rtgh

ಬ್ಯಾಂಕ್‌ ಗ್ರಾಹಕರಿಗೆ ಶಾಕಿಂಗ್ ಸುದ್ದಿ.!! ಇಂತಹ ಬ್ಯಾಂಕ್ ಅಕೌಂಟ್‌ಗಳು ರದ್ದು

Shocking news for bank customers

ಹಲೋ ಸ್ನೇಹಿತರೇ, ಸಾಮಾನ್ಯವಾಗಿ ಎಲ್ಲ ಬ್ಯಾಂಕ್‌ ಗ್ರಾಹಕರಲ್ಲಿಯು ಬ್ಯಾಂಕ್ ಖಾತೆ ಇದ್ದೇ ಇರುತ್ತದೆ. ಆದ್ರೆ ಮೊದಲು ಬ್ಯಾಂಕ್ ಖಾತೆಯನ್ನು ತೆರೆಯಲು ಸಾಕಷ್ಟು ಪ್ರಕ್ರಿಯೆಯು ಇತ್ತು. ಬ್ಯಾಂಕ್‌ಗೆ ಹೋಗಿ ಅರ್ಜಿಯಲ್ಲಿ ಕೆಲವು ವಿವರಗಳನ್ನು ನಮೂದಿಸಿದ ನಂತರವೇ ಖಾತೆಯು ಸಕ್ರಿಯವಾಗುತ್ತಿತ್ತು.

Shocking news for bank customers

ಆದ್ರೆ ಇಂದಿನ ದಿನಗಳಲ್ಲಿ ಫೋನ್ ಹಾಗೂ ಆನ್‌ಲೈನ್ ಮೂಲಕವೇ ಸುಲಭವಾಗಿ ಖಾತೆಯನ್ನು ತೆರೆಯುವ ಸೌಲಭ್ಯವಿದೆ. ಆದ್ರೆ ಖಾತೆಯನ್ನು ಸರಿಯಾಗಿ ನಿರ್ವಹಿಸುವುದು ಉತ್ತಮವಾಗಿದೆ. ಹಾಗೆ ಮಾಡಲು ವಿಫಲವಾದ್ರೆ ಪೆನಾಲ್ಟಿ ಶುಲ್ಕಗಳು ಹಾಗೂ ಖಾತೆಯ ಮುಚ್ಚುವಿಕೆಗೆ ಕಾರಣವಾಗಬಹುದು. ಇತ್ತೀಚೆಗಷ್ಟೇ ಈ ಬ್ಯಾಂಕ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ನೀವು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದೀರಾ? ಹೌದು ಎಂದಾದರೆ, ಈ ಸುದ್ದಿ ನಿಮಗೆ ತುಂಬಾ ವಿಶೇಷವಾಗಿದೆ. ಇತ್ತಿಚ್ಚೀನ ದಿನದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಳೆದ ಮೂರು ವರ್ಷಗಳಿಂದಲೂ ತಮ್ಮ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸದ ಹಾಗೂ ಅವರ ಖಾತೆಯಲ್ಲಿ ಹಣವಿಲ್ಲದ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಲಿದೆ.

ಅಂತಹ ಖಾತೆಗಳನ್ನು ಒಂದು ತಿಂಗಳಲ್ಲಿ ಮುಚ್ಚಲಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ನೀವು 3 ವರ್ಷಗಳಿಂದ ನಿಮ್ಮ PNB ಖಾತೆಯಲ್ಲಿ ಯಾವುದೇ ವಹಿವಾಟುಗಳನ್ನು ಮಾಡದಿದ್ದಲಿ ಅಂತಹ ಖಾತೆಯನ್ನು ಅದನ್ನು ಅವಧಿಯೊಳಗೆ ಮಾಡಿಕೊಳ್ಳಿ ಎನ್ನುವ ಸಂದೇಶವನ್ನು ಈಗಾಗಲೇ ತಿಳಿಸಲಾಗಿದೆ.

PNB ಈ ಕ್ರಮವನ್ನು ಏಕೆ ತೆಗೆದುಕೊಂಡಿತು?

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರ ಖಾತೆಗಳಲ್ಲಿ ಕಳೆದ ಮೂರು ವರ್ಷಗಳಿಂದ ಯಾವುದೇ ವಹಿವಾಟುಗಳನ್ನು ನಡೆಸದೆ ಇದ್ದರೆ ಹಾಗೂ ಅವರ ಖಾತೆಯ ಬಾಕಿ ಶೂನ್ಯವಾಗಿದ್ರೆ ಅವರ ಖಾತೆಗಳನ್ನು ಒಂದು ತಿಂಗಳೊಳಗೆ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ.

ಹೆಣ್ಣು ಮಕ್ಕಳಿಗೆ ಭರ್ಜರಿ ಸುದ್ದಿ.!! ಈ ದಾಖಲೆ ಹೊಂದಿದವರಿಗೆ ಉಚಿತ ಹೊಲಿಗೆ ಯಂತ್ರ

ಯಾವುದೇ ವಹಿವಾಟುಗಳು ನಡೆಸದ ಖಾತೆಗಳ ದುರುಪಯೋಗವನ್ನು ತಡೆಯಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಈಗಾಗಲೇ ಖಡಕ್‌ ವಾರ್ನಿಂಗ್‌ ಅನ್ನು ಸಹ ನೀಡಲಾಗಿದೆ. ಅಧಿಸೂಚನೆಯನ್ನು ಹೊರಡಿಸುವ ಮೂಲಕ, ಅಂತಹ ಎಲ್ಲಾ ಖಾತೆಗಳ ಲೆಕ್ಕಾಚಾರವನ್ನು ಏಪ್ರಿಲ್ 30, 2024 ರ ಆಧಾರದ ಮೇಲೆ ಮಾಡಲಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಅಧಿಸೂಚನೆಯಲ್ಲಿ ಒಂದು ತಿಂಗಳ ನಂತರ ಯಾವುದೇ ಸೂಚನೆಯಿಲ್ಲದೆ ಮುಚ್ಚುವುದಾಗಿ ಹೇಳಿದೆ. ಹೀಗಿರುವಾಗಲೇ, ಡಿಮ್ಯಾಟ್ ಖಾತೆಗಳಿಗೆ ಲಿಂಕ್ ಮಾಡಲಾಗಿರುವಂತಹ ಖಾತೆಗಳನ್ನು ಮುಚ್ಚಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಅದೇ ಸಮಯದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರೊಂದಿಗೆ ವಿದ್ಯಾರ್ಥಿ ಖಾತೆಗಳು, ಅಪ್ರಾಪ್ತ ವಯಸ್ಕರ ಖಾತೆಗಳು ಅಂದರೆ SSY/PMJJBY/PMSBY/APY ನಂತಹ ಯೋಜನೆಗಳಿಗಾಗಿ ತೆರೆಯಲಾದ ಖಾತೆಗಳು ಸಹ ಪರಿಣಾಮ ಬೀರುವುದಿಲ್ಲ. ಎಂದಿನಂತೆ ಮುಂದುವರಿಯಲಿದೆ.

ಈ ನಿಟ್ಟಿನಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ, ಗ್ರಾಹಕರು ತಮ್ಮ ಖಾತೆಗೆ ಸಂಬಂಧಿಸಿದ ಯಾವುದೇ ಮಾಹಿತಿಯ ಅಗತ್ಯವಿದ್ದಲಿ ಹಾಗೂ ಯಾವುದೇ ಸಹಾಯವನ್ನು ಬಯಸಿದ್ರೆ, ಅವರು ನೇರವಾಗಿ ಸಂಪರ್ಕಿಸಬಹುದು ಎಂದು ಬ್ಯಾಂಕ್ ಗಳು ತಿಳಿಸಿದೆ.

ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಸಂಪರ್ಕಿಸಬಹುದು. PNB ಪ್ರಕಾರ.. ಖಾತೆದಾರನು ತನ್ನ ಖಾತೆಯ KYC ಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಶಾಖೆಯಲ್ಲಿ ಸಲ್ಲಿಸದ ಹೊರತು ಅಂತಹ ಖಾತೆಗಳನ್ನು ಮರುಸಕ್ರಿಯಗೊಳಿಸಲಾಗುವುದಿಲ್ಲ.

ಇತರೆ ವಿಷಯಗಳು

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ.! ಈ ದಾಖಲೆಗಳು ಬೇಕೇ ಬೇಕು

URAM Scholarship: ಪ್ರತಿ ವಿದ್ಯಾರ್ಥಿಗೆ ₹ 80,000 ಮೌಲ್ಯದ ವಿದ್ಯಾರ್ಥಿವೇತನ.! ಕೂಡಲೇ ಅಪ್ಲೇ ಮಾಡಿ


Spread the love

Leave a Reply

Your email address will not be published. Required fields are marked *