rtgh

ಬರ ಪರಿಹಾರದ ಹಣವನ್ನು ಪಡೆದಂತಹ ರೈತರ ಪಟ್ಟಿ ಬಿಡುಗಡೆ ಮಾಡಲಾಗಿದೆ ಇಲ್ಲಿದೆ ಪಟ್ಟಿ ನೋಡಿ

Release of list of farmers who have received drought relief funds

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವಂತಹ ವಿಷಯ ಏನೆಂದರೆ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆಯಾಗಿರುವುದರ ಬಗ್ಗೆ. ಸದ್ಯ ಇದೀಗ ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ರೈತರಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ.

Release of list of farmers who have received drought relief funds
Release of list of farmers who have received drought relief funds

ಅದರಂತೆ ಬರ ಪರಿಹಾರದ ಹಣವನ್ನು ಪಡೆದಂತಹ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆ ಸಾಕಷ್ಟು ರೈತರು ಇದೀಗ ಬರ ಪರಿಹಾರದ ಎರಡನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದಾರೆ.

ಕರ್ನಾಟಕ ಬರ ಪರಿಹಾರದ ಹಣ ಬಿಡುಗಡೆ :

ಬೆಳೆ ನಷ್ಟ ಪರಿಹಾರವನ್ನು ಕೇಂದ್ರ ಸರ್ಕಾರವು ಕೂಡ ಬಿಡುಗಡೆ ಮಾಡಿದ್ದು ಈ ಮೊದಲೇ 15 ಲಕ್ಷ ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರವು ಮೊದಲನೇ ಹಂತದಲ್ಲಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿದೆ ಅದರಂತೆ ಬರ ಪರಿಹಾರದ ಹಣವನ್ನು ಉಳಿದ ರೈತರಿಗೆ ಬಿಡುಗಡೆ ಮಾಡಲು ಮುಂದಾಗಿದೆ.

ನೀರಾವರಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಬೆಳೆ ಪರಿಹಾರವನ್ನು ಎನ್ಟಿಆರ್‌ಎಫ್ ಮಾರ್ಗ ಸೂಚಿಯ ಪ್ರಕಾರ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ೩೫೪ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವು ಬೆಳಗಿನಷ್ಟ ಪರಿಹಾರವನ್ನಾಗಿ ಕರ್ನಾಟಕಕ್ಕೆ ನೀಡಿದ್ದು ಇದೀಗ ಸದರಿ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಸರ್ಕಾರವು ಜಮಾ ಮಾಡಲು ಮುಂದಾಗಿದೆ. ಚುನಾವಣಾ ಆಯೋಗದ ಒಪ್ಪಿಗೆ ಪಡೆದಿದ್ದು ಮತ್ತು ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣವನ್ನು ಇದೇ ವಾರದಲ್ಲಿ ಬಿಡುಗಡೆ ಮಾಡುವಂತಹ ಸಂಭವ ಹೆಚ್ಚಾಗಿದೆ.

ಇದನ್ನು ಓದಿ : ಬ್ಯಾಂಕ್‌ ಗ್ರಾಹಕರೇ ಇತ್ತ ಕಡೆ ಗಮನಕೊಡಿ.!! ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಹಣ ಕಟ್

ಬೆಳೆ ಪರಿಹಾರದ ಮೊತ್ತ :

ರಾಜ್ಯ ಸರ್ಕಾರವು ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು ಇದೀಗ ಯಾವ ಯಾವ ಬೆಳೆಗೆ ಎಷ್ಟು ಎಷ್ಟು ಹಣವನ್ನು ಬಿಡುಗಡೆ ಮಾಡಲಿದೆ ಎಂಬುದರ ಬಗ್ಗೆ ನೋಡುವುದಾದರೆ.

  1. ನೀರಾವರಿ ಬೆಳೆಗೆ : 17000
  2. ಬಹು ವಾರ್ಷಿಕ ಬೆಳೆಗೆ : 22 ಸಾವಿರ
  3. ಮಳೆ ಆಶ್ರಿತ ಬೆಳೆಗೆ : 8500
    ಹೀಗೆ ರೈತರ ಬ್ಯಾಂಕ್ ಖಾತೆಗೆ ಅವರ ಬೆಳಿಗ್ಗೆ ಅನುಗುಣವಾಗಿ ಹಣವನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡುತ್ತದೆ. ಅದರಂತೆ ರೈತರು ಬರ ಪರಿಹಾರದ ಹಣವನ್ನು ಪಡೆದುಕೊಳ್ಳಬೇಕಾದರೆ ಮೊದಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಬರ ಪರಿಹಾರ ಪಟ್ಟಿಯನ್ನು ಪರಿಶೀಲಿಸುವ ವಿಧಾನ :

ರಾಜ್ಯ ಸರ್ಕಾರ ಈಗಾಗಲೇ ಮೊದಲ ಹಂತದಲ್ಲಿ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ ಅದರಂತೆ ಯಾವ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಯಾರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ ಎಂಬುದರ ಬಗ್ಗೆ ಇದೀಗ ಬರ ಪರಿಹಾರದ ರೈತರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಅದರಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ರೈತರ ಪಟ್ಟಿಯನ್ನು ಪರಿಶೀಲಿಸಲು ಮನೆಯಲ್ಲಿಯೇ ಸುಲಭವಾಗಿ ಮೊಬೈಲ್ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಮೊಬೈಲ್ ಮೂಲಕ ಬರ ಪರಿಹಾರದ ಹಣವನ್ನು ಪರಿಶೀಲಿಸಬೇಕಾದರೆ ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಹೀಗೆ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸುವುದರ ಮೂಲಕ ಬರ ಪರಿಹಾರದ ರೈತರ ಪಟ್ಟಿಯನ್ನು ಪರಿಶೀಲಿಸಬಹುದು.

  1. ಬರ ಪರಿಹಾರದ ಪಟ್ಟಿಯನ್ನು ರೈತರು ಪರಿಶೀಲಿಸಬೇಕಾದರೆ ಮೊದಲು ಪರಿಹಾರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  2. https://parihara.karnataka.gov.in/PariharaPayment/
  3. ಈ ವೆಬ್ ಸೈಟಿಗೆ ಭೇಟಿ ನೀಡಿದ ನಂತರ 2023 ಮತ್ತು 2024ರ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು.
  4. ಅದಾದ ನಂತರ ಋತುವಿನ ಆಯ್ಕೆಯಲ್ಲಿ ಮುಂಗಾರು ಮತ್ತು ವಿಪತ್ತು ಬರ ಎಂದು ಆಯ್ಕೆ ಮಾಡಬೇಕಾಗುತ್ತದೆ.
  5. ಅದಾದ ನಂತರ ತಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  6. ಅದರಲ್ಲಿ ನೀವು ಈ ಪಟ್ಟಿ ಎಂಬುದರ ಮೇಲೆ ನಿಮ್ಮ ಹೆಸರು ಇಲ್ಲದೆ ಇದ್ದರೆ ಗ್ರಾಮ ಲೆಕ್ಕಾಧಿಕಾರಿ ಯನ್ನು ತಕ್ಷಣವೇ ನೀವು ಭೇಟಿ ನೀಡಿ ತಮ್ಮ ಅರ್ಜಿಯ ಬಗ್ಗೆ ವಿಚಾರಿಸಿ ನಿಮಗೆ ಬರ ಪರಿಹಾರದ ಹಣ ವರ್ಗಾವಣೆಯಾಗುತ್ತದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
    ಹೀಗೆ ಬರ ಪರಿಹಾರದ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು ಇದೀಗ ಬರ ಪರಿಹಾರ ಪಡೆದ ರೈತರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ ಅದರಂತೆ ಯಾವೆಲ್ಲ ರೈತರು ಬರ ಪರಿಹಾರದ ಹಣವನ್ನು ಪಡೆದಿದ್ದಾರೆ ಎಂಬುದನ್ನು ಮನೆಯಲ್ಲಿ ಕುಳಿತು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

ಒಟ್ಟಾರೆ ರಾಜ್ಯ ಸರ್ಕಾರವು ಬರಪೀಡಿತ ಪ್ರದೇಶಗಳಲ್ಲಿ ಇರುವಂತಹ ರೈತರಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು ಇದೀಗ ಎಲ್ಲ ರೈತರು ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣವನ್ನು ಮೊದಲ ಹಂತದಲ್ಲಿ ಪಡೆದುಕೊಳ್ಳಬಹುದು.

ಅದರಂತೆ ಮೊದಲ ಹಂತದಲ್ಲಿ ಪಡೆದುಕೊಂಡಂತಹ ಬರ ಪರಿಹಾರದ ಹಣವನ್ನು ರೈತರು ಇದೀಗ ಎರಡನೇ ಹಂತದ ಬರ ಪರಿಹಾರದ ಹಣ ಯಾವಾಗ ವರ್ಗಾವಣೆ ಆಗುತ್ತದೆ ಎಂಬುದನ್ನು ಕಾಯುತ್ತಿದ್ದಾರೆ ಅದರಂತೆ ಏನು ರಾಜ್ಯ ಸರ್ಕಾರವು ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದನ್ನು ಕಾದು ನೀಡಬೇಕಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *