇದನ್ನು ಓದಿ : ಸರ್ಕಾರಿ ಉದ್ಯೋಗ : ಒಟ್ಟು 93 ಗ್ರೂಪ್ A ಹಾಗು ಗ್ರೂಪ್ B ಹುದ್ದೆಗಳಿಗೆ ಅರ್ಜಿ ಅಹ್ವಾನ. ಯಾವ ಇಲಾಖೆ ನೋಡಿ !
ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಶಸ್ಸು :
2014ರಲ್ಲಿ ಪ್ರಧಾನಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಎಲ್ಲರಿಗೂ ಮನೆಗಳನ್ನು ನಿರ್ಮಿಸಿ ಕೊಡುವ ಕನಸನ್ನು ವೃತ್ತಿ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪ್ರಾರಂಭಿಸಿದರು.
ಗ್ರಾಮೀಣ ಅಭಿನಯನಗರ ಪ್ರದೇಶಗಳಲ್ಲಿ ಪ್ರಧಾನಮಂತ್ರಿಯವರು ರೂಪಿಸಿರುವ ಈ ಯೋಜನೆಯ ಅಡಿಯಲ್ಲಿ ವಸತಿ ರಹಿತ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮನೆಗಳನ್ನು ನಿರ್ಮಿಸಲು ಈ ಯೋಜನೆಯು ಹೆಚ್ಚು ಸಹಾಯವಾಗಿದೆ.
40 ಮಿಲಿಯ ಕಾಂಕ್ರೀಟ್ ಮನೆಗಳನ್ನು ಇದುವರೆಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಸರ್ಕಾರ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. 2025ರ ಕೊನೆಯಲ್ಲಿ ಒಟ್ಟು 100 ಮಿಲಿಯನ್ ಮನೆಗಳನ್ನು ನಿರ್ಮಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು ಹಲವಾರು ಬಡವರ್ಗದ ಜನರು ಸ್ವಂತ ಮನೆಗಳನ್ನು ಈ ಯೋಜನೆಯಿಂದ ಕಟ್ಟಿಕೊಂಡಿದ್ದಾರೆ.
ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಮಧ್ಯಂತರ ಬಜೆಟ್ ನಲ್ಲಿ ಹೆಚ್ಚಿನ ಅನುದಾನವನ್ನು ನೀಡಲಾಗಿದ್ದು ಇದರಿಂದ ಬಡವರ್ಗದ ಜನರು ಹೆಚ್ಚಿನ ಕುಲವನ್ನು ಹಾಗೂ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ಸಹಾಯವಾಗುತ್ತದೆ.
ಒಟ್ಟಾರೆ ಕೇಂದ್ರ ಸರ್ಕಾರವು ರೂಪಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಜನರು ಮನೆಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರವು ಅವರಿಗೆ ಗೃಹ ಸಾಲ ಹಾಗೂ ಹೆಚ್ಚಿನ ಸಬ್ಸಿಡಿಯನ್ನು ನೀಡುವ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಮನೆ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಬಹುದು.
ಹಂಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಸ್ವಂತ ಸೋಲಿನ ಆಸೆಯನ್ನು ಹೊಂದಿದ್ದರೆ ಕೇಂದ್ರ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ತಿಳಿಸಿ ಧನ್ಯವಾದಗಳು.