ಹಲೋ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸದ್ದು ಮಾಡುತ್ತಿದೆ ಲೋಕಸಭಾ ಚುನಾವಣೆ, ಈ ಚುನಾವಣೆಗೆ ಯಾರು ಮತವನ್ನು ಹಾಕುವುದಿಲ್ಲವೋ ಅಂತವರ ಖಾತೆಯಿಂದ 350 ಹಣ ಡೆಬಿಟ್ ಆಗಲಿದೆ. ಇದು ಎಲ್ಲರಿಗೂ ಕೂಡ ಅನ್ವಯವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮಾಹಿತಿ ನಿಜಾನ / ಸುಳ್ಳು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.
ಮತ ಹಾಕದಿದ್ರೆ 350 ಹಣ ಡೆಬಿಟ್ !
ಲೋಕಸಭಾ ಚುನಾವಣೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತದೆ. ಆ ಲೋಕಸಭಾ ಚುನಾವಣೆಗಳಲ್ಲಿ ಯಾರು ಮತವನ್ನು ಹಾಕದೆ ಮನೆಯಲ್ಲಿದ್ದು ಸಮಯವನ್ನು ವ್ಯರ್ಥ ಮಾಡುತ್ತಾರೋ ಅಂತವರಿಗೆ ಹಣ ಕಡಿತವಾಗುತ್ತದೆ. ಯಾರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೋ ಅಂತವರಿಗೆ ಮಾತ್ರ ಈ ಹಣ ಕಡಿತವಾಗುತ್ತದೆ. ಯಾರು ಬ್ಯಾಂಕ್ ಖಾತೆ ಒಂದಿರುವುದಿಲ್ಲವೋ ಅಂತವರಿಗೆ ಮೊಬೈಲ್ ರೀಚಾರ್ಜ್ ನಲ್ಲಿಯೇ 350 ರೂ ಹಣ ಕಡಿತವಾಗುತ್ತದೆ. ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲಾಗುತ್ತಿದೆ.
ಆ ಪೋಸ್ಟ್ ಪತ್ರಿಕಾ ಪ್ರಕಟಣೆ ಮಾಹಿತಿಯಂತೆ ಕಾಣುತ್ತದೆ. ಇದು ಸುಳ್ಳು ಸುದ್ದಿಯಾಗಿದೆ. ಎಂದು ಚುನಾವಣಾ ಆಯೋಗವು ಈಗಾಗಲೇ ಎಲ್ಲಾ ಭಾರತೀಯರಿಗೆ ಮಾಹಿತಿ ನೀಡಿದೆ. ಈ ಮಾಹಿತಿಯನ್ನು ಯಾರೋ ಒಬ್ಬ ವ್ಯಕ್ತಿ ತಮಾಷೆಗಾಗಿ ಮತ್ತು ಸುಳ್ಳು ಸುದ್ದಿ ಪ್ರಚಾರ ಮಾಡಬೇಕು ಎಂಬ ಮನಸ್ಸಿನಿಂದ ಒಂದು ಪತ್ರಿಕಾ ಪೋಸ್ಟ್ ಕೆಲವು ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ.
ಇಂತ ಪೋಸ್ಟ್ಗಳನ್ನು ಮತ್ತೊಬ್ಬರು ಫೇಸ್ಬುಕ್ ಆ್ಯಪ್ ನಲ್ಲಿ ಮತ್ತೆ ರಿಪೋಸ್ಟ್ ಮಾಡುತ್ತಾನೆ. ಅಲ್ಲಿ ಎಲ್ಲಾ ಜನರು ನೋಡಿ ಎಲ್ಲಾ ಅಭ್ಯರ್ಥಿಗಳಿಗೂ ಶೇರ್ ಮಾಡಲು ಮುಂದಾಗುತ್ತಾರೆ. ಆ ಒಂದು ಸುದ್ದಿ ನಿಜವೋ ಸುಳ್ಳೋ ಎಂಬುದು ಕೂಡ ಖಚಿತವಾಗಿರುವುದಿಲ್ಲ. ಅಂತವರಿಗೆ ಇದು ಸುಳ್ಳು ಸುದ್ದಿಯಾಗಿರುತ್ತದೆ.
ನೀವು ಬ್ಯಾಂಕ್ ಖಾತೆ ಹೊಂದಿದ್ದರು ಕೂಡ ಹಣ ಕಡಿತವಾಗಲ್ಲ ಮತ್ತು ಲೋಕಸಭಾ ಚುನಾವಣೆಯಲ್ಲಿ ವೋಟ್ ಹಾಕದಿದ್ದರೂ ಕೂಡ ಹಣ ಕಟ್ ಆಗುವುದಿಲ್ಲ. ವೋಟ್ ಹಾಕಿದರೂ ಕೂಡ ಯಾವುದೇ ರೀತಿಯ ಬದಲಾವಣೆಯನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕಾಣಿಸುವುದಿಲ್ಲ.
ಎಲ್ಲರೂ ಕೂಡ ನಿಮ್ಮ ಮತವನ್ನು ಹಾಕಿ ಏಕೆಂದರೆ ವೋಟರ್ ಐಡಿ ಕಾರ್ಡ್ಗಳನ್ನು ಮಾಡಿಸಿರುವುದೇ ಮತವನ್ನು ಚಲಾವಣೆ ಮಾಡಲು. ಇದರಿಂದ ಎಲ್ಲಾ ಅಭ್ಯರ್ಥಿಗಳು ಕೂಡ ಪ್ರತಿ ವರ್ಷವೂ ಬೇರೆ ರೀತಿಯ ಚುನಾವಣಾ ಸಂದರ್ಭದಲ್ಲಿ ಮತವನ್ನು ಚಲಾವಣೆ ಮಾಡಿ. ಪ್ರಸ್ತುತವಾಗಿ ಲೋಕಸಭಾ ಚುನಾವಣೆ ಕೆಲವೇ ದಿನಗಳಲ್ಲಿ ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ಕೂಡ ನೀವು ಹೋಗಿ ಮತವನ್ನು ಹಾಕಬಹುದು. ಮತ ಹಾಕುವುದು ಎಲ್ಲಾ ಭಾರತೀಯರ ಹಕ್ಕು ಎಲ್ಲರೂ ಕೂಡ ಮತವನ್ನು ಚಲಾಯಿಸಿ.
ಇತರೆ ವಿಷಯಗಳು
ಅಡಿಕೆ ಬೆಳೆಗಾರರಿಗೆ ರಾಜಯೋಗ.! ರಾಜ್ಯದ ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಕೆ ಕಂಡ ಅಡಿಕೆ ಬೆಲೆ
ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ! ಅಳವಡಿಸದಿದ್ರೆ ದಂಡ ಗ್ಯಾರಂಟಿ