ಹಲೋ ಗೆಳೆಯರೇ, ಕೇಂದ್ರ ಸರ್ಕಾರದ ಪಿಎಂ ಸೌರಗೃಹ ಯೋಜನೆಗೆ ಮೈಸೂರು ವ್ಯಾಪ್ತಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. 3 ತಿಂಗಳಲ್ಲಿ ಒಂದೂವರೆ ಸಾವಿರ ಮಂದಿ ನೋಂದಾಯಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಒಮ್ಮೆ ಮನೆಯ ಛಾವಣಿಯ ನಿರ್ಮಿಸಿದರೆ 20 ವರ್ಷಗಳ ಕಾಲ ಉಚಿತವಾಗಿ ವಿದ್ಯುತ್ ಪಡೆಯಬಹುದು. ನೀವು ಇನ್ನು ಅರ್ಜಿ ಹಾಕದಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ.
ಉಚಿತ ವಿದ್ಯುತ್ ಪಡೆಯುವುದಲ್ಲದೆ, ನಿಯಮಿತ ಆದಾಯವನ್ನೂ ಪಡೆಯಬಹುದಾದ ಕೇಂದ್ರ ಸರ್ಕಾರದ ಪಿಎಂ ಸೌರಗೃಹ ಯೋಜನೆ(ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ)ಗೆ ಮೈಸೂರು ಭಾಗದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. 3 ತಿಂಗಳಲ್ಲಿ ಒಂದೂವರೆ ಸಾವಿರ ಮಂದಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಸೌರಗೃಹ ಯೋಜನೆಯಡಿ ಶೇ.40ರಷ್ಟು ಸಬ್ಸಿಡಿ ಸಿಗಲಿದೆ. ವಿದ್ಯುತ್ ದರ ದಿನೇದಿನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರೂಫ್‌ಟಾಪ್ ಸೋಲಾರ್ ಯೋಜನೆ ಉತ್ತಮ ಪರಿಹಾರವಾಗಿದೆ. ಮನೆಯ ಚಾವಣಿ ಮೇಲೆ ಸೋಲಾರ್ ಘಟಕ ನಿರ್ಮಿಸಿದರೆ ಸಾಕು 20 ವರ್ಷದ ವರೆಗೂ ಫ್ರೀ ವಿದ್ಯುತ್ ಪಡೆಯಬಹುದು. ಇದರಿಂದ ಶೇ.30 ರಿಂದ 50ರಷ್ಟು ವಿದ್ಯುತ್ ವೆಚ್ಚ ಉಳಿಸಿಕೊಳ್ಳಬಹುದು.
1523 ಮನೆಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸುವ ಕಾರ್ಯಕ್ರಮ ನಡೆಯುತ್ತಿದೆ. ಮೈಸೂರಿನ ಜನತೆಯೂ ಇತ್ತೀಚೆಗೆ ಸೌರವಿದ್ಯುತ್ ಬಳಕೆಗೆ ಆಸಕ್ತಿಯನ್ನು ತೋರುತ್ತಿದ್ದಾರೆ ಎಂದು ಸೆಸ್ಕ್‌ನ ಅಧೀಕ್ಷಕ ಎಂಜಿನಿಯರ್ ಸುನೀಲ್‌ಕುಮಾರ್ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ..
ಯೋಜನೆ ಅನುಷ್ಠಾನ ಹೇಗೆ?
ಒಂದು ವಸತಿ ಗೃಹ / ವಸತಿ ಸಂಕೀರ್ಣದ ಮೇಲೆ ಒಂದು ಕಿಲೋ ವ್ಯಾಟ್‌ನಿಂದ 500 ಕಿಲೋ ವ್ಯಾಟ್‌ಗಳ ವರೆಗೂ ಸೌರ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಒಂದು ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 50 ರಿಂದ 60 ಸಾವಿರ ರೂ.ವರೆಗೂ ಇರುತ್ತದೆ. ಇದಕ್ಕೆ 30,000 ರೂ. ಸಬ್ಸಿಡಿ ಸಿಗುತ್ತದೆ. ಇದೇ ಸಬ್ಸಿಡಿಯು 3 ಕಿಲೋ ವ್ಯಾಟ್‌ವರೆಗೂ ಸಿಗಲಿದೆ.
10 ಕಿಲೋ ವ್ಯಾಟ್ ಘಟಕ ಸ್ಥಾಪಿಸಿದರೆ 3 ಕಿಲೋ ವ್ಯಾಟ್‌ಗಳ ವರೆಗೂ ಶೇ. 40ರಷ್ಟು ಸಬ್ಸಿಡಿ ಮತ್ತು ನಂತರದ 7 ಕಿಲೋ ವ್ಯಾಟ್‌ವರೆಗೂ ಶೇ.20ರಷ್ಟು ಸಬ್ಸಿಡಿ ಸಿಗುತ್ತದೆ. ನಿಮ್ಮ ಬಳಿ ಹಣವಿಲ್ಲದಿದ್ದರೂ ಬ್ಯಾಂಕಿನಿಂದ ಸಾಲ ಸೌಲಭ್ಯವನ್ನೂ ಪಡೆದುಕೊಳ್ಳಬಹುದು.
300 ಯೂನಿಟ್ ವಿದ್ಯುತ್ ಉತ್ಪಾದನೆ
ಈ ಯೋಜನೆ ಅಡಿಯಲ್ಲಿ ಗ್ರಾಹಕರು Online ಮೂಲಕ ನೋಂದಯಿಸಿಕೊಂಡ ನಂತರ ಸಂಬಂಧಿಸಿದ ಅಧಿಕಾರಿಗಳು & ಸಿಬ್ಬಂದಿ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಆಯ್ಕೆಯಾದ ಗ್ರಾಹಕರು ಮುಂಗಡವಾಗಿ ಶೇ. 60ರಷ್ಟು ಹಣ ಪಾವತಿಸಿ ಕಾಮಗಾರಿ ಪ್ರಾರಂಭಿಸಬಹುದು. ಘಟಕ ಸ್ಥಾಪನೆ ಮಾಡಿದ ನಂತರ 5 ವರ್ಷಗಳವರೆಗೂ ಘಟಕಗಳನ್ನು ಉಚಿತವಾಗಿ ನಿರ್ವಹಣೆ ಮಾಡಲಾಗುತ್ತದೆ.
2 ಕಿಲೋ ವ್ಯಾಟ್ ಸೋಲಾರ್ ಪ್ಯಾನಲ್ ಅಳವಡಿಸಿದರೆ ದಿನಕ್ಕೆ 10 ಗಂಟೆಗಳ ಕಾಲ ಬಿಸಿಲಿನ ಸಂದರ್ಭದಲ್ಲಿ ಸುಮಾರು 10 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ನಾವು ತಿಂಗಳಿಗೆ ಲೆಕ್ಕಾಚಾರ ಮಾಡಿದರೆ 2 ಕಿಲೋ ವ್ಯಾಟ್ ಸೋಲಾರ್ ಪ್ಯಾನಲ್‌ನಿಂದ ಸುಮಾರು 300 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದು.
ಇತರೆ ವಿಷಯಗಳು
ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ.!! ಇಂತಹ ಬ್ಯಾಂಕ್ ಅಕೌಂಟ್‌ಗಳು ರದ್ದು
ಹೆಣ್ಣು ಮಕ್ಕಳಿಗೆ ಭರ್ಜರಿ ಸುದ್ದಿ.!! ಈ ದಾಖಲೆ ಹೊಂದಿದವರಿಗೆ ಉಚಿತ ಹೊಲಿಗೆ ಯಂತ್ರ