ಹಲೋ ಸ್ನೇಹಿತರೇ, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ತನ್ನ ಪ್ರಣಾಳಿಕೆಗೆ ನ್ಯಾಯ ಪಾತ್ರೆ ಎಂದು ಹೆಸರಿಟ್ಟಿರುವ ಕಾಂಗ್ರೆಸ್, ಒಟ್ಟು 25 ಗ್ಯಾರಂಟಿಗಳನ್ನು ಘೋಷಿಸಿದೆ. ಐದು ಅಂಶಗಳ ಮೇಲೆ ಗಮನ ಕೇಂದ್ರಿಕರಿಸಿರುವ ಕಾಂಗ್ರೆಸ್, ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯ, ಹಿಸ್ಸಾದಾರಿ ನ್ಯಾಯ ಎಂಬ ಅಂಶಗಳನ್ನು ಘೋಷಿಸಿದೆ. ಇದರೊಂದಿಗೆ ಆರೋಗ್ಯ ಸೇವೆಯನ್ನು ನೀಡಲು ಮುಂದಾಗಿದೆ.
ದಿಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಸಾಮಾಜಿಕ ಆರ್ಥಿಕ ಮತ್ತು ಜಾತಿ ರಾಜಕಾರಣವನ್ನು ಮಾಡುತ್ತೇವೆ ಎಂದು ಕಾಂಗ್ರೆಸ್ ಘೋಷಿಸಿದ್ದು, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳ ಮೀಸಲಾತಿಯನ್ನು ಶೇ.50ಕ್ಕೆ ಏರಿಸಲು ಸಾಂವಿಧಾನಿಕವಾಗಿ ತಿದ್ದುಪಡಿಯನ್ನು ತರುತ್ತೇವೆ ಎಂದು ಹೇಳಿದೆ. ಜೊತೆಗೆ ಇಡಬ್ಲ್ಯೂಎಸ್ ಮೀಸಲಾತಿಯನ್ನು ಎಲ್ಲ ಜಾತಿಗಳು ಮತ್ತು ಸಮುದಾಯಗಳಿಗೆ ವಿಸ್ತರಿಸಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ.
ಉಚಿತ ಆರೋಗ್ಯ ಸೇವೆ:
ಅದರ ಜೊತೆಗೆ ಹಿರಿಯ ನಾಗರಿಕರಿಗೆ ಪೆನ್ಷನ್ ಅನ್ನು ಸಾವಿರ ರೂ.ಗೆ ಏರಿಸಲು ಕಾಂಗ್ರೆಸ್‌ವು ಮುಂದಾಗಿದೆ. ಅದಲ್ಲದೇ ಉಚಿತ ಆರೋಗ್ಯ ಸೇವೆ ಮತ್ತು ಅಪ್ರೆಂಟ್‌ಶಿಫ್ ಕಾಯಿದೆ ಜಾರಿ, ಮಹಾಲಕ್ಷ್ಮೀ ಯೋಜನೆ ಮೂಲಕ ಪ್ರತಿ ಬಡ ಕುಟುಂಬಕ್ಕೆ ವಾರ್ಷಿಕ 1 ಲಕ್ಷ ರೂ. ನೀಡಲು ಕಾಂಗ್ರೆಸ್ ನಿರ್ಧರಿಸಿದ್ದು, 2025 ರಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಕಾಂಗ್ರೆಸ್ ಮುಂದಾಗಿದ್ದು, ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಪೋಸ್ಟ್ ಆಫೀಸ್ ಹೊಸ ಯೋಜನೆ 66,000 ಹಣ ಪ್ರತಿ ತಿಂಗಳು ಸಿಗಲಿದೆ ತಪ್ಪದೆ ಪಡೆಯಿರಿ
- ಹಿರಿಯ ನಾಗರಿಕರ ಪೆನ್ಷನ್, ವಿಧವಾ ವೇತನ, ವಿಶೇಷ ಚೇತನರ ಪೆನ್ಷನ್ ಅನ್ನು ಮಾಸಿಕ 1000 ರೂ.ಗೆ ಏರಿಕೆ.
- ಉಚಿತ ಆರೋಗ್ಯ ವ್ಯವಸ್ಥೆಯು (ಆಸ್ಪತ್ರೆಗೆ ಸೇರುವುದರಿಂದ ಹಿಡಿದು ಬಿಡುಗಡೆಯಾಗುವವರೆಗೂ ಫ್ರೀ ಚಿಕಿತ್ಸೆ)
- ರಾಜಸ್ಥಾನ ಮಾದರಿಯಲ್ಲಿ 25 ಲಕ್ಷ ರೂ.ವರೆಗೆ ನಗದು ರಹಿತ ವಿಮಾ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲು ನಿರ್ಧಾರವನ್ನು ಮಾಡಿದ್ದಾರೆ.
- ಅಪ್ರೆಂಟ್‌ಶಿಫ್ ಕಾಯಿದೆ ಜಾರಿಗೆ ನಿರ್ಧಾರವನ್ನು ಮಾಡಿದ್ದಾರೆ. 25 ವರ್ಷದೊಳಗಿನ ಡಿಪ್ಲೋಮಾ ಪದವಿ ಪಡೆದವರು ಮತ್ತು ಪದವೀಧರರು ಒಂದು ವರ್ಷ ಅಪ್ರೆಂಟ್‌ಶಿಫ್ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಒಂದು ಲಕ್ಷ ರೂ. ಅನ್ನು ಯುವಕರು ಇದನ್ನು ಪಡೆಯಲಿದ್ದಾರೆ.
- ಮಹಾಲಕ್ಷ್ಮೀ ಯೋಜನೆ – ಪ್ರತಿಯೊಂದು ಬಡ ಕುಟುಂಬಕ್ಕೆ ವಾರ್ಷಿಕ 1 ಲಕ್ಷ ರೂ. ನೀಡುವ ಹೊಸ ನಿರ್ಧಾರವನ್ನು ಕಾಂಗ್ರೆಸ್ ಮಾಡಿದೆ
- 2025ರಿಂದ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಯನ್ನು ಜಾರಿ ಮಾಡಲು ಸಜ್ಜಾಗಿದೆ.
- ASPಗೆ ಕಾನೂನು ಖಾತ್ರಿ, ಕೃಷಿ ಬೆಲೆ ಮತ್ತು ದರದ ಆಯೋಗವನ್ನು ಸ್ವಾಯತ್ತ ಸಂಸ್ಥೆಯಾಗಿ ಬದಲಾವಣೆ
ಇನ್ನು, ನ್ಯಾಯ ಮತ್ತು ಯುವ, ಮಹಿಳೆ, ರೈತರು, ಶ್ರಮಿಕರು, ಸಂವಿಧಾನ ಹಾಗೂ ಆರ್ಥಿಕ, ಒಕ್ಕೂಟ ವ್ಯವಸ್ಥೆ, ರಾಷ್ಟ್ರೀಯ ಭದ್ರತೆ, ಪರಿಸರದ ಅಂಶಗಳನ್ನು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿದೆ. ಈಗಾಗಲೇ ಹಲವು ನ್ಯಾಯಗಳನ್ನು ಘೋಷಿಸಿದ್ದ ಕಾಂಗ್ರೆಸ್, ಘರ್ – ಘರ್ ಗ್ಯಾರಂಟಿ ಘೋಷಣೆಯನ್ನು ಮಾಡಿತ್ತು.
ಇತರೆ ವಿಷಯಗಳು:
ಪೋಸ್ಟ್ ಆಫೀಸ್ ಹೊಸ ಯೋಜನೆ 66,000 ಹಣ ಪ್ರತಿ ತಿಂಗಳು ಸಿಗಲಿದೆ ತಪ್ಪದೆ ಪಡೆಯಿರಿ
ಬೆಳ್ಳಂಬೆಳಗ್ಗೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್