rtgh

ರೈತರಿಗೆ 3 ಲಕ್ಷ ಹಣ ಇದೊಂದು ಕಾರ್ಡ್ ಇದ್ದಾರೆ ಸಾಕು : ಅನೇಕ ಅನುಕೂಲ ಸಿಗಲಿದೆ

3 lakhs is enough for farmers to have this card

ನಮಸ್ಕಾರ ಸ್ನೇಹಿತರೆ ಕಿಶನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ 18 ರಿಂದ 70 ವರ್ಷದ ವಯಸ್ಸಿನ ನಡುವೆ ಇರುವಂತಹ ಕೃಷಿಕರು ಸಾಲವನ್ನು ಪಡೆಯಬಹುದಾಗಿದೆ.

3 lakhs is enough for farmers to have this card
3 lakhs is enough for farmers to have this card

ನಮ್ಮ ಭಾರತ ದೇಶದ ಬೆನ್ನೆಲುಬು ರೈತ ರಾಗಿದ್ದಾರೆ ಅವರು ಸುಖವಾಗಿ ಚೆನ್ನಾಗಿದ್ದರೆ ನಮ್ಮ ದೇಶ ಚೆನ್ನಾಗಿರುತ್ತದೆ ಎಂದರ್ಥ ತಮ್ಮ ಕೃಷಿ ಚಟುವಟಿಕೆಗಳಿಗೆ ಈ ರೈತರಿಗೆ ಇದೀಗ ಬೇಕಾಗಿರುವಂತಹ ಟ್ರ್ಯಾಕ್ಟರ್ ಗೊಬ್ಬರ ಪಂಪ್ಸೆಟ್ ಸೇರಿದಂತೆ ಕೃಷಿ ಉಪಕರಣಗಳನ್ನು ಖರೀದಿ ಮಾಡುವುದಕ್ಕಾಗಿ ಆಗಾಗ ಹಣ ಬೇಕಾಗಿರುತ್ತದೆ.

ಈ ಕಾರ್ಡ್ ಅನ್ನು ಸರ್ಕಾರದಿಂದ ಹೊಂದಿದ್ದರೆ 3 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ರೈತರು ಪಡೆಯಬಹುದಾಗಿದೆ. ಹಾಗಾದರೆ ಸರ್ಕಾರದ ಯಾವ ಕಾರ್ಡ್ ಮೂಲಕ ರೈತರು ಮೂರು ಲಕ್ಷ ಸಾಲ ಪಡೆಯಬಹುದು ಈ ಕಾರ್ಡ್ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ :

ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಅದರಿಂದಾಗಿ ತಾವು ಮಾಡುವಂತಹ ಕೃಷಿ ಕೆಲಸದಲ್ಲಿ ರೈತರು ಬೇಕಾಗಿರುವಂತಹ ಹಣವನ್ನು ಅತ್ಯಂತ ಕಡಿಮೆ ಅಥವಾ ಬಡ್ಡಿ ರಹಿತ ಸಾಲದ ಮೂಲಕ ಪಡೆದುಕೊಳ್ಳಲು ಸುಲಭವಾಗುತ್ತದೆ.

ಇದೀಗ ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಯೋಜನೆಯ ಮೂಲಕ 3 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ರೈತರು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪಡೆಯಬಹುದಾಗಿದೆ. ಹಾಗಾದರೆ 3,00,000 ಸಾಲವನ್ನು ಪಡೆಯಬೇಕಾದರೆ ರೈತರು ಏನಿಲ್ಲಾ, ಅರ್ಹತೆಗಳನ್ನು ಹೊಂದಿರಬೇಕೆಂದು ನೋಡುವುದಾದರೆ.

ಇದನ್ನು ಓದಿ : ಸರ್ಕಾರದಿಂದ ವಾಹನ ಖರೀದಿಗೆ 10,000 ಹಣ : ಎಲ್ಲ ವರ್ಗದ ಜನರು ಪಡೆದುಕೊಳ್ಳಿ

ಸಾಲವನ್ನು ಪಡೆಯಲು ಬೇಕಾದ ಅರ್ಹತೆಗಳು :

ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ರೈತರು ಸಾಲವನ್ನು ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು.

  1. ಈ ಸಾಲವನ್ನು ಸ್ಥಿರವಾಗಿರುವಂತಹ ಆದಾಯದ ಮೂಲ ಹೊಂದಿರುವ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಮೂರು ಲಕ್ಷ ರೂಪಾಯಿಗಳ ಸಾಲವನ್ನು ಪಡೆಯಬಹುದು.
  2. ಈ ಯೋಜನೆಯ ಅಡಿಯಲ್ಲಿ ಕನಿಷ್ಠ ಒಂದು ಎಕರೆಯಿಂದ ಪ್ರಾರಂಭಿಸಿ ಗರಿಷ್ಠ 10 ಎಕರೆಯವರಿಗೆ ಭೂಮಿಯನ್ನು ಹೊಂದಿರುವಂತಹ ರೈತರು ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  3. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ 18 ರಿಂದ 70 ವರ್ಷ ವಯಸ್ಸಿನ ನಡುವೆ ಇರುವಂತಹ ಕೃಷಿಕರು ಸಾಲವನ್ನು ಪಡೆಯಬಹುದು.

ಯೋಜನೆಗೆ ಬೇಕಾಗುವ ದಾಖಲೆಗಳು :

ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ರೈತರು ಸಾಲವನ್ನು ಪಡೆಯಬೇಕಾದರೆ ಬೇಕಾಗಿರುವಂತಹ ದಾಖಲೆಗಳು ಯಾವುವೆಂದರೆ,

  1. ಪಹಣಿ ಪತ್ರದ ಜೊತೆಗೆ ರೈತರು ಆಧಾರ್ ಕಾರ್ಡನ್ನು ಒದಗಿಸಬೇಕು.
  2. ಇದರ ಜೊತೆಗೆ ಆದಾಯ ಪ್ರಮಾಣ ಪತ್ರವನ್ನು ಕೂಡ ನೀಡಬೇಕಾಗುತ್ತದೆ
  3. ವೋಟರ್ ಐಡಿ
    ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಕಾರ್ಡನ್ನು ಪಡೆಯಲು ಹೊಂದಿರಬೇಕು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಮುಖ ಅಂಶಗಳು :

ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಅದರಲ್ಲಿ ಇರುವಂತಹ ಕೆಲವೊಂದು ಅಂಶಗಳನ್ನು ರೈತರು ತಿಳಿದುಕೊಂಡ ನಂತರವೇ ಈ ಯೋಜನೆಗೆ ಅರ್ಜಿ ಸಲ್ಲಿಸಿ 3 ಲಕ್ಷ ಸಾಲವನ್ನು ಪಡೆಯಬಹುದಾಗಿದೆ.

  1. ಮೂರು ವರ್ಷಗಳ ಅವಧಿಗಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ನಬಾರ್ಡ್ ಈ ಯೋಜನೆಯನ್ನು ಜಾರಿಗೆ ತಂದಿದ್ದು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಮತ್ತು ಮೇಕೆ ಸಾಕಾಣಿಕೆ ಸೇರಿದಂತೆ, ಈ ರೀತಿಯಾದಂತಹ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವಂತಹ ರೈತರಿಗೆ ಈ ಯೋಜನೆಯ ಅಡಿಯಲ್ಲಿ ಎರಡನೇ ಅವಧಿಯ ಸಾಲವನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ.
  2. ನಾಲ್ಕು ಪ್ರತಿಶತ ಬಡ್ಡಿ ದರದಲ್ಲಿ ಕಿಸನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಸಾಲ ಪಡೆಯಬಹುದು.
  3. ಆದರೆ ಪ್ರತಿಯೊಂದು ಬ್ಯಾಂಕುಗಳಿಂದ ಇನ್ನೊಂದು ಬ್ಯಾಂಕಿಗೆ ಬಡ್ಡಿಯ ದರದಲ್ಲಿ ಹಾಗೂ ಸಾಲದ ಮೊತ್ತದಲ್ಲಿ ಕೆಲವೊಂದು ಬಾರಿ ವ್ಯತ್ಯಾಸವನ್ನು ಕಾಣಬಹುದಾಗಿದೆ.
  4. 3 ಲಕ್ಷ ರೂಪಾಯಿಗಳ ಸಾಲಕ್ಕೆ ನಾಲ್ಕರಿಂದ ಐದು ವರ್ಷಗಳವರೆಗೆ ಎರಡು ಪ್ರತಿಶತ ಬಡ್ಡಿ ದರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಧಿಸಲಾಗುತ್ತದೆ.
  5. ನಾಲ್ಕರಿಂದ ಐದು ವರ್ಷಗಳ ಅವಧಿಗೆ 3 ಲಕ್ಷ ರೂಪಾಯಿಗಳ ಸಾಲವನ್ನು ರೈತರು ಪಡೆಯಬೇಕಾದರೆ ಹೆಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ 9 ಪ್ರತಿಶತ ಬಡ್ಡಿ ದರದಲ್ಲಿ ಪಡೆಯಬಹುದು.
  6. ಐದು ವರ್ಷಗಳ ಅವಧಿಗೆ 8.55 ಪ್ರತಿಶತ ಬಡ್ಡಿ ದರದಲ್ಲಿ ಆಕ್ಸಿಸ್ ಬ್ಯಾಂಕ್ ನಲ್ಲಿ 2.50 ಲಕ್ಷ ರೂಪಾಯಿಗಳ ಸಾಲವನ್ನು ಪಡೆಯಬಹುದಾಗಿದೆ.
    ಹೀಗೆ ಕಿಶನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಸಾಲವನ್ನು ಪಡೆಯಬೇಕಾದರೆ ಬ್ಯಾಂಕಿಗೆ ಅನುಗುಣವಾಗಿ ಯಾವ ಬ್ಯಾಂಕಿನಲ್ಲಿ ಅತಿ ಕಡಿಮೆ ಬಡ್ಡೆ ದರದಲ್ಲಿ ನಿಮಗೆ ಸಾಲ ಸೌಲಭ್ಯ ಸಿಗುತ್ತದೆ ಎಂಬುದನ್ನು ತಿಳಿದುಕೊಂಡ ನಂತರವೇ ಅರ್ಜಿಯನ್ನು ಸಲ್ಲಿಸುವುದು ಉತ್ತಮ.

ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ 3 ಲಕ್ಷ ರೂಪಾಯಿಗಳವರೆಗೆ ರೈತರು ಸಾಲವನ್ನು ಪಡೆದು ತಮ್ಮ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂಥ ಎಲ್ಲ ಉಪಕರಣಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಅನೇಕ ರೀತಿಯಾದಂತಹ ಸಾಲ ಯೋಜನೆಗಳು ಹಾಗೂ ಸರ್ಕಾರದಿಂದ ಸಿಗುವಂತಹ ಸಹಾಯಧನವನ್ನು ರೈತರು ಪಡೆಯುವ ಮೂಲಕ ತಮ್ಮ ಕೃಷಿ ಚಟುವಟಿಕೆಗಳನ್ನು ಸುಲಭವಾಗಿ ಮಾಡಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬ ರೈತರಿಗೂ ಶೇರ್ ಮಾಡಿದ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *