ಹಲೋ ಗೆಳೆಯರೇ, ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸರ್ಕಾರ ಅಪ್ಲಿಕೇಶನ್ ಲಿಂಕ್ ಓಪನ್ ಮಾಡಲು ಇಲಾಖೆಯು ಮುಂದಾಗಿದೆ. ಎಲ್ಲಾ ವರ್ಗದವರು ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ ಹಾಗೂ ಅಗತ್ಯವಾಗಿ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
Contents
ಯಾವಾಗಿನಿಂದ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು?
ಏಪ್ರಿಲ್ & ಮೇ ತಿಂಗಳು ಎಲೆಕ್ಷನ್ ನಡೆಯುತ್ತಿದ್ದು ಎಲೆಕ್ಷನ್ ಫಲಿತಾಂಶ ಬಿಡುಗಡೆಯ ನಂತರ ಜೂನ್ ಮೊದಲನೇ / 2ನೇ ವಾರದಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಓಪನ್ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಯಾವ ಯಾವ ದಾಖಲೆಗಳನ್ನು ನೀಡಬೇಕು?
ನೀವು ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಾಗ ನೀವು ನಿಮ್ಮ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ನೀಡಬೇಕು. ನಿಮ್ಮ ಕುಟುಂಬ ಸದಸ್ಯರ ಫೋಟೋ ನೀಡಬೇಕು. ನಿಮ್ಮ ಕುಟುಂಬ ಸದಸ್ಯರ ವಯಸ್ಸಿನ ಪೂರಾವೆ. ನಿಮ್ಮ ಕುಟುಂಬ BPL ಕಾರ್ಡ್ ಪಡೆಯುವ ಅರ್ಹತೆ ಹೊಂದಿದ್ದರೆ ನೀವು ನಿಮ್ಮ ಕುಟುಂಬದ ಆದಾಯ ಪ್ರಮಾಣ ಪತ್ರವನ್ನು ಮತ್ತು ಕುಟುಂಬ ಸದಸ್ಯರ ಫೋನ್ ನಂಬರ್ ನೀಡಬೇಕು.
ಅರ್ಜಿ ಸಲ್ಲಿಸುವುದು ಹೇಗೆ?:
ನೀವು ನಿಮ್ಮ ಅರ್ಜಿಯನ್ನು ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ / ನಿಮ್ಮ ಪಡಿತರ ಕೇಂದ್ರಕ್ಕೆ ಹೋಗಿ ಸಲ್ಲಿಸಬಹುದು ಇಲ್ಲವೇ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಗೆ ತೆರಳಿ ಮುಖಪುಟದಲ್ಲಿ ಕಾಣುವ ಇ-ಸೇವೆಗಳು ವಿಭಾಗದಲ್ಲಿ ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ ಎಂಬ ಆಯ್ಕೆ ಕ್ಲಿಕ್ ಮಾಡಿ. ಪೂರ್ಣ ವಿಳಾಸವನ್ನು ಆಯ್ಕೆ ಮಾಡಬೇಕು. ಕುಟುಂಬ ಸದಸ್ಯರ ಸಂಖ್ಯೆ ಮತ್ತು ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಸಂಖ್ಯೆ ಮತ್ತು ವಯಸ್ಸಿನ ವಿವರಗಳನ್ನು ನೀಡಬೇಕಾಗುತ್ತದೆ. ನಂತರ ಅಗತ್ಯವಿರುವ ಎಲ್ಲಾ ದಾಖಲೆಗಳ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ. ನಂತರ ನಿಮ್ಮ ಕುಟುಂಬದ ಸದಸ್ಯರ ಫೋಟೋ ದಾಖಲಾತಿ ನೀಡಿ ನಂತರ ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಬೇಕು.
ಒಂದು ವರೆ ವರ್ಷದಿಂದ ರೇಷನ್ ಕಾರ್ಡ್ ವಿತರಣೆ & ಹೊಸ ಅರ್ಜಿ ಸಲ್ಲಿಸುವುದನ್ನು ಸ್ಥಗಿತ ಗೊಳಿಸಲಾಗಿತ್ತು:- 2023 ಎಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಇತ್ತು. ಆಗ ಚುನಾವಣೆಯ ಕಾರಣದಿಂದ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರ ಹೊಸದಾಗಿ ರೇಷನ್ ಕಾರ್ಡ್ಗೆ ಅಪ್ಲೇ ಮಾಡಬಹುದು. ಮತ್ತೆ ಲಿಂಕ್ ಓಪನ್ ಮಾಡಿರಲಿಲ್ಲ. ತಾಂತ್ರಿಕ ದೋಷ ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ರೇಷನ್ ಕಾರ್ಡ್ ವಿತರಣೆ ಆಗಬೇಕು ಎಂಬ ನೆಪ ಹೇಳುತ್ತಾ ಮತ್ತೆ ಮರು ನೋಂದಣಿಗೆ ಅವಕಾಶ ನೀಡಿರಲಿಲ್ಲಾ. ಈಗ ಬರುವ ಜೂನ್ ತಿಂಗಳಿಂದ ಮತ್ತೆ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಆಹಾರ ಇಲಾಖೆ ತಿಳಿಸಿದೆ.
ಇತರೆ ವಿಷಯಗಳು
URAM Scholarship: ಪ್ರತಿ ವಿದ್ಯಾರ್ಥಿಗೆ ₹ 80,000 ಮೌಲ್ಯದ ವಿದ್ಯಾರ್ಥಿವೇತನ.! ಕೂಡಲೇ ಅಪ್ಲೇ ಮಾಡಿ
ರಾಜ್ಯದ 31.8 ಲಕ್ಷ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆ.! ಉಳಿದವರಿಗೆ 2 ದಿನಗಳಲ್ಲಿ ಜಮೆ