rtgh

ಸೋನು ಶ್ರೀನಿವಾಸ್ ಗೌಡ ಅರೆಸ್ಟ್ : ಕೇಸು ಕೊಟ್ಟವರೇ ಇವರು .? ಎಷ್ಟು ತಿಂಗಳು ಜೈಲು .?

More information on Sonu Srinivas Gowda Arrest

ನಮಸ್ಕಾರ ಸ್ನೇಹಿತರೆ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಓಟಿಟಿ ಕನ್ನಡ ಸೀಸನ್ 1 ರಿಯಾಲಿಟಿ ಶೋ ಮೂಲಕ ಫೇಮಸ್ ಆಗಿದ್ದು ಸಿಕ್ಕಾಪಟ್ಟೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಫೇಮಸ್ ಆಗಿದ್ದಾರೆ ಇದೀಗ ಬ್ಯಾಡರಹಳ್ಳಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ಅವರನ್ನು ಅರೆಸ್ಟ್ ಮಾಡಿದ್ದಾರೆ.

More information on Sonu Srinivas Gowda Arrest
More information on Sonu Srinivas Gowda Arrest

ಹಾಗಾದರೆ ಸೋನು ಶ್ರೀನಿವಾಸ್ ಗೌಡ ಅವರು ಮಾಡಿದ ತಪ್ಪೇನು ಯಾವ ಕಾರಣಕ್ಕಾಗಿ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡಬಹುದು.

ಸೋನು ಶ್ರೀನಿವಾಸ್ ಗೌಡ ಅರೆಸ್ಟ್ :

ಸೋನು ಶ್ರೀನಿವಾಸ ಗೌಡ ಬಿಗ್ ಬಾಸ್ ಓಟಿಟಿ ಕನ್ನಡ ಸೀಸನ್ 1 ರಿಯಾಲಿಟಿ ಸ್ಪರ್ಧಿಯಾಗಿದ್ದು ಇದೀಗ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಪೊಲೀಸರು ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಿದ್ದಾರೆ ಏಕೆಂದರೆ ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದ ಆರೋಪದ ಮೇಲೆ ಸೋನು ಶ್ರೀನಿವಾಸ ಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸರು ದಾಖಲು ಮಾಡಿ ಬಂದಿಸಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಮಾಡಿದ ತಪ್ಪು ಏನು ?

ಸಾಮಾಜಿಕ ಜಾಲತಾಣದಲ್ಲಿ ಈಚೆಗೆ ಸೋನು ಶ್ರೀನಿವಾಸ್ ಗೌಡ ಅವರು ಸೇವಂತಿ ಎಂಬ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದರು ಆದರೆ ಕಾನೂನುಬಾಹಿರವಾಗಿ ಈ ದತ್ತು ಪ್ರಕ್ರಿಯೆ ಇದೆ ಎಂಬ ಆರೋಪ.

ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಎಂಬುವವರು ಜೆಜೆ ಆಕ್ಟ್ನಡಿಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರ ವಿರುದ್ಧ ಬೇಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಿದ್ದಾರೆ.

ಇದನ್ನು ಓದಿ : ಮಹಿಳೆಯರಿಗೆ ರೈಲ್ವೆ ಇಲಾಖೆಯಿಂದ ಬಂಪರ್ ಗಿಫ್ಟ್ : ಕೇಂದ್ರದ ಹೊಸ ಗ್ಯಾರಂಟಿ ಘೋಷಣೆ

ಸೋನು ಶ್ರೀನಿವಾಸ್ ಗೌಡ ಅವರ ಮೇಲಿರುವ ಆರೋಪಗಳು :

ಹಿಂದೂ ದತ್ತು ಕಾಯ್ದೆ 1956 ರ ಪ್ರಕಾರ ಈ ದತ್ತು ಪ್ರಕ್ರಿಯೆ ನಡೆದಿರುವುದಿಲ್ಲ ಅಲ್ಲದೇ ಮಗುವಿನ ಮನೆ ಇರುವ ರಾಯಚೂರಿಗೆ ಹೋಗಿ ಸೋನು ಶ್ರೀನಿವಾಸ್ ಗೌಡ ಅವರು ಅಲ್ಲಿಂದ ಮಗುವನ್ನು ಕರೆದುಕೊಂಡು ಬಂದಿದ್ದಾರೆ. ಕೆಲಸ ಸೌಲಭ್ಯಗಳನ್ನು ಮಗುವಿನ ಪೋಷಕರಿಗೆ ಒದಗಿಸಿದ್ದೇನೆ ಎಂದು ಸೋನು ಶ್ರೀನಿವಾಸ್ ಗೌಡ ಅವರೇ ಹೇಳಿದ್ದು ಮಾರಾಟ ಮಾಡಿರುವಂತೆ ಇದು ಮಗುವನ್ನು ಕಾಣುತ್ತದೆ ಅಲ್ಲದೆ ಸೋನು ಅವರು ಮಗುವಿನ ಘನತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂಬ ದೂರಿನಲ್ಲಿ ತಿಳಿಸಲಾಗಿದೆ.

ಹಲವಾರು ದಾಖಲೆಗಳನ್ನು ಮಗುವನ್ನು ದತ್ತು ಪಡೆದಿರುವುದಕ್ಕೆ ಸಲ್ಲಿಸಬೇಕು. ಸೋನು ಶ್ರೀನಿವಾಸ ಗೌಡ ಮಕ್ಕಳ ಕಲ್ಯಾಣ ಸಮಿತಿಯ ಸಮ್ಮುಖದಲ್ಲಿ ಹಾಗೂ ಜಿಲ್ಲಾಧಿಕಾರಿಯ ಸಮ್ಮುಖದಲ್ಲಿ ಮಗುವನ್ನು ದತ್ತು ಪಡೆಯಬೇಕಿತ್ತು ಅದು ಯಾವುದೂ ಕೂಡ ಮಾಡಿರುವುದಿಲ್ಲ. ಹಾಗಾಗಿ ಈ ಪ್ರಕ್ರಿಯೆ ಕಾನೂನು ಬಾಹಿರವಾಗಿದೆ ಮಗುವಿನ ಗುರುತನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ ವಿಡಿಯೋಗಳನ್ನು ಮಗುವಿನ ಜೊತೆಗೆ ಹಂಚಿಕೊಂಡಿದ್ದಾರೆ ಮಗುವನ್ನು ಸಾಮಾಜಿಕ ಜಾಲತಾಣದಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ ಇದು ಕೂಡ ಅಪರಾಧವಾಗಿದೆ.

ಬೆಲೆಬಾಳುವ ಉಡುಗೊರೆಗಳನ್ನು ಮಗುವಿಗೆ ಕೊಡಿಸಿದ್ದೇನೆ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿಕೊಂಡಿದ್ದಾರೆ ಇದು ಮಗುವಿನ ಆತ್ಮಹತ್ಯಾನಕ್ಕೆ ಧಕ್ಕೆಯನ್ನು ಉಂಟುಮಾಡುತ್ತದೆ ಅಲ್ಲದೆ ಮಗುವನ್ನು ಶಾಲೆಗೂ ಕೂಡ ಕಳುಹಿಸಿಲ್ಲ ಮಗುವನ್ನು ಕಲಂ ಇದರ ಪ್ರಕಾರ ದತ್ತು ಪಡೆದುಕೊಳ್ಳುವ ವ್ಯಕ್ತಿಗೂ ಮತ್ತು ಮಗುವಿಗೂ 25 ವರ್ಷಗಳ ಅಂತರವಿರಬೇಕು ಅದು ಕೂಡ ಇಲ್ಲಿ ಪಾಲನೆ ಆಗಿರುವುದಿಲ್ಲ ಹೀಗೆ ಹಲವಾರು ಆರೋಪಗಳನ್ನು ಸೋನು ಶ್ರೀನಿವಾಸ್ ಗೌಡ ಅವರ ಮೇಲೆ ಮಾಡಲಾಗಿದೆ.

ಸೋನು ಶ್ರೀನಿವಾಸ್ ಗೌಡ ಹೇಳಿಕೆ :

ಸೋನು ಗೌಡ ಅವರು ಈ ಮಗುವಿನ ಬಗ್ಗೆ ಮಾಹಿತಿ ನೀಡಿದ ಪ್ರಕಾರ ನಮ್ಮ ಮನೆಯ ಸುತ್ತಮುತ್ತ ಇರುವಂತಹ ನಾಯಿಗಳಿಗೆ ಬಿಸ್ಕೆಟ್ ಹಾಕುವಾಗ ಏಳು ವರ್ಷದ ಸೇವಂತಿ ಎನ್ನುವ ಹೆಣ್ಣು ಮಗುವಿನ ಪರಿಚಯವಾಯಿತು ನನಗೂ ಬಿಸ್ಕೆಟ್ ಕೊಡಿ ಎಂದು ಆಕೆ ಕೇಳಿದ ಹಾಗಾಗಿ ಅವಳಿಗೆ ನಾನು ಮೊದಲು ಬಿಸ್ಕೆಟ್ ಕೊಡಿಸಿದ್ದೆ .

ಅದಾದ ನಂತರ ಶಾಪಿಂಗ್ ಮಾಡಿಸಿ ಅಂತ ಹಾಕಿ ನನಗೆ ಕೇಳಿದಾಗ ಅವಳಿಗೆ 5000 ಶಾಪಿಂಗ್ ಮಾಡಿಸಿದ್ದೇನೆ ಆಕೆಗೆ ನನಗೆ ಅಕ್ಕ ನಿಮ್ಮ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ಎಂದು ಹೇಳಿದಳು ಅದಕ್ಕಾಗಿ ಅವಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದರು.

ಒಟ್ಟರೆ ಸೋನು ಶ್ರೀನಿವಾಸ್ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇದೀಗ ಸೇವಂತಿ ಎಂಬ ಹೆಣ್ಣು ಮಗುವನ್ನು ಸಾಕುವುದರ ಮೂಲಕ ಇದೀಗ ಬ್ಯಾಡರಹಳ್ಳಿ ಪೋಲಿಸ್ ರವರು ಅರೆಸ್ಟ್ ಮಾಡಿದ್ದಾರೆ .

ಇದೊಂದು ರೀತಿಯಲ್ಲಿ ಸೋನು ಗೌಡ ಅವರಿಗೆ ತಲೆಬಿಸಿಯಾಗಿದೆ. ಹಾಗಾಗಿ ಯಾವುದೇ ಮಗುವನ್ನು ಸಾಕುವ ಮುನ್ನ ಕಾನೂನು ಪ್ರಕಾರವಾಗಿ ದತ್ತು ಪಡೆಯುವುದು ಮುಖ್ಯವಾಗಿರುತ್ತದೆ ಹಾಗಾಗಿ ಈ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *