ಹಲೋ ಗೆಳೆಯರೇ, ಕರ್ನಾಟಕದ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆ, ಅಗತ್ಯ ಕ್ರಮ ಕೈಗೊಂಡ ರಾಜ್ಯ ಸರ್ಕಾರ. ಬಾಕಿ ಉಳಿದ ರೈತರಿಗೆ ಶೀಘ್ರವೇ ಹಣ ಜಮೆ ಎಂದು ತಿಳಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ರಾಜ್ಯದ 31,82,602 ರೈತರಿಗೆ ಸಂಪೂರ್ಣ ಬೆಳೆ ಹಾನಿ ಪರಿಹಾರವನ್ನು ಜಮೆ ಮಾಡಲಾಗಿದ್ದು, ಇನ್ನುಳಿದ ಸುಮಾರು 2 ಲಕ್ಷ ರೈತರಿಗೆ ಮುಂದಿನ 2-3 ದಿನಗಳಲ್ಲಿ ಜಮೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕೇಂದ್ರದಿಂದ ಅನುದಾನ ನಿರೀಕ್ಷಿಸಿ ಮೊದಲ ಹಂತದ ಪರಿಹಾರ 33,58,999 ರೈತರಿಗೆ 636.45 ಕೋಟಿ ರೂ.ಗಳನ್ನು ಕಳೆದ ಫೆಬ್ರವರಿ ಹಾಗೂ ಮಾರ್ಚ್ ಪಾವತಿಸಲಾಗಿದೆ. ಈ ಪೈಕಿ ಅತಿ ಕಡಿಮೆ ಜಮೀನು ಇರುವ 4,43,691 ರೈತರಿಗೆ ಮಾರ್ಗಸೂಚಿ ಪ್ರಕಾರ ಸಂಪೂರ್ಣ ಪರಿಹಾರ ಹಣ ಪಾವತಿಸಲಾಗಿದೆ. ಉಳಿದ ರೈತರಿಗೆ ಬಾಕಿ ಹಣವನ್ನು ಪಾವತಿ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈತರ ಖಾತೆಗೆ ಹಣ ವರ್ಗಾಯಿಸಲು 48 ಗಂಟೆ ಸಮಯ
ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗಳಿಗೆ DBT ಮೂಲಕ ನೇರ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಏ. 27 & 28 ಎರಡೂ ದಿನ ರಜೆ ಇದ್ದು. ನಂತರದ ಏ.29 & 30ರಂದು ಪರಿಹಾರ ವಿತರಣೆಗೆ ಎಲ್ಲಾ ತಾಂತ್ರಿಕ ವ್ಯವಸ್ಥೆ ಮಾಡಿಕೊಳ್ಳಲಾಯಿತು. ಮೇ 1 ರಂದು ಮತ್ತೆ ಕಾರ್ಮಿಕ ದಿನಾಚರಣೆಯ ರಜೆ ಕಾರಣಕ್ಕೆ ಪರಿಹಾರ ವಿತರಣೆ ಅಲ್ಪ ವಿಳಂಬವಾಗಿದ್ದು. ಸರ್ಕಾರದ ಕ್ರಮದ ಬಳಿಕ RBI ನಿಂದ ರೈತರ ಖಾತೆಗೆ ಹಣ ವರ್ಗಾಯಿಸಲು 48 ಗಂಟೆಗಳ ವರೆಗೂ ಸಮಯವನ್ನು ತೆಗೆದುಕೊಳ್ಳಲಾಗುತ್ತದೆ. ಶೀಘವೇ ಎಲ್ಲಅರ್ಹ ರೈತರ ಖಾತೆಗೆ ಹಣ ಜಮೆಯಾಗುತ್ತದೆ ಎಂದು ತಿಳಿಸಲಾಗಿದೆ.
ಕೇಂದ್ರದ ವಿರುದ್ಧ ಕಾನೂನು ಹೋರಾಟ
ಕೇಂದ್ರದಿಂದ ಬಿಡುಗಡೆಯಾದ ಮೊತ್ತವನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಬಿಡುಗಡೆ ಮಾಡಿ, ರೈತರಿಗೆ ವಿತರಣೆ ಮಾಡಲು ಸೂಚಿಸಲಾಗಿದೆ. ಈ ಕ್ರಮದ ಜತೆಗೆ, ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿರುವ ಬಾಕಿ ಪರಿಹಾರ ಮೊತ್ತ ಪಡೆಯಲು ಕೇಂದ್ರ ಸರಕಾರದೊಂದಿಗೆ ಕಾನೂನು ಹೋರಾಟ ಮುಂದುವರಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಇತರೆ ವಿಷಯಗಳು
ನಾಳೆಯಿಂದ ರಾಜ್ಯದಲ್ಲಿ ಮತ್ತೆ ಮಳೆ.! ಈ ಎಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುನ್ಸೂಚನೆ