rtgh

ರಾಮ ನವಮಿ ವಿಶೇಷ: ಈ 3 ರಾಶಿಯವರಿಗೆ ಇನ್ಮುಂದೆ ಗಜಕೇಸರಿ ಯೋಗ

Rama Navami astrology

ಹಲೋ ಸ್ನೇಹಿತರೇ, ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ರಾಮ ನವಮಿಯನ್ನು ಏಪ್ರಿಲ್‌ 17ರಂದು ಆಚರಿಸಲಾಗುವುದು. ಶ್ರೀರಾಮ ಜನಿಸಿದ ದಿನವನ್ನು ರಾಮ ನವಮಿಯಂದು ಆಚರಿಸಲಾಗುವುದು. ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ತಾರೀಖಿನಂದು ಅಭಿಜಿತ್ ಮುಹೂರ್ತದಲ್ಲಿ ಜನಿಸಿದನು ಎಂದು ಹೇಳಲಾಗುವುದು.

Rama Navami astrology

ಈ ವರ್ಷ ರಾಮ ನವಮಿ ಬಲು ವಿಶೇಷ ಪ್ರತಿಬಾರಿಯೂ ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಿದ್ದೇವೆ, ಆದ್ರೆ ಈ ವರ್ಷ ತುಂಬಾನೇ ವಿಶೇಷ, ಏಕೆಂದ್ರೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಬಂದು ಶ್ರೀರಾಮ ದೇವರ ದರ್ಶನ ಮಾಡಿ ಹೋಗುತ್ತಿದ್ದಾರೆ. ಆ ಬಾಲ ರಾಮನ ಮೂರ್ತಿ ನೋಡುತ್ತಿದ್ದರೆ ಎಂಥವರ ಮನಸ್ಸಿನಲ್ಲಿಯೂ ಭಕ್ತಿ ಉಕ್ಕಿ ಬರುತ್ತದೆ.

ಅಪರೂಪದ ದಿನದಂದು ರಾಮನವಮಿ ಬಂದಿದೆ. ರಾಮ ನವಮಿ ಹಬ್ಬವು ಚೈತ್ರ ನವರಾತ್ರಿಯ ಕೊನೆಯ ದಿನವಾಗಿದೆ. ಈ ದಿನ, ಒಂಬತ್ತು ದಿನಗಳ ಕಾಲ ದುರ್ಗಾದೇವಿಯನ್ನು ಪೂಜಿಸಿದ ನಂತರ, ಅವಳನ್ನು ಬೀಳ್ಕೊಡಲಾಗುತ್ತದೆ. ಈ ದಿನ ಗಜಕೇಸರಿ ಯೋಗ ಕೂಡ ಇದೆ. ತ್ರೇತಾಯುಗದಲ್ಲಿ ಭಗವಾನ್ ರಾಮನ ಜನನದ ಸಮಯದಲ್ಲಿ ಕೂಡ ಇದೇ ಯೋಗವಿತ್ತಂತೆ, ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಮಾಡಿದ ವರ್ಷವೇ ರಾಮ ನವಮಿಯಂದು ಗಜಕೇಸರಿ ಯೋಗವೂ ಉಂಟಾಗಿದೆ.

ಏಪ್ರಿಲ್ 17ರಂದು ಗಜಕೇಸರಿ ಯೋಗ ಕೂಡ ರೂಪುಗೊಳ್ಳಲಿದೆ. ಭಗವಾನ್ ರಾಮನು ತ್ರೇತಾಯುಗದಲ್ಲಿ ಜನಿಸಿದ ಸಂಧರ್ಭದಲ್ಲಿ ಸೂರ್ಯನು ಮೇಷ ರಾಶಿಯಲ್ಲಿದ್ದನು, ಈಗಲೂ ಸೂರ್ಯ ಮೇಷ ರಾಶಿಯಲ್ಲಿದ್ದಾನೆ. ಈ ರಾಮ ನವಮಿ ಈ ಮೂರು ರಾಶಿಯವರಿಗೆ ಗಜಕೇಸರಿ ಯೋಗವನ್ನು ತಂದಿದೆ:

ಮೇಷ ರಾಶಿ

ಸೂರ್ಯ ಮೇಷ ರಾಶಿಯಲ್ಲಿ ಇದೆ. ಇದರಿಂದಾಗಿ ಮೇಷ ರಾಶಿಯವರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸಬಹುದು. ಕೆಲಸದ ಸ್ಥಳದಲ್ಲಿ ನೀವು ಕೆಲವು ದೊಡ್ಡ ಜವಾಬ್ದಾರಿಯನ್ನು ಪಡೆಯಬಹುದು. ಕೆಲಸದಲ್ಲಿ ಉನ್ನತ ಸ್ಥಾನ ಪಡೆಯುತ್ತೀರಿ. ವ್ಯಾಪಾರಿಗಳಿಗೆ ತುಂಬಾನೇ ಲಾಭದಾಯಕವಾಗಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಲಾಭ ಗಳಿಸುತ್ತೀರಿ.

ಕನ್ನಡದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ

ತುಲಾ ರಾಶಿ

ಈ ರಾಮನವಮಿ ನಿಮ್ಮ ಬದುಕಿಗೆ ವಿಶೇಷ ಕೊಡುಗೆ ನೀಡಲಿದೆ. ನೀವು ಎಲ್ಲಾ ರೀತಿಯ ಭೌತಿಕ ಸೌಕರ್ಯಗಳನ್ನು ಪಡೆಯುತ್ತೀರಿ. ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಬಾಕಿ ಉಳಿದಿರುವ ನಿಮ್ಮೆಲ್ಲಾ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳುತ್ತವೆ. ನೀವು ಆಸ್ತಿ ಖರೀದಿಗೆ ಬಯಸುತ್ತಿದ್ದರೆ ಆ ಕನಸು ನನಸಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಶ್ರೀರಾಮನ ವಿಶೇಷ ಕೃಪೆ ಇರಲಿದೆ, ನಿಮ್ಮ ಕೆಲಸದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಯಶಸ್ಸನ್ನು ಪಡೆಯುತ್ತೀರಿ ಬಹಳ ದಿನಗಳಿಂದ ಇದ್ದ ನಿಮ್ಮ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಬಹುದು. ಉದ್ಯೋಗ ಮಾಡಲು ಬಯಸುವವರಿಗೆ ಹೊಸ ಉದ್ಯೋಗಕ್ಕೆ ಉತ್ತಮವಾದ ಅವಕಾಶಗಳು ಸಿಗುತ್ತವೆ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಸುಧಾರಣೆ ಕಂಡು ಬರುವುದು.

ಶ್ರೀ ರಾಮ ರಕ್ಷಾ ಸ್ತೋತ್ರ

ಶ್ರೀಗಣೇಶಾಯ ನಮಃ ಅಸ್ಯ ಶ್ರೀರಾಮರಕ್ಷಾಸ್ತೋತ್ರಮಂತ್ರಸ್ಯ | ಬುಧಕೌಶಿಕಋಷಿಃ | ಶ್ರೀಸೀತಾರಾಮಚಂದ್ರೋ ದೇವತಾ | ಅನುಷ್ಟುಪ್ ಛನ್ದಃ | ಸೀತಾ ಶಕ್ತಿಃ | ಶ್ರೀಮದ್ಧನುಮಾನ್ ಕೀಲಕಮ್ | ಶ್ರೀರಾಮಚಂದ್ರಪ್ರೀತ್ಯರ್ಥೇ ಜಪೇವಿನಿಯೋಗಃ | ಅಥ ಧ್ಯಾನಮ್ | ಧ್ಯಾಯೇದಾಜಾನಬಾಹುಂ ಧೃತಶರಧನುಷಂಬದ್ಧಪದ್ಮಾಸನಸ್ಥಮ್ | ಪೀತಂ ವಾಸೋ ವಸಾನಂನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ | ವಾಮಾಙ್ಕಾರುಢಸೀತಾಮುಖಕಮಲಮಿಲಲ್ಲೋಚನಂನೀರದಾಭಂ | ನಾನಾಲಙ್ಕಾರದೀಪ್ತಂ ದಧತಮುರುಜಟಾಮಣ್ಡನಂರಾಮಚಂದ್ರಮ್ || ಇತಿ ಧ್ಯಾನಮ್ |

ಇತರೆ ವಿಷಯಗಳು:

ಕನ್ನಡ ಪ್ರಚಂಡ ಕುಳ್ಳ ದ್ವಾರಕೀಶ್ ಇನ್ನಿಲ್ಲ.!

KSRTC ನಲ್ಲಿ 65 ವರ್ಷ ಮೇಲ್ಪಟ್ಟ ಪುರುಷರಿಗೆ ಬಿಗ್ ಅಪ್ಡೇಟ್.! ಇನ್ನೊಂದೇ ಹೆಜ್ಜೆ

Spread the love

Leave a Reply

Your email address will not be published. Required fields are marked *