ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸೇವಿಂಗ್ ಮಾಡಲು ಬಯಸುತ್ತಾರೆ ಅದರಲ್ಲಿ ಮುಖ್ಯವಾಗಿ ಸೇವಿಂಗ್ ಅನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಮುಖ್ಯವಾದ ವಿಚಾರವಾಗಿದ್ದು ಇಂದು ತಾವು ದುಡಿದಂತಹ ಹಣವನ್ನು ಸ್ವಲ್ಪವಾದರೂ ಉಳಿಸಿದರೆ ಮುಂದಿನ ದಿನದ ಜೀವನಕ್ಕೆ ಬಹಳಷ್ಟು ಸಹಕಾರಿಯಾಗುತ್ತದೆ ಎಂಬುದು ಪ್ರತಿಯೊಬ್ಬರ ಯೋಚನೆಯಾಗಿದೆ ಹಾಗಾಗಿ ಕಷ್ಟಕಾಲ ಎಂದು ಬಂದಾಗ ನಮಗೆ ನೆರವಾಗುವುದು.
ನಾವು ಕೋರಿ ಇಟ್ಟಂತಹ ಹಣ ಹಾಗೂ ತಮಗೆ ವೃದ್ಯಾಪ್ಯದ ಸಂದರ್ಭದಲ್ಲಿ ಹೆಚ್ಚಿನ ಜನರು ಆರ್ಥಿಕ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಈ ಮೊದಲೇ ಹಣವನ್ನು ಹೂಡಿಕೆ ಮಾಡಿಟ್ಟಿರುತ್ತಾರೆ. ಹಾಗಾಗಿ ಸಣ್ಣ ಮೊತ್ತವನ್ನು ಚಿಕ್ಕವಯಸಿನಿಂದಲೇ ಉಳಿಸುತ್ತಾ ಹೋದರೆ ನಮ್ಮ ವೃದ್ಯಾಪ್ಯದ ದಿನವನ್ನು ಆರ್ಥಿಕ ತೊಂದರೆ ಇಲ್ಲದೆ ಸುಲಭವಾಗಿ ಕಳೆಯಬಹುದು ಇದೀಗ ಹಣ ಉಳಿತಾಯ ಮಾಡುವ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ.
ಹಲವು ಯೋಜನೆಗಳನ್ನು ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಜೊತೆಗೆ ಹಿರಿಯ ನಾಗರಿಕರಿಗೆ ರೂಪಿಸಿದ್ದು ಕಡಿಮೆ ಮೊತ್ತದ ಹಣವನ್ನು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪಿಂಚಣಿಯ ರೂಪದಲ್ಲಿ ವೃದ್ಯಾಪ್ಯದ ಸಮಯದಲ್ಲಿ ಹಣವನ್ನು ಪಡೆಯಬಹುದಾಗಿದೆ.
ಅಟಲ್ ಪಿಂಚಣಿ ಯೋಜನೆ :
ಅಟಲ್ ಪಿಂಚಣಿ ಯೋಜನೆಯನ್ನು 2015ರಲ್ಲಿಯೇ ಕೇಂದ್ರ ಸರ್ಕಾರ ಪ್ರಾರಂಭ ಮಾಡಿದ್ದು ಈ ಪಿಂಚಣಿ ಯೋಜನೆಯ ಸೌಲಭ್ಯವನ್ನು ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಪಡೆಯಬಹುದಾಗಿದೆ.
ಹೆಚ್ಚಿನ ಲಾಭಗಳಿಗೆ ಮಾಡುವ ಯೋಜನೆ ಕನಿಷ್ಠ ಮೊತ್ತದ ಹೂಡಿಕೆಯೊಂದಿಗೆ ಇದಾಗಿದ್ದು ಯಾವುದೇ ವ್ಯಕ್ತಿ 18 ವರ್ಷದಿಂದ 40 ವರ್ಷದೊಳಗೆ ಇರುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಕನಿಷ್ಠ 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಕಡ್ಡಾಯಗೊಳಿಸಲಾಗಿದೆ.
ಇದನ್ನು ಓದಿ : ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಹೊಸ ಯೋಜನೆ.! ಕೇಂದ್ರ ಸರ್ಕಾರದ ಈ ಸ್ಕೀಮ್ ಪ್ರಯೋಜನ 4 ತಿಂಗಳು ಮಾತ್ರ
ಯೋಜನೆಯ ಲಾಭಗಳು :
- ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ನೀಡಲು ಹಿರಿಯ ನಾಗರಿಕರಿಗೆ ಅಟಲ್ ಪಿಂಚಣಿ ಯೋಜನೆಯನ್ನು ಜಾರಿ ಮಾಡಲಾಗಿದೆ.
- ಈ ಯೋಜನೆಯೆಲ್ಲಿ ಮಾಸಿಕ ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಹೂಡಿಕೆಗೆ ಆಯ್ಕೆ ಮಾಡಬಹುದು.
- ಆದಾಯ ತೆರಿಗೆಯ ಸೆಕ್ಷನ್ 80 ಸಿಸಿಡಿ ಅಡಿಯಲ್ಲಿ ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ.
- 60 ವರ್ಷಗಳ ಮೊದಲು ಅಥವಾ ನಂತರ ಖಾತೆದಾರರು ಮರಣ ಹೊಂದಿದರೆ ನಾಮಿನಿಗೆ ಪಿಂಚಣಿಯ ಮೊತ್ತವನ್ನು ನೀಡಲಾಗುತ್ತದೆ.
- ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕನಲ್ಲಿ ಉಳಿತಾಯ ಖಾತೆಯನ್ನು ಇದಕ್ಕಾಗಿ ಅರ್ಜಿದಾರರು ಹೊಂದಿರಬೇಕು.
ಕೇವಲ ಏಳು ರೂಪಾಯಿ ಹೂಡಿಕೆ ಮಾಡಬಹುದು :
ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ ದಿನಕ್ಕೆ ರೂ.7 ಗಳನ್ನು ಹೂಡಿಕೆ ಮಾಡಿದರೆ ಸಾಕು ಕೇವಲ ಇನ್ನೂರ ಹತ್ತು ರೂಪಾಯಿಗಳನ್ನು ಪ್ರತಿ ತಿಂಗಳು ಪಾವತಿಸಿದರೆ ಪ್ರತಿ ತಿಂಗಳು 5000 ಪಿಂಚಣಿಯನ್ನು ಅರವತ್ತು ವರ್ಷಗಳ ನಂತರ ಈ ಯೋಜನೆಯಲ್ಲಿ ಪಡೆಯಬಹುದು.
ಪತಿಪತ್ನಿ ಇಬ್ಬರೂ ಕೂಡ ಜಂಟಿಯಾಗಿ ಈ ಯೋಜನೆಯಲ್ಲಿ ಖಾತೆ ತೆರೆದರೆ 10 ಸಾವಿರ ರೂಪಾಯಿಗಳ ಪಿಂಚಣಿ ಸೌಲಭ್ಯ ಪಡೆಯಬಹುದು.
ಹೀಗೆ ಕೇಂದ್ರ ಸರ್ಕಾರವು ಜಾರಿಗೆ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ವೃದ್ಯಾಪ್ಯದಲ್ಲಿ 5000 ಹಣವನ್ನು ಪ್ರತಿ ತಿಂಗಳು ಸುಲಭವಾಗಿ ಪಡೆಯಬಹುದಾಗಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಹೂಡಿಕೆ ಮಾಡಲು ಬಯಸುತ್ತಿದ್ದರೆ ಕೇಂದ್ರ ಸರ್ಕಾರದ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿ ಧನ್ಯವಾದಗಳು.