rtgh

SSLC ಪಾಸಾದವರಿಗೆ ಮಂಡ್ಯದ ಕೋರ್ಟ್‌ನಲ್ಲಿ ಉದ್ಯೋಗ: ತಿಂಗಳಿಗೆ 30,000 ವೇತನ ಈಗಲೇ ಅರ್ಜಿ ಸಲ್ಲಿಸಿ

mandya court peon recruitment

ಹಲೋ ಗೆಳೆಯರೇ, SSLC ಪಾಸಾಗಿ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಮಂಡ್ಯ ಜಿಲ್ಲೆಯಲ್ಲಿದೆ ಸರ್ಕಾರಿ ಉದ್ಯೋಗದ ಉತ್ತಮ ಅವಕಾಶ. ನೀವು ಸಹ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಈಗಲೇ ಅರ್ಜಿ ಸಲ್ಲಿಸಿ.

mandya court peon recruitment

ಮಂಡ್ಯ ಜಿಲ್ಲಾ & ಸತ್ರ ನ್ಯಾಯಾಲಯವು, ಮಂಡ್ಯ ಘಟಕದ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ 41 ಜವಾನರು ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಅರ್ಹ & ಆಸಕ್ತರಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ನೇಮಕಾತಿ ಪ್ರಾಧಿಕಾರ : ಮಂಡ್ಯ ಜಿಲ್ಲಾ ಸತ್ರ ನ್ಯಾಯಾಲಯ.
ಹುದ್ದೆ ಹೆಸರು : ಜವಾನರು (ಪೀವನ್)
ಹುದ್ದೆಗಳ ಒಟ್ಟು ಸಂಖ್ಯೆ : 41
ವೇತನ ಶ್ರೇಣಿ : ರೂ.17000-28950.

ಅರ್ಜಿ ಹಾಕಲು ಅರ್ಹತೆಗಳು

  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ SSLC ಪರೀಕ್ಷೆಯಲ್ಲಿ ಉತ್ತೀರ್ಣತೆ / ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕಾಗುತ್ತದೆ.
  • ಕನ್ನಡ ಭಾಷೆಯನ್ನು ಓದಲು & ಬರೆಯಲು ತಿಳಿದಿರಬೇಕು.
  • ಅರ್ಜಿ ಹಾಕಲು ಕನಿಷ್ಠ 18 ವರ್ಷ ಪೂರ್ಣಗೊಳಿಸಿರಬೇಕು.
  • ಸಾಮಾನ್ಯ ವರ್ಗದವರಿಗೆ 35, OBC ವರ್ಗದವರಿಗೆ 38, SE / ST, ಪವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯಸ್ಸು ಮೀರಿರಬಾರದು.

ಆಯ್ಕೆ ವಿಧಾನ : 10ನೇ ತರಗತಿಯ ಗರಿಷ್ಠ ಅಂಕಗಳ ಆಧಾರದಲ್ಲಿ1 ಹುದ್ದೆಗೆ 10 ಅಭ್ಯರ್ಥಿಗಳನ್ನು ಶಾರ್ಟ್‌ ಲಿಸ್ಟ್‌ ಮಾಡಿ, ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

– ಮಂಡ್ಯ ಜಿಲ್ಲಾ ಕೋರ್ಟ್‌ ವೆಬ್‌ ವಿಳಾಸ https://mandya.dcourts.gov.in/online-recruitment/ ಕ್ಕೆ ಭೇಟಿ ನೀಡಿ.
– ತೆರೆದ ವೆಬ್‌ಪೇಜ್‌ನಲ್ಲಿ ‘Post Of Peon’ ಮೆನು ಕೆಳಗಡೆ ‘Click Here To Apply Online’ .
– ಮತ್ತೊಂದು ವೆಬ್‌ಪೇಜ್‌ ತೆರೆದುಕೊಳ್ಳುತ್ತದೆ ಇದರಲ್ಲಿ ‘Online Application’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಸೂಚನೆಗಳ ಪಟ್ಟಿ ಪ್ರದರ್ಶಿತವಾಗುತ್ತದೆ. ಓದಿಕೊಳ್ಳಿ.
– ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ, ಅಪ್ಲೇ ಮಾಡಿ

ಅಪ್ಲಿಕೇಶನ್‌ ಶುಲ್ಕ ವಿವರ

ಸಾಮಾನ್ಯ ವರ್ಗ:300.
ಇತರೆ ಹಿಂದುಳಿದ ವರ್ಗ ರೂ.150.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 , ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.

ಅರ್ಜಿ ಪ್ರಕ್ರಿಯೆಯ ದಿನಾಂಕಗಳು

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03-05-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 03-06-2024 ರ ರಾತ್ರಿ 11-59 ಗಂಟೆವರೆಗೆ.
ಆನ್‌ಲೈನ್‌ ಸೇವೆಗಳ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ: 04-06-2024 ರ ರಾತ್ರಿ 11-59 ಗಂಟೆವರೆಗೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ವಿದ್ಯಾರ್ಹತೆಯ marks cards.
  • ಜಾತಿ & ಅದಾಯ ಪ್ರಮಾಣ ಪತ್ರ
  • ಮೀಸಲಾತಿ ಕೋರುವವರು ಸಂಬಂಧಿತ ಪ್ರಮಾಣ ಪತ್ರ.
  • ಭಾವಚಿತ್ರ & ಸಹಿ ಸ್ಕ್ಯಾನ್‌ ಕಾಪಿ ಮತ್ತು ಇತರೆ..

ಇತರೆ ವಿಷಯಗಳು

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ.! ಈ ದಾಖಲೆಗಳು ಬೇಕೇ ಬೇಕು

URAM Scholarship: ಪ್ರತಿ ವಿದ್ಯಾರ್ಥಿಗೆ ₹ 80,000 ಮೌಲ್ಯದ ವಿದ್ಯಾರ್ಥಿವೇತನ.! ಕೂಡಲೇ ಅಪ್ಲೇ ಮಾಡಿ

Spread the love

Leave a Reply

Your email address will not be published. Required fields are marked *