ಹಲೋ ಗೆಳೆಯರೇ, NEP 2024 ಅಡಿಯಲ್ಲಿ ವಿವಿಧ ಕಾರ್ಯಕ್ರಮದ ಅಳವಡಿಕೆಯೊಂದಿಗೆ ರೈಸಿಂಗ್ ಇಂಡಿಯಾ ಉದ್ದೇಶ ಹೊಂದಿರುವ ಪಿಎಂಶ್ರೀ ಶಾಲೆಗಳ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಿತವಾಗಿದೆ. ಇದರ ಅಡಿಯಲ್ಲಿ ಆಯ್ಕೆಯಾಗಲು ಖಾಸಗಿ ಶಾಲೆಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೇಗೆ ಅರ್ಜಿ ಸಲ್ಲಿಸಬಹುದು ಎಂಬ ಬಗ್ಗೆ ಲೇಖನದಲ್ಲಿ ತಿಳಿಯಿರಿ.
ಪಿಎಂಶ್ರೀ ಶಾಲೆಗಳ 3ನೇ ಹಂತದ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಶಾಲೆಗಳು ಅಪ್ಲೇ ಮಾಡುವ ದಿನಾಂಕ ನಿಗದಿ ಮಾಡಿದ್ದು, ನಿಗದಿತ ಕಾಲಾವಕಾಶದೊಳಗಾಗಿ ಅರ್ಜಿ ಸಲ್ಲಿಸಲು ಸಮಗ್ರ ಶಿಕ್ಷಣಕ್ಕೆ ಕರ್ನಾಟಕ ಇಲಾಖೆ ಸೂಚನೆಯನ್ನು ನೀಡಿದೆ.
ಪಿಎಂಶ್ರೀ ಶಾಲೆಗಳ 3ನೇ ಹಂತದ ಆಯ್ಕೆಗೆ ಅಪ್ಲೇ ಮಾಡಲು ಕೊನೆ ದಿನಾಂಕ : 15-05-2024
ಸ್ವೀಕೃತ ಅರ್ಜಿಗಳ ಪರಿಶೀಲನೆಗೆ ಜಿಲ್ಲಾ ಹಂತದಲ್ಲಿ ಮೇ 23 ರವರೆಗೆ, ರಾಜ್ಯ ಹಂತದಲ್ಲಿ ಮೇ 31 ರವರೆಗೆ ದಿನಾಂಕ ನಿಗದಿ ಮಾಡಲಾಗಿದೆ.
ನ್ಯಾಷನಲ್ ಎಜುಕೇಷನ್ ಪಾಲಿಸಿ 2020 ಸಂಪೂರ್ಣವಾಗಿ ದೇಶದಾದ್ಯಂತ ಜಾರಿ ಮಾಡುವ ಉದ್ದೇಶದಿಂದ ಪಿಎಂಶ್ರೀ ಶಾಲೆ ಯೋಜನೆ ಜಾರಿ ಮಾಡಲಾಗಿದೆ. ಮೊದಲ ಹಂತದಲ್ಲಿ 2023-24ನೇ ಸಾಲಿನಲ್ಲಿ & 2ನೇ ಹಂತದಲ್ಲಿ 2024-25ನೇ ಸಾಲಿಗೆ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ 374 ಸೇರಿ ದೇಶದಾದ್ಯಂತ 14,500 ಶಾಲೆಗಳಾಗಿದೆ, 3ನೇ ಹಂತದಲ್ಲಿ 10,358 ಶಾಲೆಗಳನ್ನು ಗುರುತಿಸಲು ಸರ್ಕಾರ ನಿರ್ಧಾರ ಮಾಡಿದೆ.
Contents
ಪಿಎಂಶ್ರೀ ಶಾಲೆ ಆಯ್ಕೆಗೆ ಸಂಬಂಧಿತ ಕೆಲವು ಪ್ರಮುಖ ಅಂಶಗಳು
ಭೌತಿಕ ತಪಾಸಣೆ, ವರ್ಚುವಲ್ ತಪಾಸಣೆ ನಡೆಸಿ BRC / CRCಗಳು ವರದಿ ನೀಡಬೇಕು. ಶಾಲೆಗೆ ಸಂಬಂಧಿಸಿದ ಫೋಟೋಗಳು, ವಿದ್ಯಾರ್ಥಿಗಳ ಹಾಜರಾತಿ ಸೇರಿ ಹಲವು ದಾಖಲೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಆಧಾರದಲ್ಲಿ ಪ್ರತಿ ತಾಲೂಕಿಗೆ 2 ಶಾಲೆಯನ್ನು ಶಿಫಾರಸ್ಸು ಮಾಡಲಾಗುತ್ತದೆ.
ಶಾಲೆಗೆ ಸ್ವಂತ ಸುಸಜ್ಜಿತ ಕಟ್ಟಡವಿರಬೇಕು. ಶಾಲೆಯು ಅಗ್ನಿ ಸುರಕ್ಷತೆ ಹೊಂದಿರಬೇಕು, ಪ್ರಾಥಮಿಕ & ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯು ರಾಜ್ಯದ ಸರಾಸರಿಗಿಂತ ಹೆಚ್ಚಾಗಿರಬೇಕು.
ಗಂಡು ಅಥವಾ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ವಿದ್ಯುತ್ & ಕುಡಿಯುವ ನೀರಿನ ವ್ಯವಸ್ಥೆ ಹೊಂದಿರಬೇಕು ಎಂಬ ರೂಲ್ಸ್ ಶಾಲೆಗಳ ಆಯ್ಕೆಗೆ ಪರಿಗಣಿತವಾಗುತ್ತವೆ.
ಪಿಎಂಶ್ರೀ ಶಾಲೆ ಯೋಜನೆ ಉದ್ದೇಶ.
ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ಈ ಯೋಜನೆಯಡಿ ಆಯ್ಕೆ ಆಗುವ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನಕ್ಕೆ, ಗುಣಮಟ್ಟದ ಶಾಲಾ ಶಿಕ್ಷಣಕ್ಕೆ ಪೂರ್ಣ ಪ್ರಮಾಣದ ಸಹಕಾರವನ್ನು ಕೇಂದ್ರ ಸರ್ಕಾರ ನೀಡುತ್ತದೆ.
ಇತರೆ ವಿಷಯಗಳು
ಕೇಂದ್ರ ಸರ್ಕಾರದ ಸೌರಗೃಹ ಯೋಜನೆ: 20 ವರ್ಷದ ವರೆಗೂ ಫ್ರೀ ವಿದ್ಯುತ್ ತಕ್ಷಣ ನೋಂದಾಯಿಸಿ
ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ.!! ಇಂತಹ ಬ್ಯಾಂಕ್ ಅಕೌಂಟ್‌ಗಳು ರದ್ದು