rtgh
Headlines

ಕರ್ನಾಟಕ SSLC ಫಲಿತಾಂಶ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ: ಜಿಲ್ಲಾವಾರು ರ‍್ಯಾಂಕ್ ಲಿಸ್ಟ್‌ ಬಿಡುಗಡೆ

district wise sslc result 2024

ಹಲೋ ಗೆಳೆಯರೇ, ಕರ್ನಾಟಕ ಶಿಕ್ಷಣ ಇಲಾಖೆಯು ಇಂದು 2023-24ನೇ ಸಾಲಿನ 10ನೇ ತರಗತಿ ಪರೀಕ್ಷೆ 1 ಫಲಿತಾಂಶ ಬಿಡುಗಡೆ ಮಾಡಿದೆ. ಒಟ್ಟು 6,31,204 ವಿದ್ಯಾರ್ಥಿಗಳು ಪಾಸ್, ಈ ಸಾಲಿನಲ್ಲಿ ಶೇಕಡ 73.40 ಫಲಿತಾಂಶ ದಾಖಲಿಸಲಾಗಿದೆ. ಉಡುಪಿ SSLC ರಿಸಲ್ಟ್‌ ನಲ್ಲಿ ಟಾಪ್‌ ಸ್ಥಾನದಲ್ಲಿದ್ದು, ಯಾದಗಿರಿ ಕೊನೆ ಸ್ಥಾನದಲ್ಲಿದೆ. ಯಾವ ಜಿಲ್ಲೆ ಎಷ್ಟನೆ ಸ್ಥಾನ ಎಂದು ತಿಳಿಯಿರಿ.

district wise sslc result 2024

2023-24ನೇ ಸಾಲಿನ SSLC ಪರೀಕ್ಷೆ 1 ರಿಸಲ್ಟ್‌ ಇಂದು ಪ್ರಕಟಿಸಲಾಗಿದ್ದು, ಒಟ್ಟು 6,31,204 ವಿದ್ಯಾರ್ಥಿಗಳು ಪಾಸ್‌ . ಪರೀಕ್ಷೆ ಒಟ್ಟು ವಿದ್ಯಾರ್ಥಿಗಳು 8,59,967. 5906 ಸರ್ಕಾರಿ ಶಾಲೆಗಳಿಂದ ಪರೀಕ್ಷೆ ಬರೆದ 3,36,533 ವಿದ್ಯಾರ್ಥಿಗಳ ಪೈಕಿ 243,851 ವಿದ್ಯಾರ್ಥಿಗಳು ಪಾಸ್. ಹಾಗೆಯೇ ಅನುದಾನ ರಹಿತ ಶಾಲೆಗಳ 2,23,720 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 1,50,094 ವಿದ್ಯಾರ್ಥಿಗಳು ಪಾಸ್‌ .

ಶಾಲಾವಾರು SSLC ಫಲಿತಾಂಶ ಹೇಗಿದೆ ಎಂದು ನೋಡುವುದುದಾದಲ್ಲಿ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮೊದಲ ಟಾಪ್‌ 3 ಸ್ಥಾನದಲ್ಲಿ ರಿಸಲ್ಟ್‌ ಪಡೆದಿದೆ. 625ಕ್ಕೆ 625 ಅಂಕಗಳನ್ನು ಒಬ್ಬಳೇ ವಿದ್ಯಾರ್ಥಿನಿ ಪಡೆದಿದ್ದು,ಅವಳ ಹೆಸರು ಅಂಕಿತಾ.

2023ನೇ ಸಾಲಿನ ಫಲಿತಾಂಶಕ್ಕೆ ಹೋಲಿಸಿದಲ್ಲಿ 2023-24ನೇ ಸಾಲಿನ ಫಲಿತಾಂಶದಲ್ಲಿ ಶೇಕಡ.30 ರಷ್ಟು ಫಲಿತಾಂಶ ಕಡಿಮೆಯಾಗಿದೆ. 2023-24ನೇ ಸಾಲಿನ SSLC ಪರೀಕ್ಷೆ-1 ಫಲಿತಾಂಶದಲ್ಲಿ ಯಾವ್ಯಾವ ಜಿಲ್ಲೆಗೆ ಯಾವ ರ‍್ಯಾಂಕ್ ಬಂದಿದೆ ಎಂದು ತಿಳಿಯಿರಿ.

ಜಿಲ್ಲಾವಾರು SSLC ಫಲಿತಾಂಶ ರ‍್ಯಾಂಕ್ ಲಿಸ್ಟ್‌

 • ಉಡುಪಿ – 1
 • ದಕ್ಷಿಣ ಕನ್ನಡ – 2
 • ಶಿವಮೊಗ್ಗ – 3
 • ಕೊಡಗು – 4
 • ಉತ್ತರ ಕನ್ನಡ – 5
 • ಹಾಸನ – 6
 • ಮೈಸೂರು – 7
 • ಶಿರಸಿ – 8
 • ಬೆಂಗಳೂರು ಗ್ರಾಮಾಂತರ – 9
 • ಚಿಕ್ಕಮಗಳೂರು – 10
 • ವಿಜಯಪುರ – 11
 • ಬೆಂಗಳೂರು ದಕ್ಷಿಣ – 12
 • ಬಾಗಲಕೋಟೆ – 13
 • ಬೆಂಗಳೂರು ಉತ್ತರ – 14
 • ಹಾವೇರಿ – 15
 • ತುಮಕೂರು – 16
 • ಗದಗ – 17
 • ಚಿಕ್ಕಬಳ್ಳಾಪುರ – 18
 • ಮಂಡ್ಯ – 19
 • ಕೋಲಾರ – 20
 • ಚಿತ್ರದುರ್ಗ – 21
 • ಧಾರವಾಡ – 22
 • ದಾವಣಗೆರೆ – 23
 • ಚಾಮರಾಜನಗರ – 24
 • ಚಿಕ್ಕೋಡಿ – 25
 • ರಾಮನಗರ – 26
 • ವಿಜಯನಗರ – 27
 • ಬಳ್ಳಾರಿ – 28
 • ಬೆಳಗಾವಿ – 29
 • ಮಧುಗಿರಿ – 30
 • ರಾಯಚೂರು – 31
 • ಕೊಪ್ಪಳ – 32
 • ಬೀದರ್ – 33
 • ಕಲಬುರಗಿ – 34
 • ಯಾದಗಿರಿ – 35

ಇತರೆ ವಿಷಯಗಳು

ಗೂಗಲ್ ಪೇ ಲೋನ್ ಭರ್ಜರಿ ಕೊಡುಗೆ.!! ಈ ದಾಖಲೆ ಇದ್ದವರಿಗೆ 9 ಲಕ್ಷ ರೂ.

ಪಿಎಂಶ್ರೀ ಶಾಲೆ ಆಯ್ಕೆಗೆ ಅರ್ಜಿ ಆಹ್ವಾನ: ಮೇ.15 ರವರೆಗೂ ಅಪ್ಲೇ ಮಾಡಲು ಅವಕಾಶ

Spread the love

Leave a Reply

Your email address will not be published. Required fields are marked *