rtgh

URAM Scholarship: ಪ್ರತಿ ವಿದ್ಯಾರ್ಥಿಗೆ ₹ 80,000 ಮೌಲ್ಯದ ವಿದ್ಯಾರ್ಥಿವೇತನ.! ಕೂಡಲೇ ಅಪ್ಲೇ ಮಾಡಿ

uram scholarship

ಹಲೋ ಗೆಳೆಯರೇ, ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸುವ ನಿಟ್ಟಿನಲ್ಲಿ URAM ವಿದ್ಯಾರ್ಥಿವೇತನ ನೀಡಲು ಮೈಕ್ರಾನ್ ಫೌಂಡೇಶನ್ & ಯುನೈಟೆಡ್ ವೇ ಆಫ್ ಹೈದರಾಬಾದ್ ನಡುವೆ ಪರಸ್ಪರ ಒಪ್ಪಂದವಾಗಿದೆ. ಈ ಪಾಲುದಾರಿಕೆಯು ಪ್ರಮುಖ ಸಂಸ್ಥೆಗಳ 60 ವಿದ್ಯಾರ್ಥಿಗಳು ಶೈಕ್ಷಣಿಕ ಉನ್ನತಿ ಸಾಧಿಸಲು & ವೃತ್ತಿಜೀವನವನ್ನು ಆರಂಭಿಸಲು ನೆರವು ನೀಡಲಾಗುವುದು. ಈ ವಿದ್ಯಾರ್ಥಿವೇತನ ಪಡೆಯುವುದು ಹೇಗೆ ಇಲ್ಲಿ ತಿಳಿಯಿರಿ.

uram scholarship

ಮೈಕ್ರಾನ್ ಫೌಂಡೇಶನ್ & ಯುನೈಟೆಡ್ ವೇ ಆಫ್ ಹೈದರಾಬಾದ್ ಪಾಲುದಾರಿಕೆ ಮಾಡಿಕೊಂಡಿದ್ದು, ಇವುಗಳ ಒಪ್ಪಂದದ ಮೂಲಕ ಭಾರತದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳ 60 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಉದ್ದೇಶಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಶೈಕ್ಷಣಿಕ ಉನ್ನತಿ ಸಾಧಿಸಲು & ಉಜ್ವಲ ಭವಿಷ್ಯ ಹೊಂದಲು ದಾರಿ ಮಾಡಿಕೊಡಲಾಗುತ್ತದೆ. ಈ ವಿದ್ಯಾರ್ಥಿವೇತನಗಳನ್ನು ಯೂನಿವರ್ಸಿಟಿ ರಿಸರ್ಚ್ ಅಲೈಯನ್ಸ್ ಮೈಕ್ರಾನ್ (ಯುಆರ್‌ಎಎಂ) ಉಪಕ್ರಮದ ಭಾಗವಾಗಿ ನೀಡಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು, ಅವರು ಆಯ್ಕೆ ಮಾಡಿದ ಅಧ್ಯಯನ ಕ್ಷೇತ್ರದಲ್ಲಿ ಮುಂದುವರಿಯಲು ಮತ್ತು ವೃತ್ತಿಜೀವನದ ಪ್ರಯಾಣವನ್ನು ಪ್ರಾರಂಭಿಸಲು ಈ ಯೋಜನೆ ಸಹಾಯ ಮಾಡಲಿದೆ.

ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ಬಿ.ಟೆಕ್ (ಬ್ಯಾಚುಲರ್ ಆಫ್ ಟೆಕ್ನಾಲಜಿ) ಮೂರನೇ ಸೆಮಿಸ್ಟರ್ ಮತ್ತು ಎಂ.ಟೆಕ್ (ಮಾಸ್ಟರ್ ಆಫ್ ಟೆಕ್ನಾಲಜಿ) ಮೊದಲ ವರ್ಷದ ವಿದ್ಯಾರ್ಥಿಗಳಿಗಾಗಿ ಈ ವಿದ್ಯಾರ್ಥಿವೇತನವನ್ನು ಕೊಡಲಾಗುತ್ತದೆ. ಸ್ಕಾಲರ್‌ಶಿಪ್ ಸ್ವೀಕರಿಸುವ 60 ವಿದ್ಯಾರ್ಥಿಗಳಲ್ಲಿ 16 ಮಹಿಳಾ ವಿದ್ಯಾರ್ಥಿಗಳು & 10 ವಿಕಲಚೇತನ ವರ್ಗದ ವಿದ್ಯಾರ್ಥಿಗಳನ್ನು ಒಳಗೊಂಡಿದೆ.

ಐಐಐಟಿ ಬೆಂಗಳೂರು, ಐಐಟಿ ದೆಹಲಿ, ಐಐಟಿ ಹೈದರಾಬಾದ್, ಐಐಟಿ ಗಾಂಧಿನಗರ, ಬಿಟ್ಸ್ ಪಿಲಾನಿ, ಸುರತ್ಕಲ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಇಂದಿರಾ ಗಾಂಧಿ ದೆಹಲಿ ಮಹಿಳಾ ತಾಂತ್ರಿಕ ವಿಶ್ವವಿದ್ಯಾಲಯ, ಎನ್ಐಟಿ ತಿರುಚ್ಚಿ & ಜೆಎನ್ಟಿಯುಎಚ್ ಕಾಲೇಜ್ ಆಫ್ ಇಂಜಿನಿಯರಿಂಗ್ ಸೇರಿದಂತೆ ಭಾರತದ ಕೆಲವು ಪ್ರಮುಖ ಸಂಸ್ಥೆಗಳ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಪಡೆಯಲು ಅರ್ಹರಾಗಿದ್ದಾರೆ.

ಆಯ್ಕೆ ಪ್ರಕ್ರಿಯೆಯ ಕುರಿತು ರಾಷ್ಟ್ರ ವ್ಯಾಪಿ ಕಾಲೇಜು ಮಟ್ಟದ ಪ್ರಚಾರ ನಡೆಸಲಾಗಿದೆ, ಕ್ಯಾಂಪಸ್ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತಲುಪಿಸಲಾಗಿದ್ದು. ಆದ್ದರಿಂದ ರಾಷ್ಟ್ರದಾದ್ಯಂತ 494 ಸಂಸ್ಥೆಗಳಿಂದ 2,677 ಅರ್ಜಿಗಳು ಬಂದಿವೆ. ತಾಂತ್ರಿಕ ಮೌಲ್ಯಮಾಪನದ ಜೊತೆಗೆ ಪೂರ್ವನಿರ್ಧರಿತ ಆಯ್ಕೆಯ ಮಾನದಂಡದ ಆಧಾರದ ಮೇಲೆ ಯುಡಬ್ಲೂಎಚ್ ನಿಖರವಾದ ವಿಮರ್ಶಾ ಪ್ರಕ್ರಿಯೆಯನ್ನು ಅನುಸರಿಸಿ 60 ಪ್ರತಿಭಾವಂತ ಅಭ್ಯರ್ಥಿಗಳನ್ನು ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗಿದೆ. ಈ ಹಂತದಲ್ಲಿ ಪ್ರತಿಯೊಬ್ಬರೂ ತಮ್ಮ ಅಧ್ಯಯನದ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ & ಭರವಸೆಯನ್ನು ನೀಡಿದ್ದಾರೆ. ಪ್ರತಿ ವಿದ್ಯಾರ್ಥಿಗೆ ₹ 80,000 ಮೌಲ್ಯದ ವಿದ್ಯಾರ್ಥಿವೇತನ ಸಿಗುತ್ತಿದೆ, ಅದರಿಂದ ಅವರ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಅವರು ಹೊಸ ಚೈತನ್ಯದೊಂದಿಗೆ ಅವರ ಶೈಕ್ಷಣಿಕ ಆಕಾಂಕ್ಷೆಗಳನ್ನು ಪೂರ್ಣಗೊಳಿಸಲು ಈ ಸ್ಕಾಲರ್‌ಶಿಪ್ ಅನುವು ಮಾಡಿಕೊಡುತ್ತದೆ.

ಈ ಕುರಿತು ಮಾತನಾಡಿದ ಮೈಕ್ರಾನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ, ಮುಖ್ಯ ಜನರ ಅಧಿಕಾರಿ & ಮೈಕ್ರಾನ್ ಫೌಂಡೇಶನ್‌ನ ಅಧ್ಯಕ್ಷ ಎಪ್ರಿಲ್ ಅರ್ನ್ಜೆನ್, “ಮೈಕ್ರಾನ್ ಫೌಂಡೇಶನ್ ತಮ್ಮ ಜೀವನವನ್ನು ಉನ್ನತಿಗೊಳಿಸಲು ಬಯಸುವ ವಿದ್ಯಾರ್ಥಿಗಳಿಗೆ ಅವರ ಇಷ್ಟದ ಅಧ್ಯಯನ ಮುಂದುವರಿಸಲು & ವೃತ್ತಿಜೀವನದ ಅನ್ವೇಷಣೆಯಲ್ಲಿ ನೆರವಾಗಲು ಬದ್ಧವಾಗಿರುತ್ತದೆ” ಎಂದು ತಿಳಿಸಿದ್ದಾರೆ. ಮಾತು ಮುಂದುವರಿಸುತ್ತಾ, “ಯುಆರ್‌ಎಎಂ ವಿದ್ಯಾರ್ಥಿವೇತನ ಕಾರ್ಯಕ್ರಮದಂತಹ ಉಪಕ್ರಮಗಳ ಮೂಲಕ & ಯುಡಬ್ಲ್ಯೂಎಚ್ ನಂತಹ ಪಾಲುದಾರರೊಂದಿಗೆ ಕೆಲಸ ಮಾಡುವ ಮೂಲಕ ಉನ್ನತ ಶಿಕ್ಷಣ ಒದಗಿಸಿ ವಿದ್ಯಾರ್ಥಿಗಳನ್ನು ಭವಿಷ್ಯದ ತಂತ್ರಜ್ಞಾನ ವೃತ್ತಿಜೀವನಕ್ಕೆ ಸಿದ್ಧಪಡಿಸಲಾಗುವುದು & ಭಾರತದಾದ್ಯಂತ ಜನ ಸಮುದಾಯಗಳ ಮೇಲೆ ಈ ಯೋಜನೆ ಶಾಶ್ವತವಾದ ಪರಿಣಾಮವನ್ನು ಬೀರಲಿದೆ.

ಇತರೆ ವಿಷಯಗಳು

ರಾಜ್ಯದ 31.8 ಲಕ್ಷ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆ.! ಉಳಿದವರಿಗೆ 2 ದಿನಗಳಲ್ಲಿ ಜಮೆ

ನಾಳೆಯಿಂದ ರಾಜ್ಯದಲ್ಲಿ ಮತ್ತೆ ಮಳೆ.! ಈ ಎಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುನ್ಸೂಚನೆ

Spread the love

Leave a Reply

Your email address will not be published. Required fields are marked *