ಹಲೋ ಗೆಳೆಯರೇ, ಮೇ 05 ರವರೆಗೂ ಭಾರತದ ಕೆಲವು ರಾಜ್ಯಗಳಲ್ಲಿ ತೀವ್ರವಾದ ಶಾಖದ ಅಲೆ ಹೊರತಾಗಿಯೂ ಕೆಲವು ರಾಜ್ಯಗಳಲ್ಲಿ ಲಘು ಮಳೆ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಯಾವೆಲ್ಲಾ ರಾಜ್ಯದಲ್ಲಿ ಮಳೆಯಾಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಇನ್ನೂ 2 ದಿನಗಳವರೆಗೆ ಎಂದರೆ ಮೇ 05ರವರೆಗೆ ಗಂಗಾನದಿಯ ಪಶ್ಚಿಮ ಬಂಗಾಳದ ಕೆಲವು ಸ್ಥಳಗಳಲ್ಲಿ & ಬಿಹಾರದ ಪ್ರತ್ಯೇಕ ಭಾಗಗಳಲ್ಲಿ ಬಿಸಿಗಾಳಿಯಿಂದ ಕೂಡಿದ ತೀವ್ರ ಶಾಖದ ಅಲೆಗಳು ಮುಂದುವರೆಯಲಿವೆ. ಆದಾಗ್ಯೂ, ನಾಳೆಯಿಂದ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮೇ 03ರಿಂದ ಮೇ 05 ರವರೆಗೆ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರದ ಕೆಲವು ಭಾಗಗಳು ಮತ್ತು ತಮಿಳುನಾಡಿನಲ್ಲಿ ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶಾಖದ ಪರಿಸ್ಥಿತಿ (Heatwave predictions) ಮುಂದುವರೆಯಲಿದೆ.
ಆದಾಗ್ಯೂ, ಮುಂದಿನ 5 ದಿನಗಳ ಕಾಲ ಸಿಕ್ಕಿಂ, ಅರುಣಾಚಲ ಪ್ರದೇಶ, ಹರಿಯಾಣ, ಉತ್ತರಾಖಂಡ, ಚಂಡೀಗಢ, ದೆಹಲಿ, ಜಮ್ಮು & ಕಾಶ್ಮೀರ & ಹಿಮಾಚಲ ಪ್ರದೇಶದಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ
ಈ ಭಾಗಗಳಲ್ಲಿ ಶಾಖದ ಅಲೆ:
ಮೇ 05ರವರೆಗೆ ತೆಲಂಗಾಣ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ಗುಜರಾತ್ & ಒಡಿಶಾದ ಕೆಲವು ಭಾಗಗಳಲ್ಲಿ ಶಾಖದ ಅಲೆ ಮುಂದುವರೆಯಲಿದೆ. ಮಧ್ಯ ಮಹಾರಾಷ್ಟ್ರ & ಮರಾಠವಾಡ, ವಿದರ್ಭ, ತಮಿಳುನಾಡು, ಪುದುಚೇರಿ & ಕಾರೈಕಲ್ ರಾಜಸ್ಥಾನದ ದಕ್ಷಿಣ ಭಾಗಗಳಲ್ಲಿಯೂ ಶಾಖದ ಅಲೆ ಮುಂದುವರೆಯಲಿದೆ.
ದಕ್ಷಿಣ ಭಾರತದ ಈ ಭಾಗಗಳಲ್ಲಿ ಮಳೆ:
ಮೇ 04 ರಿಂದ ಕರ್ನಾಟಕದ ದಕ್ಷಿಣ ಒಳನಾಡಿನ ಭಾಗದಲ್ಲಿ, ತೆಲಂಗಾಣ, ತಮಿಳುನಾಡು, ರಾಯಲಸೀಮಾ ಕೆಲ ಭಾಗಗಳು, ಪುದುಚೇರಿ & ಕಾರೈಕಲ್, ಕೇರಳ & ಮಾಹೆಯಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.
ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದ ಪ್ರತ್ಯೇಕ ಭಾಗಗಳಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಸಾಧಾರಣದಿಂದ ಭಾರೀ ಮಲೆಯಾಗುವ ಸಾಧಯ್ತೆ ಇದೆ ಎಂದು ಹವಾನಾನ ಇಲಾಖೆ ತಿಳಿಸಿದೆ.
ಇತರೆ ವಿಷಯಗಳು
ಹೆಣ್ಣು ಮಗುವಿನ ಹೆಸರಿನಲ್ಲಿ ಈ ಖಾತೆ ತೆರೆಯಿರಿ.! ಶಿಕ್ಷಣ, ಮದುವೆ ಸಮಯಕ್ಕೆ ಸಿಗುತ್ತೆ 74 ಲಕ್ಷ