ಬಿಸಿಲಿನ ಝಳಕ್ಕೆ ಬರಗಾಲದ ಛಾಯೆ ಉಂಟಾಗಿದೆ. ಎಲ್ಲಿ ನೋಡಿದರೂ ನೀರಿಗೆ ಅಭಾವ ಸೃಷ್ಟಿ ಆಗಿದೆ. ಮಳೆ ಬಂದು ಭೂಮಿ ತಂಪುಮಾಡಬೇಕೇ ಹೊರತು ಬೇರೆ ಯಾವ ದಾರಿಯೂ ಇಲ್ಲ ಈ ಬಿಸಿಲಿನಿಂದ ಪಾರಾಗಲು.
ಮುಂಗಾರಿನ ತನಕ ಕಾಯಬೇಕು ಎನ್ನುವ ಅಗತ್ಯ ಇಲ್ಲ ಯುಗಾದಿ ಹಬ್ಬಕ್ಕೆ ಹೊಸ ವರ್ಷದ ಹೊಸ ಮೆರಗು ನೀಡಲು ಮಳೆರಾಯ ಸ್ವಾಗತ ನೀಡುವನು ಎಂದು ಹವಾಮಾನ ಇಲಾಖೆಯು ವರದಿ ಮಾಡಿದೆ ಈ ಬಿಸಿಲಿನ ಬಿರು ತಾಪಕ್ಕೆ ಎಷ್ಟೇ ನೀರು ಸೇವನೆ ಮಾಡಿದರು ಸಹ ದಣಿವು ತೀರುತ್ತಿಲ್ಲ .ಬಿಸಿಲು ಎಷ್ಟಿದೆ ಎಂದರೆ ಟಾರ್ ರೋಡ್ ಮೇಲೆ ಒಂದು ಬಾರಿ ಕಾಲು ಇಟ್ಟರೆ ಬೆಂದು ಬೊಬ್ಬೆ ಬರುವಷ್ಟು ಸುಡುತ್ತಿದೆ ನೆಲ.
7 ದಿನ ಮಳೆಯಾಗುವ ಸಾಧ್ಯತೆ ತಿಳಿಸಿದೆ.
ಯುಗಾದಿ ಹಬ್ಬ ಮುಗಿದ ನಂತರ ಉತ್ತರ ಒಳನಾಡಿನ ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ ,ಕೊಪ್ಪಳ, ಕಲಬುರ್ಗಿ, ರಾಯಚೂರು, ಜಿಲ್ಲೆಗಳಲ್ಲಿ ಬಿಸಿ ಗಾಳಿ ಇರಲಿದೆ ಆದರೆ ಅದೇ ದಿನಗಳಲ್ಲಿ ಅಂದು ಕೊಡಗು ,ಚಿಕ್ಕಮಗಳೂರು, ಮತ್ತು ಮಂಡ್ಯ ಜಿಲ್ಲೆಗಳ ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಮಾವಾಸ್ಯೆ ಮುಗಿದ ನಂತರ ಕೊಡಗು, ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಮೊದಲೇ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.
ಮಳೆರಾಯ ಭೂಮಿಗೆ ಧರೆಗಿಳಿದು ಧಗೆಯನ್ನು ತಂಪು ಮಾಡುವನೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ. ಮುಂಗಾರು ಬರುವ ಮುನ್ನ ಮಳೆ ಬೆಳೆಗೆ ಯಾವ ಉಪಯೋಗ ನೀಡದೆ ಇದ್ದರು ಒಣಗಿ ಬಿಸಿಲಿಗೆ ನಿಂತಿರುವ ಭೂಮಿ ತಾಯಿ ಒಡಲನ್ನು ತಂಪು ಮಾಡಬಹುದು.