rtgh

2500 BMTC ಕಂಡಕ್ಟರ್ ಹುದ್ದೆಗಳ ಅರ್ಜಿಗೆ ಲಿಂಕ್‌ ಬಿಡುಗಡೆ.! ಆಸಕ್ತರು ಇಂದಿನಿಂದಲೇ ಅಪ್ಲೇ ಮಾಡಿ

BMTC Conductor Application Link

ಹಲೋ ಗೆಳೆಯರೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರಡಿಸಿದ್ದ BMTC ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧ ಇದೀಗ ಆನ್‌ಲೈನ್‌ ಅಪ್ಲೇಗೆ ಲಿಂಕ್‌ ಬಿಡುಗಡೆ ಮಾಡಲಾಗಿದೆ. ಆಸಕ್ತರು ಇಂದಿನಿಂದ ಅಪ್ಲೇ ಮಾಡಬಹುದು. ಅರ್ಜಿ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

BMTC Conductor Application Link

2nd ಪಿಯುಸಿ ಪಾಸಾದವರು ಸರ್ಕಾರಿ ಹುದ್ದೆಗಾಗಿ ಮುನ್ನೋಡುತ್ತಿದ್ದಲ್ಲಿ, ಅದರಲ್ಲೂ BMTC ಹುದ್ದೆ ಪಡೆಯಬೇಕು, ಕಂಡಕ್ಟರ್ ಹುದ್ದೆಗೆ ಸೇರಬೇಕೆಂದಿದ್ದರೆ, ನಿಮಗಿದೋ ಭರ್ಜರಿ ಗುಡ್‌ನ್ಯೂಸ್‌. BMTC ಬರೋಬ್ಬರಿ 2500 ಕಂಡಕ್ಟರ್‌ ಹುದ್ದೆಗಳ ಭರ್ತಿಗೆ KEA ಇತ್ತೀಚೆಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಇದೀಗ ಸದರಿ ಹುದ್ದೆಗಳಿಗೆ ಅರ್ಜಿ ಹಾಕಲು ಆನ್‌ಲೈನ್‌ ಲಿಂಕ್‌ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಿಕ್ಕುಳಿದ ವೃಂದದಲ್ಲಿ 2286 ನಿರ್ವಾಹಕ ಹುದ್ದೆ, ಸ್ಥಳೀಯ ವೃಂದದಲ್ಲಿ 214 ( ಹಿಂಬಾಕಿ 15 ಹುದ್ದೆ ಸೇರಿ) ನಿರ್ವಾಹಕ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು KEA ನಡೆಸುತ್ತಿದೆ.

ಉದ್ಯೋಗ ಸಂಸ್ಥೆ ಹೆಸರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆಯ ಹೆಸರು : ನಿರ್ವಾಹಕ (ಕಂಡಕ್ಟರ್ )
ಒಟ್ಟು ಹುದ್ದೆಗಳು : 2500.

BMTC ಕಂಡಕ್ಟರ್ ಹುದ್ದೆಗೆ ಅರ್ಜಿ ಹಾಕುವ ವಿಧಾನ

  • ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು ಈ Apply Online ವೆಬ್‌ ವಿಳಾಸವನ್ನು ಭೇಟಿ ಮಾಡಿ.
  • ತೆರೆದ ವೆಬ್‌ಸೈಟ್‌ನಲ್ಲಿ HK / NHK ಹುದ್ದೆಗಳ ಅರ್ಜಿಗೆ ಪ್ರತ್ಯೇಕ ಲಿಂಕ್ ನೀಡಲಾಗಿರುತ್ತದೆ.
  • ನೀವು ಯಾವ ವೃಂದದ ಹುದ್ದೆಗೆ ಅರ್ಜಿ ಹಾಕಬೇಕೋ ಆ ಸದರಿ ಲಿಂಕ್ ಕ್ಲಿಕ್ ಮಾಡಿ.
  • KEA ಯ ಮತ್ತೊಂದು ವೆಬ್‌ಸೈಟ್‌ ತೆರೆಯುತ್ತದೆ.
  • ಇಲ್ಲಿ ಮೊದಲ ಬಾರಿಗೆ KEA ಹುದ್ದೆಗೆ ಅರ್ಜಿ ಹಾಕುವವರು ‘New Applicant Registration’ ಮೇಲೆ ಕ್ಲಿಕ್ ಮಾಡಿ.
  • ಕೇಳಲಾದ ಮಾಹಿತಿ ನೀಡಿ ಅರ್ಜಿ ರಿಜಿಸ್ಟ್ರೇಷನ್‌ ಮಾಡಿ.
  • ರಿಜಿಸ್ಟ್ರೇಷನ್‌ ಪಡೆದಿರುವವರು ರಿಜಿಸ್ಟ್ರೇಷನ್ ನಂಬರ್, ಹೆಸರಿನ ಮೊದಲ 5 ಅಕ್ಷರ ನೀಡಿ ಲಾಗಿನ್‌ ಆಗುವ ಮೂಲಕ ಅಪ್ಲೇ ಮಾಡಿ.

ಅರ್ಜಿ ಶುಲ್ಕ ವಿವರ

  • ಜೆನೆರಲ್ ಕೆಟಗರಿ ಹಾಗೂ ಇತರೆ ಹಿಂದುಳಿದ ಪ್ರವರ್ಗಗಳಿಗೆ ಅರ್ಜಿ ಶುಲ್ಕ ರೂ.750.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ ರೂ.500.
  • ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ ಮಾಡುವ ಕೊನೆ ದಿನಾಂಕ: 18-05-2024
  • ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ : 19-05-2024
  • ಅಪ್ಲಿಕೇಶನ್ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ 18-05-2024 ಕ್ಕೆ ಕನಿಷ್ಠ 18 ವರ್ಷವಾಗಿರಬೇಕು. ಗರಿಷ್ಠ ವಯಸ್ಸು ವರ್ಗಾವಾರು ತಿಳಿಯಲು ಕೆಳಗಿನ ಡೀಟೇಲ್ಡ್‌ ಲೇಖನದ ಲಿಂಕ್ ಕ್ಲಿಕ್ ಮಾಡಿ ತಿಳಿಯಿರಿ.
  • BMTC ನಿರ್ವಾಹಕ ಹುದ್ದೆಗೆ ವೇತನ ಶ್ರೇಣಿ : ರೂ.18660-25300.

ಇತರೆ ವಿಷಯಗಳು

ಚುನಾವಣಾ ವೇಳೆಯೇ ಜನಸಾಮಾನ್ಯರಿಗೆ ಬಿಗ್​ ರಿಲೀಫ್​.! ಗ್ಯಾಸ್ ಬೆಲೆಯಲ್ಲಿ ಭರ್ಜರಿ ಇಳಿಕೆ

ಉಜ್ವಲ ಸ್ಕೀಮ್ ಫಲಾನುಭವಿಗಳಿಗೆ ಉಚಿತ ಸೌರಒಲೆ.! ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ

Spread the love

Leave a Reply

Your email address will not be published. Required fields are marked *