ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿ ಮಾಡುತ್ತಿದ್ದು ಅದರಲ್ಲಿ ಪ್ರಮುಖ ಯೋಜನೆಯದ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು ಎಲ್ಲಾ ಮಹಿಳೆಯರಿಗೂ ಸಹ ಇದರಿಂದ ಅನೇಕ ಉಪಯೋಗ ಆಗುತ್ತಿದೆ.
ಅದರೊಂದಿಗೆ ಮಹಿಳೆಯರಿಗೆ ಇನ್ನೊಂದು ಹೊಸ ಯೋಜನೆ ಜಾರಿಯಾಗಿದ್ದು ಇದರಿಂದ 800 ಸಿಗಲಿದೆ ಇದರ ಬಗ್ಗೆ ತಿಳಿಯಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಯಾರಿಗೆ ಈ ಹೊಸ ಯೋಜನೆ :
ಮಹಿಳೆಯರಿಗೆ ಆರ್ಥಿಕ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಪ್ರತಿ ತಿಂಗಳು 800 ಹಣವನ್ನು ಮಹಿಳೆಯರ ಖಾತೆಗೆ ನೇರವಾಗಿ ಜಮಾ ಮಾಡಲು ತಿಳಿಸಲಾಗಿದೆ.
ಈ ಯೋಜನೆ ಲಾಭ ಪಡೆಯಬೇಕಾದರೆ ಮಹಿಳೆಯರಿಗೆ 40 ರಿಂದ 64 ವರ್ಷದೊಳಗಾಗಿನವರು ಅವಿವಾಹಿತ ಅಥವಾ ವಿಚ್ಛೇಜಿತ ಮಹಿಳೆಯರಿಗೆ ಸರ್ಕಾರ ಹಣ ನೀಡುತ್ತಿದೆ. ಇದರಿಂದ ಗೃಹಲಕ್ಷ್ಮಿ ಹಣದ ಜೊತೆಗೆ ಈ 800 ಸಹ ಪಡೆದುಕೊಳ್ಳಬಹುದು.
ಇದನ್ನು ಓದಿ : ಇಂದು ಮತ್ತೆ ಕರ್ನಾಟಕ ರಾಜ್ಯದಲ್ಲಿ ಮಳೆ ಆರ್ಭಟ ಶುರು : ಈ ಜಿಲ್ಲೆಯಲ್ಲಿ ಮಾತ್ರ
ಯಾವ ದಾಖಲೆಗಳು ಬೇಕು :
ಈ ಯೋಜನೆಯ ಲಾಭ ನೀವು ಪಡೆದುಕೊಳ್ಳಬೇಕಾದರೆ ಪ್ರಮುಖವಾಗಿ ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇರಬೇಕು ಇದರೊಂದಿಗೆ ಅವ್ಯವಹಿತರಾಗಿದ್ದಲ್ಲಿ ವಿವಾಹ ಆಗಿಲ್ಲವೆಂದು ಅಥವಾ ವಿಚ್ಛೇದನ ಪಡೆದಿದ್ದರೆ ಸ್ವಯಂ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ .ಇದರೊಂದಿಗೆ ನಿಮ್ಮ ಆದಾಯ ಪ್ರಮಾಣ ಪತ್ರ ವಿಳಾಸ ದೃಢೀಕರಣ ಪತ್ರ ವಯಸ್ಸಿನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಎಲ್ಲಿ ಸಲ್ಲಿಸಬೇಕು :
ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಇರುವಂತಹ ಸರ್ಕಾರಿ ಕಚೇರಿಗೆ ಅಥವಾ ಅಟಲ್ ಜಿ ಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಿ. ಯೋಜನೆಯ ಮಾಹಿತಿಯನ್ನು ತಿಳಿದುಕೊಂಡು 40 ರಿಂದ 65 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಲಿಂಕ್ https://bengaluruurban.nic.in/scheme/
ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಈ ಯೋಜನೆಯ ಲಾಭ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಯೋಜನೆಯ ಲಾಭ ಪ್ರತಿ ತಿಂಗಳು ಪಿಂಚಣಿಯಾಗಿ ನಿಮಗೆ ಬರಲಿದೆ.
ಈ ಮೇಲ್ಕಂಡ ಮಾಹಿತಿಯು ಪ್ರಮುಖವಾಗಿ ಮಹಿಳೆಯರಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.
ಈ ಮಾಹಿತಿಯನ್ನು ಆದಷ್ಟು ಎಲ್ಲಾ ಮಹಿಳೆಯರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.