ನಮಸ್ಕಾರ ಸ್ನೇಹಿತರೆ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಕಳೆದ ಏಳು ತಿಂಗಳಿನಿಂದ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಸಾಕಷ್ಟು ಯೋಜನೆಗಳನ್ನು ರೈತರ ಪರವಾಗಿ ಜಾರಿಗೆ ತಂದಿದೆ. ಅದರಲ್ಲಿಯು ಮುಖ್ಯವಾಗಿ 5 ಗ್ಯಾರಂಟಿ ಯೋಜನೆಗಳು ಜನರ ಮೆಚ್ಚುಗೆಯನ್ನು ಪಡೆದುಕೊಂಡಿವೆ.
ಅವುಗಳೆಂದರೆ ಗೃಹಲಕ್ಷ್ಮಿ ಯೋಜನೆ ಅನ್ನ ಭಾಗ್ಯ ಯೋಜನೆ ಗೃಹಜೋತಿ ಯೋಜನೆ, ಶಕ್ತಿ ಯೋಜನೆ ಹಾಗೂ ಯುವ ನಿಧಿ ಯೋಜನೆ ಯಾವ ಪುಟ್ಟ ಮಗುವಿನ ಬಳಿ ಕೇಳಿದರು ಕೂಡ ಯೋಜನೆಗಳು ಹೇಳುವಷ್ಟು ಫೇಮಸ್ ಆಗಿದೆ ಎಂದು ಹೇಳಬಹುದು.
Contents
ಕರ್ನಾಟಕ ಮಾತ್ರವಲ್ಲದೆ ತೆಲಂಗಾಣದಲ್ಲಿಯೂ ಗ್ಯಾರಂಟಿ ಯೋಜನೆ :
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಉಚಿತ ಗ್ಯಾರಂಟಿ ಯೋಜನೆಗಳು ತೆಲಂಗಾಣ ರಾಜ್ಯದಲ್ಲಿಯೂ ಕೂಡ ಕರ್ನಾಟಕ ಉಚಿತ ಗ್ಯಾರಂಟಿ ಯೋಜನೆಗಳ ಮಾದರಿಯನ್ನು ಅನುಸರಿಸಿ ಕಾಂಗ್ರೆಸ್ ಪಕ್ಷವು ಅಳವಡಿಸಿಕೊಂಡಿ ಈ ಹಿಂದಿನ ವಿಧಾನಸಭಾ ಎಲೆಕ್ಷನ್ ಸಂದರ್ಭದಲ್ಲಿ ಅಧಿಕಾರಕ್ಕೆ ಬರಲು ತೆಲಂಗಾಣದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು.
ಕಾಂಗ್ರೆಸ್ ಸರ್ಕಾರ ಇದೇ ಕಾರಣಕ್ಕಾಗಿ ಇಂದು ತೆಲಂಗಾಣದಲ್ಲಿ ಅಧಿಕಾರ ನಡೆಸುತ್ತಿದೆ. ಬಹಳ ಮುಖ್ಯವಾಗಿ ತೆಲಂಗಾಣ ಸರ್ಕಾರವು ಕೆಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು ಅದರಲ್ಲಿ ಕೇವಲ ಐನೂರು ರೂಪಾಯಿಗಳಿಗೆ ಗ್ಯಾಸ ಸಿಲಿಂಡರ್ ಹಾಗೂ ಉಚಿತ ವಿದ್ಯುತ್ ವಿತರಣೆ ಮಾಡುವ ಯೋಜನೆಗಳು ಕೂಡ ಸೇರಿವೆ.
ಇದನ್ನು ಓದಿ : ಮಹಿಳೆಯರಿಗೆ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆಯ ಹಣ : ನಿಮ್ಮ ಹೆಸರು ಈ ಪಟ್ಟಿಯಲ್ಲಿದೆ ತಿಳಿದುಕೊಳ್ಳಿ !
ತೆಲಂಗಾಣದಲ್ಲಿ ಕೇವಲ 500 ರೂಪಾಯಿ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ವಿದ್ಯುತ್ ಸೌಲಭ್ಯ :
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಈ ಗ್ಯಾರಂಟಿ ಯೋಜನೆಗಳನ್ನು ತೆಲಂಗಾಣದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದರು.
ಇದೀಗ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಜೊತೆಗೆ ಬಡವರಿಗೆ 500 ಗಳಿಗೆ ಗ್ಯಾಸ್ ಸಿಲಿಂಡರ್ ಹಾಗೂ ಇನ್ನೂರು ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಗೆ 27 ಫೆಬ್ರವರಿ 2024 ರಂದು ತೆಲಂಗಾಣ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.
ಒಟ್ಟರೆ ಕರ್ನಾಟಕದಲ್ಲಿ ಘೋಷಣೆಯಾಗಿರುವ ಇದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ರಾಜ್ಯದಲ್ಲಿ ಮುನ್ನಡೆಯುತ್ತಿದೆ ಅದರಂತೆ ತೆಲಂಗಾಣ ರಾಜ್ಯದಲ್ಲಿಯೂ ಕೂಡ ಇದೀಗ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು .
ತೆಲಂಗಾಣ ರಾಜ್ಯದಲ್ಲಿ ಈಗ ಗ್ಯಾರಂಟಿ ಯೋಜನೆಗಳು ಎಷ್ಟು ಯಶಸ್ವಿಯಾಗಿ ನಡೆಯಲಿದೆ ಎಂಬುದನ್ನು ನೋಡಬೇಕು ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಕರ್ನಾಟಕ ಮಾತ್ರವಲ್ಲದೆ ತೆಲಂಗಾಣದಲ್ಲಿಯೂ ಕೂಡ ಗ್ಯಾರಂಟಿ ಯೋಜನೆಗಳು ಘೋಷಣೆಯಾಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.