rtgh

KSRTC ನಲ್ಲಿ 65 ವರ್ಷ ಮೇಲ್ಪಟ್ಟ ಪುರುಷರಿಗೆ ಬಿಗ್ ಅಪ್ಡೇಟ್.! ಇನ್ನೊಂದೇ ಹೆಜ್ಜೆ

Congress Guarantee

ಹಲೋ ಸ್ನೇಹಿತರೇ, ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರಿಗೆಲ್ಲ ಶಕ್ತಿ ಯೋಜನೆಯಿಂದ ಅನೇಕ ಪ್ರಯೋಜನೆ ಸಿಕ್ಕಿದೆ. ಶಕ್ತಿ ಯೋಜನೆಯ ಬಂದ ಬಳಿಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿಯೇ ಪ್ರಯಾಣ ಮಾಡುತ್ತಿದ್ದಾರೆ. ಹಾಗಾಗಿ ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಪ್ರವಾಸ ಮತ್ತು ದೈನಿಕ ಓಡಾಟಕ್ಕೆ ಬೆಂಬಲ ಸಿಕ್ಕಂತಾಗಿದೆ. ರಾಜ್ಯದ ಒಳಗೆ ಸರ್ಕಾರಿ ಬಸ್ ಉಚಿತವಾದ ಕಾರಣ ಮಹಿಳೆಯರ ಓಡಾಟ ಕೂಡ ಅಧಿಕವಾಗಿದೆ.

Congress Guarantee

ಬೇರೆ ಅವರಿಗೂ ನೀಡಿ
ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪ್ರಯಾಣದ ಅವಕಾಶ ನೀಡಿದ್ದು ಪುರುಷರಿಗೆ , ಮಕ್ಕಳಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಮಹಿಳಾ ಪ್ರಯಾಣಿಕರುಗಳ ಸಂಖ್ಯೆಯು ಅಧಿಕವಾದ ಕಾರಣ ಮಕ್ಕಳಿಗೆ ಮತ್ತು ಕೆಲಸಕ್ಕೆ ತೆರಳುವ ಪುರುಷರಿಗೆ ಸದಾ ರಶ್ ಆಗಿರುವ ಬಸ್ ನಲ್ಲಿ ಟಿಕೆಟ್ ಕೊಟ್ಟು ಪ್ರಯಾಣ ಮಾಡುವುದು ಹಿತಕರವಾದ ಅನಿಸುತ್ತಿಲ್ಲ ಹೀಗಾಗಿ ಸಾರ್ವತ್ರಿಕವಾಗಿ ಉಚಿತ ಮಾಡುವಂತೆ ಅನೇಕ ಮನವಿ ಬಂದಿದ್ದು ಈ ಕಾರಣಕ್ಕಾಗಿ ರಾಜ್ಯ ಸರ್ಕಾರದ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರಲಿದೆ.

ಪುರುಷರಿಗೆ KSRTC ಉಚಿತ ಬಸ್ ಪ್ರಯಾಣ
ಇತ್ತೀಚೆಗೆ ಹಿರಿಯ ನಾಗರಿಕರಿಗೆ ಮತ್ತು ಪುರುಷರಿಗೆ ಉಚಿತವಾಗಿ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಅನೇಕ ಮನವಿಗಳು ಬಂದಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಸಿಎಂ ಆರ್ಥಿಕ ಸಲಹೆಗಾರರಾದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

ಮಹಿಳೆಯರಿಗೆ ಮತ್ತೆ 800 ಹಣ ಗೃಹಲಕ್ಷ್ಮಿ ಅಲ್ಲದೆ ಇನ್ನೊಂದು ಯೋಜನೆ

ಏನಂದ್ರು?
ಶಾಸಕ ಬಸವರಾಜ ರಾಯರೆಡ್ಡಿ ಅವರು ನನ್ನನ್ನು ಹಣಕಾಸು ಮಂತ್ರಿ ಮಾಡುವಂತೆ ಈಗಾಗಲೇ ಸಿಎಂ ಅವರಿಗೆ ಮನವಿ ಮಾಡಿದ್ದೇನೆ. ನಾನು ಹಣಕಾಸು ಮಂತ್ರಿ ಆದರೆ ಹಲವಾರು ಜನಪ್ರಿಯ ಯೋಜನೆ ಜಾರಿಗೆ ತರುವೆನು. ಅಂತಹ ಯೋಜನೆಯಲ್ಲಿ ಪುರುಷರಿಗೆ ಉಚಿತ ಬಸ್ ಪ್ರಯಾಣವನ್ನು ಕೂಡ ಜಾರಿಗೆ ಬರಲಿದೆ. 60-65 ವರ್ಷ ಮೇಲ್ಪಟ್ಟ ಪುರುಷರು ಅಂದ್ರೆ ಹಿರಿಯ ನಾಗರಿಕರಿಗೆ ಶೀಘ್ರವೇ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ಬರಲಿದೆ. ಬಜೆಟ್ ನಲ್ಲಿ ಕೂಡ ಚಿಂತಿಸಲಾಗಿದೆ ಎಂದು ಅವರು ಹೇಳಿದರು. ಒಟ್ಟಾರೆಯಾಗಿ ಸಿಎಂ ಸಿದ್ದರಾಮಯ್ಯ ಅವರು ಈ ಒಂದು ಯೋಜನೆಗೆ ಪೂರ್ತಿ ಸಮ್ಮತಿ ನೀಡಿದರೆ 65ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಎಲ್ಲರಿಗೂ ಉಚಿತ ಪ್ರಯಾಣ ಸಿಗಲಿದೆ ಎಂದು ಹೇಳಬಹುದು. ಮುಂದಿನ ದಿನದಲ್ಲಿ ಸಾರ್ವತ್ರಿಕ ಉಚಿತ ಪ್ರಯಾಣ ಬರಲೂ ಬಹುದಾಗಿದೆ.

ಇತರೆ ವಿಷಯಗಳು:

SSLC ಫಲಿತಾಂಶ ಕೆಲವೇ ಗಂಟೆಗಳಲ್ಲಿ ಪ್ರಕಟ : ಇಲ್ಲಿದೆ ಅಧಿಕೃತ ಜಾಲತಾಣ

7ನೇ ವೇತನ ಆಯೋಗ ಶಿಫಾರಸ್ಸು ಅನ್ವಯ ಸಂಬಳ ಭತ್ಯೆ ಭಾರಿ ಏರಿಕೆ ವರದಿ ನೋಡಿ

Spread the love

Leave a Reply

Your email address will not be published. Required fields are marked *