ಹಲೋ ಗೆಳೆಯರೇ, ತೈಲ ಮಾರುಕಟ್ಟೆ ಕಂಪನಿಗಳು ಮೇ ಮೊದಲ ದಿನ ಜನ ಸಾಮಾನ್ಯರಿಗೆ ಗ್ಯಾಸ್ ಬೆಲೆಯಲ್ಲಿ ಬಿಗ್ ರಿಲೀಫ್ ನೀಡಿವೆ. ಪ್ರತಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಎಷ್ಟು ಇಳಿಕೆಯಾಗಿದೆ ಎಂಬ ಬಗ್ಗೆ ಲೇಖನದಲ್ಲಿ ತಿಳಿಯಿರಿ.
ತೈಲ ಮಾರುಕಟ್ಟೆ ಕಂಪನಿಗಳು ಮೇ ಮೊದಲ ದಿನ ಜನ ಸಾಮಾನ್ಯರಿಗೆ ಒಳ್ಳೆ ಸುದ್ದಿ ನೀಡಿದೆ. ಸಿಲಿಂಡರ್‌ಗಳ ಬೆಲೆಯಲ್ಲಿ 19 ರೂ.ನಷ್ಟು ಇಳಿಕೆ ಮಾಡಲಾಗಿದೆ. ಹೊಸ ಬೆಲೆಗಳು ಇಂದಿನಿಂದ ಅಂದರೆ ಮೇ 1ರಿಂದಲೇ ದೇಶಾದ್ಯಂತ ಜಾರಿಗೆ ಬರುವುದು. ಕಳೆದ ತಿಂಗಳು ಸಹ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿತ್ತು. ಏಪ್ರಿಲ್ 1 ರಂದು 30.50 ರೂ.ರಷ್ಟು ದರ ಕಡಿಮೆ ಮಾಡಲಾಗಿದೆ. ಆದರೆ ಮಾರ್ಚ್‌ನಲ್ಲಿ 25.5 ರೂ. & ಫೆಬ್ರವರಿಯಲ್ಲಿ 14 ರೂ.ಗಳಷ್ಟು ಬೆಲೆಯನ್ನು ಏರಿಕೆ ಮಾಡಲಾಯಿತು.
ಕರ್ಮಶಿಯಲ್ ಸಿಲಿಂಡರ್ ಬೆಲೆ ಎಷ್ಟು ಆಯಿತು? :
ಕಮರ್ಷಿಯಲ್ ಸಿಲಿಂಡರ್ ದರವನ್ನು ದೇಶಾದ್ಯಂತ ಜಾರಿಗೆ ಬರುವಂತೆ 19 ರೂ. ಕಡಿಮೆ ಮಾಡಲಾಗಿದೆ. ಬೆಲೆ ಕಡಿತದ ನಂತರ ಕಮರ್ಷಿಯಲ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1745.50 ರೂ. ಮತ್ತು ಕೋಲ್ಕತ್ತಾದಲ್ಲಿ 1859 ರೂ. ಮುಂಬಯಿಯಲ್ಲಿ 1698.50 ರೂ.ಗೆ & ಚೆನ್ನೈನಲ್ಲಿ 1911 ರೂ.ಗಳಾಗಿದೆ.
ಗೃಹಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲಾ: 19 ಕೆಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ಆದರೆ ಮನೆಗಳಲ್ಲಿ ಬಳಸುವ 14.2 KG ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ವಾಯು ಇಂಧನ ಬೆಲೆಯಲ್ಲಿ ಹೆಚ್ಚಳ :
ಮೇ ತಿಂಗಳ ಮೊದಲ ದಿನದಿಂದ ಏರ್‌ಲೈನ್ಸ್ ಕಂಪನಿಗಳಿಗೆ ಶಾಕ್ ಸಿಕ್ಕಿದ್ದು, ವಾಯು ಇಂಧನ ಬೆಲೆಯಲ್ಲಿ ಏರಿಕೆಯಾಗಿದೆ.ತೈಲ ಮಾರುಕಟ್ಟೆ ಕಂಪನಿಗಳು (OMC) ವಿಮಾನ ಇಂಧನದ ಬೆಲೆಯನ್ನು ಲೀಟರ್‌ಗೆ 749.25 ರೂ.ಗಳಷ್ಟು ಏರಿಕೆ ಮಾಡಿದೆ. ಹೊಸ ದರಗಳು ಇಂದಿನಿಂದ ಜಾರಿಗೆ ಬಂದಿವೆ. ಈ ಹಿಂದೆ, ಏಪ್ರಿಲ್‌ನಲ್ಲಿ ರೂ 502.91/KG ಲೀಟರ್‌ಗೆ ಇಳಿಕೆಯಾಗಿದ್ದರೆ, ಮಾರ್ಚ್‌ನಲ್ಲಿ ವಿಮಾನ ಇಂಧನ ಬೆಲೆ ಲೀಟರ್‌ಗೆ ರೂ 624.37/KG ಏರಿಕೆಯಾಗಿತ್ತು.
ಇತರೆ ವಿಷಯಗಳು
ಬ್ಯಾಂಕ್‌ಗಳಿಗೆ ದೀರ್ಘಕಾಲ ರಜೆ.! RBI ನಿಂದ ರಜೆ ಪಟ್ಟಿ ರಿಲೀಸ್
ರಾಜ್ಯದಲ್ಲಿ 54,000 ರೂ. ಗಡಿ ದಾಟಿದ ಅಡಿಕೆ ಬೆಲೆ.! ಎಲ್ಲೆಲ್ಲಿ ಎಷ್ಟೆಷ್ಟು ರೇಟ್ ?